ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !

ಪುಣೆ ಮೂಲದ ಅಬ್ಬೀಫಿಲ್ ಎಂಬ ಶಂಕಾಸ್ಪದ ಸಂಸ್ಥೆಯ ಜೊತೆ ಸೇರಿಕೊಂಡು, ತನ್ನ ಹೆಂಡತಿ ಮಗನ ಹೆಸರಿನಲ್ಲಿ ಎಲೈಟ್ ಎಂಟರ್‌ಪ್ರೈಸಸ್ ಅನ್ನೋ ಪಾರ್ಟನರ್‌ಶಿಪ್ (ತಾಯಿ ಮಗನ ನಡುವೆ ಬ್ಯುಸಿನೆಸ್ ಪಾರ್ಟ್‌ನರ್‌ಶಿಪ್!) ಸಂಸ್ಥೆಗೆ ಗುಣಮಟ್ಟ ಖಾತ್ರಿಯಿಲ್ಲದ ಕಂಪ್ಯೂಟರ್ ಪ್ರಿಂಟರ್ ರಿಫಿಲ್ ಕಾರ್ಟ್‌ರಿಜ್‌ಗಳ ರಾಜ್ಯವ್ಯಾಪ್ತಿಯ ಮಾಸ್ಟರ್ ಫ್ರಾಂಚೈಸ್ ಪಡೆದುಕೊಂಡಿದ್ದ ಮನೋಹರ ಮಸ್ಕಿ ಈಗ ಈ ಸುದ್ದಿ ಕೇಳಿ ಏನು ಕ್ರಮ ತೆಗೆದುಕೊಳ್ಳುತ್ತಾನೆ ಎಂಬುದು ಕುತೂಹಲಕರವಾಗಿದೆ.
ಅಬ್ಬೀಫಿಲ್ ಹೆಸರಿನ ಹಲವು ಸಂಸ್ಥೆಗಳನ್ನು ನಡೆಸುತ್ತಿದ್ದ ಬದ್ರಿನಾರಾಯಣ್ ಬಿ ಸೋಮಾನಿ ಎಂಬಾತನ ಹಲವು ಆರ್ಥಿಕ ಅವ್ಯವಹಾರದ ಪ್ರಕರಣಗಳು ಸರ್ಕಾರಿ ಮೂಲಗಳಿಂದಲೇ ಪತ್ತೆಯಾಗಿವೆ.

ಮೊದಲನೆಯದಾಗಿ, ಕೆಲವೇ ನಿರ್ದಿಷ್ಟ ವ್ಯಕ್ತಿಗಳಿಗೆ ಮತ್ತು ಸಂಸ್ಥೆಯ ಪ್ರವರ್ತಕರಿಗೇ ಸೆಬಿ ನಿಯಮಾವಳಿಗಳನ್ನು ಉಲ್ಲಂಘಿಸಿ ಶೇರುಗಳನ್ನು ಅಲಾಟ್ ಮಾಡಿದ ಬಗ್ಗೆ ನ್ಯಾಯಾಧಿಕರಣ ಪ್ರಕ್ರಿಯೆ ನಡೆಸುವಂತೆ ಸೆಕ್ಯೂರಿಟೀಸ್ ಎಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಯ ಪೂರ್ಣಕಾಲಿಕ ಸದಸ್ಯ ಟಿ ಎಂ ನಾಗರಾಜನ್‌ರವರು ೨೦೦೪ರ ಜುಲೈ ತಿಂಗಳಿನಲ್ಲೇ ಆದೇಶ ಹೊರಡಿಸಿದ್ದರು. ಅದರ ಸಂಕ್ಷಿಪ್ತ ಭಾಗ ಇಲ್ಲಿದೆ:

SECURITIES AND EXCHANGE BOARD OF INDIA

ORDER

IN THE MATTER OF PREFERENTIAL ALLOTMENT OF SHARES OF ABEE INFO-CONSUMABLES LTD TO A SELECT GROUP OF PERSONS INCLUDING THE PROMOTERS AND APPLICABILITY OF REGULATION 11(1) OF THE SEBI (SUBSTANTIAL ACQUISITION OF SHARES AND TAKEOVERS) REGULATIONS, 1997

WTMN/49/CFD/ 7 /04

6.0 ORDER

6.1   In view of the findings made above and in exercise of the powers conferred upon me under Section 19 of SEBI Act 1992 read with regulations 44 and 45 of the said Regulations, I direct that adjudication proceedings be initiated against the Acquirers for not having made full disclosures as required under the then provisions of Regulation 3(1)(c) and for delay in filing the report in terms of Regulation 3(4) of the said Regulations. The Acquirers may make their submissions before the Adjudicating Officer, who shall consider the same on merits and pass appropriate order in accordance with law. Order appointing the Adjudicating Officer will be issued separately.

 This order shall come into force with immediate effect. 
  
  

Date : 02.07.2004                T.M.NAGARAJAN
Place : MUMBAI                   WHOLE TIME MEMBER

 

 

 

ಎರಡನೆಯದಾಗಿ, ಇದೇ ವಿಷಯದ ಮೇಲೆ ನಡೆದ ವಿಚಾರಣೆಯ ತರುವಾಯ ಸಂಸ್ಥೆಯ ಮೇಲೆ ೪೦ ಸಾವಿರ ರೂ.ಗಳ ದಂಡಶುಲ್ಕವನ್ನು ವಿಧಿಸಲಾಗಿದೆ. ಇದು ನಡೆದಿದ್ದು ೨೦೦೫ರ ಅಕ್ಟೋಬರ್ ೨೭ರಂದು.

ಮೂರನೇದಾಗಿ, ಪುಣೆಯಲ್ಲಿರುವ ರಿಜಿಸ್ಟ್ರಾರ್ ಆಫ್ ಕಂಪನೀಸ್‌ರವರು ವಾಚೌಟ್ ಇನ್ವೆಸ್ಟರ್ಸ್ ವೆಬ್‌ಸೈಟಿಗೆ (ಇದು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್) ನೀಡಿದ ಮಾಹಿತಿಯಂತೆ, ಶಾಸನದ ಅಗತ್ಯದಂತೆ ಸೂಕ್ತವಾಗಿ ಮಾಹಿತಿಗಳನ್ನು, ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ ಎಂದು ಅಬ್ಬೀ ಇನ್‌ಫೋ ಕನ್ಸೂಮಬಲ್ಸ್ ಲಿಮಿಟೆಡ್ ಮತ್ತು ಅಬ್ಬೀಸಾಫ್ಟ್ ಟೆಕ್ನಾಲಜೀಸ್ ಲಿಮಿಟೆಡ್ – ಎಂಬ ಒಂದೇ (ಬಿ ಬಿ ಸೋಮಾನಿ) ಒಡೆತನದ ಸಂಸ್ಥೆಗಳನ್ನು ನ್ಯಾಯಾಲಯವೇ ಹೆಸರಿಸಿದೆ.

ವಾಚೌಟ್ ಇನ್ವೆಸ್ಟರ್ಸ್ ಡಾಟ್ ಕಾಮ್‌ನಲ್ಲಿ ಎಂಥ ಮಾಹಿತಿಗಳಿವೆ ಎಂದು ಆ ವೆಬ್‌ಸೈಟಿನಲ್ಲೇ ಈ ಕೆಳಗಿನಂತೆ ಪ್ರಕಟಿಸಲಾಗಿದೆ:

watchoutinvestors.com is a national web-based registry covering entities including companies, intermediaries and individuals who
  have been indicted for an economic default and/or  
  have been non-compliant of laws/guidelines and/or  
  are no longer in the specified activity.

ಈ ಅಂತಿಮ ಆದೇಶ ಬಂದಿದ್ದು ಇದೇ ೨೦೧೦ರ ಫೆಬ್ರುವರಿ ತಿಂಗಳಿನಲ್ಲಿ ಎಂಬುದು ಗಮನಾರ್ಹ. ಯಾಕೆಂದರೆ ಹಲವು ತಿಂಗಳುಗಳ ಹಿಂದಿನಿಂದಲೇ ಮನೋಹರ ಮಸ್ಕಿಯು ಈ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆ. ಪುಣೆಯ ಆರ್ ಓ ಸಿಯವರು ಕೊಟ್ಟ ಈ ಮಾಹಿತಿಯನ್ನು ಓದಿ:

  ABEE INFO-CONSUMABLES LTD. (Old Name : ABEE PRINTER RIBBONS LTD.)(Old Name : SOMANI PRINTER RIBBONS LTD.)    
  DIRECTORS

 

MCA  DEFAULT IN FILING ANNUAL RETURNS (SECTION 159)DEFAULT IN FILING OF COPIES OF BALANCE SHEET, ETC. WITH THE REGISTRAR (SECTION 220)  PROSECUTION UNDER SECTION 162 & SECTION 220(3) OF COMPANIES ACT: PENALTY IMPOSED RS.5000 5 ACCUSED DIRECTORS CONVICTED AGAINST 2 DIRECTORS CASE IS PENDING  
  ABEESOFT TECHNOLOGIES LTD.     
  DIRECTORS

 

MCA  DEFAULT IN FILING ANNUAL RETURNS (SECTION 159)DEFAULT IN FILING OF COPIES OF BALANCE SHEET, ETC. WITH THE REGISTRAR (SECTION 220)  PROSECUTION UNDER SECTION 162 & SECTION 220(3) OF COMPANIES ACT: PENALTY IMPOSED RS.4000 ACCUSED DIRECTORS CONVICTED  

ಇದಕ್ಕಿಂತ ಇನ್ನೊಂದು ವಿಚಿತ್ರ ಎಂದರೆ ಅಬ್ಬೀ ಇನ್‌ಫೋ ಕನ್ಸೂಮಬಲ್ಸ್ ಜೊತೆಗೇ ಎಷ್ಟೋ ಹೆಸರುಗಳ ಸಂಸ್ಥೆಗಳು ಸೋಮಾನಿ ಒಡೆತನದಲ್ಲಿವೆ. ಮೊದಲು abee ಹೆಸರಿನಲ್ಲಿ ಇದ್ದ ಸಂಸ್ಥೆಯನ್ನು ಆಮೇಲೆ abbee ಎಂದು ಬದಲಿಸಲಾಗಿದೆ. ನನಗೆ ಸಿಕ್ಕಿದ ಅಬೀ ಇನ್‌ಫೋ ಕನ್ಸೂಮಬಲ್ಸ್ ಲಿಮಿಟೆಡ್ ಸಂಸ್ಥೆಯ (ಅಬ್ಬೀ ಅಲ್ಲ;  ಅಬೀಯಲ್ಲಿ ಒಂದೇ b ಇದೆ. ) ತಾಜಾ ಹಣಕಾಸು ವಿವರಗಳು ಹೀಗಿವೆ (ಇವು ೨೦೦೯ರ ಮಾರ್ಚ್ ತಿಂಗಳಿನ ಕೊನೆಯಲ್ಲಿ ಇದ್ದಂತೆ ಎಂದು ಸಂಸ್ಥೆಯೇ ಹೇಳಿದೆ)

 

ಅಂದರೆ ಗಮನಿಸಿ: ಅಬ್ಬೀ (ಎರಡು ಬಿ ಇರುವ ಹೆಸರಿನದು) ಇನ್ಫೋ ಕನ್ಸೂಮಬಲ್ಸ್ ಎಂಡ್ ಪೆರಿಫೆರಲ್ಸ್ ಶ್ಶಾಪಿ (ಶಾಪಿಯಲ್ಲಿ ಮೊದಲು ಎರಡು s, ಎರಡು p (sShoppe) ಬರುತ್ತದೆ; ಅಬ್ಬೀಯಲ್ಲಿ ಎರಡು b ಮತ್ತು ಎರಡು e ಇದ್ದೇ ಇವೆ ಹುಷಾರ್…. !)  ಸಂಸ್ಥೆಯ ಹಣಕಾಸು ವಿವರ ನಿಮಗೆ ಅವರ ವೆಬ್‌ಸೈಟ್ ಮೂಲಕ ಸಿಗುವುದೇ ಇಲ್ಲ.! ಯಾಕಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದ ನನಗೆ ಈಗ ಪುಣೆಯ ಕಂಪನಿ ರಿಜಿಸ್ಟ್ರಾರ್‌ರವರು ನೀಡಿದ ಹೇಳಿಕೆ ನೋಡಿಯೇ ಅರ್ಥವಾಗಿದ್ದು…. ಇದೆಲ್ಲ ಹೀಗೂ ಇರಬಹುದು ಎಂದು!! ಅಬೀಯ ಲೋಗೋವೇ ಬೇರೆ, ಅಬ್ಬೀಯ ಲೋಗೋವೇ ಬೇರೆ. ಆಮೇಲೆ ಅಬ್ಬೀ ಸಾಫ್ಟ್ ಟೆಕ್ನಾಲಜೀಸ್ ಅನ್ನೋ ಇನ್ನೊಂದು ಸಂಸ್ಥೆಯಿದೆ.

ಈ ಗೊಂದಲ ಯಾಕೆ ನಿಮ್ಮ ತಲೆಗೆ ಹಚ್ಚೋದಕ್ಕೆ ಹೊರಟಿದ್ದೇನೆಂದರೆ, ಇಂಥ ಕಂಪೆನಿಗಳು ಹ್ಯಾಗೆ ಹೆಸರು ಬದಲಿಸಿಕೊಳ್ತಾವೆ ಎಂದು ಇದೇ ವಾಚೌಟ್ ಇನ್ವೆಸ್ಟರ್ಸ್ ವೆಬ್‌ಸೈಟಿನಲ್ಲಿ ಇದೇ ಸೋಮಾನಿ ಕುರಿತಂತೆ ಹೀಗೆ ಬರೆದಿದೆ: (ಇದರಿಂದ ನಿಮ್ಮ ಗೊಂದಲ ಹೆಚ್ಚಾದರೆ ದಯಮಾಡಿ ಮನ್ನಿಸಿರಿ)

NAME CHANGE – HISTORY  
SOMANI PRINTER RIBBONS LTD.
CHANGED TO      
ABEE PRINTER RIBBONS LTD.
CHANGED TO
      
ABEE INFO-CONSUMABLES LTD.

ಅಂದರೆ ಅಬೀಫಿಲ್ ಎಂಬ ಸಂಸ್ಥೆಯು ೨೦೦೯ರ ಮಾರ್ಚ್ ತಿಂಗಳ ಕೊನೆಯಲ್ಲಿ ೨೪.೧೮ ಲಕ್ಷ ರೂ.ಗಳ ನಷ್ಟ ಅನುಭವಿಸಿದೆ! ಪಾಪ, ಇಂಥ ಸಂಸ್ಥೆಗೇ ಮನೋಹರ ಮಸ್ಕಿಯು ಸುಮಾರು ಲಕ್ಷ ರೂ.ಗಳನ್ನು ಫ್ರಾಂಚೈಸಿ ಶುಲ್ಕ ಎಂದು ಕಟ್ಟಿದ್ದಾನಲ್ಲದೆ, ತನ್ನ ಮನೆಯ ಕ್ಯಾಂಪಸ್ಸಿನಲ್ಲೇ ಅಬ್ಬೀಫಿಲ್‌ನ ನೂತನ ವಿನ್ಯಾಸಿತ ಕಚೇರಿಯನ್ನೂ ತೆರೆದಿದ್ದಾನೆ. ಸಾಕಷ್ಟು ಸಿಬ್ಬಂದಿಗಳನ್ನೂ ನೇಮಕ ಮಾಡಿಕೊಂಡಿದ್ದಾನೆ.

ಈ ಸುದ್ದಿಯನ್ನು ಬರೆದಿದ್ದರಿಂದ ಮಸ್ಕಿಗೆ ಜ್ಞಾನೋದಯವಾಗಿ ಈ ವ್ಯವಹಾರದಿಂದ ಹೊರಗೆ ಬರಬಹುದು. ಅದಕ್ಕೆ ಅವನು ನನಗೇ ಥ್ಯಾಂಕ್ಸ್ ಹೇಳಬೇಕಾದ ದುರ್ಭರ ಪರಿಸ್ಥಿತಿ ಅವನಿಗೆ ಒದಗಿದೆ. ಈ ರಿಫಿಲ್ ವ್ಯವಹಾರವೇ ಒಂದು ಶಂಕಾಸ್ಪದ ದಂಧೆ. ಇದರಲ್ಲಿರೋ ಲಾಭದ ಮಾರ್ಜಿನ್‌ನ ಮುಖ ನೋಡಿಯೇ ಈ ವ್ಯವಹಾರಕ್ಕೆ ಮಸ್ಕಿ ಇಳಿದಿದ್ದು ಎಂಬುದು ಸರ್ವವಿದಿತ. ಅಕಸ್ಮಾತ್ ಅವನಿಗೆ ಏನಾದರೂ ಆಗಿ, ನನಗೆ ಫೋನ್ ಮಾಡಿ ‘ಏನಪ್ಪಾ ಈ ವಿಚಾರ’ ಎಂದು ಕೇಳಿದರೆ, ಇಲ್ಲಿ ಬರೆಯಲಾಗದ ಇನ್ನೂ ಹಲವು ವಿಚಾರಗಳನ್ನು ಆತನಿಗೆ ತಿಳಿಸಬಲ್ಲೆ.

ಹೀಗೆ ವ್ಯವಹಾರಗಳನ್ನು ಮಾಡಿ ಕೈ ಸುಟ್ಟುಕೊಳ್ಳುವುದು ಮಸ್ಕಿಗೆ ಹೊಸತೇನಲ್ಲ;  ಹೊಸಪೇಟೆಯಲ್ಲಿ ಸಿಂಧುಮಿತ್ರ ಹೋಟೆಲ್ ಇರಬಹುದು, ಬೆಂಗಳೂರಿನಲ್ಲಿ ಆಯುರ್ವೇದ ಮಸಾಜ್ ಮಾಡುವ ಓಜಸ್ ಎಂಬ ಕೇಂದ್ರ ಇರಬಹುದು (ಇಲ್ಲಿ ಮಸಾಜ್ ಮಾಡುತ್ತೇವೆ ಎಂದು ಹಲವು ರಾಜಕೀಯ ನಾಯಕರನ್ನು ಕರೆದಿದ್ದೇ ಕರೆದಿದ್ದು; ಎಲ್ಲ ಜಾಣ ರಾಜಕಾರಣಿಗಳೂ ಮೊದಲೇ ಮೈಗೆ ಎಣ್ಣೆ ಹಚ್ಚಿಕೊಂಡಿದ್ದರಿಂದ ಮಸ್ಕಿಯ ಕೈಲಿ ತಿಕ್ಕಿಸಿಕೊಳ್ಳುವುದರಿಂದ ಬಚಾವಾದರು.) ಈ ಓಜಸ್ ಎಲ್ಲಿ ಸ್ಥಾಪನೆಯಾಯ್ತು,  ಆ ಕಟ್ಟಡದ ಬಾಡಿಗೆಯನ್ನು ಯಾರು ಕೊಡುತ್ತಿದ್ದರು ಎಂಬುದೆಲ್ಲ ಹೇಳಿದರೆ ‘ಮನೋಹರ ಮಸ್ಕಿ,  ಅರೆ ಇಸ್ಕಿ’ ಎಂದು ನೀವೂ ಅಚ್ಚರಿಪಡುವುದರಲ್ಲಿ ಸಂಶಯವಿಲ್ಲ.

ಇನ್ನು ಫಾಸ್ಟ್ ಟೈಪಿಂಗ್ ಕಲಿಸುವ ಜಯನಗರದ ಸ್ಕೂಲಿಗೆ ಹೋಗಿದ್ದ ಮಸ್ಕಿಗೆ ಅರೆ, ಇದೂ ಯಾಕೆ ಬ್ಯುಸಿನೆಸ್ ಆಗಬಾರದು ಎಂದೆನೆಸಿದ್ದೇ ತಡ, ಅದರ ಬಗ್ಗೆಯೂ ತಲೆ ಕೆಡಿಸಿಕೊಂಡ; ದಕ್ಕಲಿಲ್ಲ. ಆಮೇಲೆ ಕಂಪ್ಯೂಟರ್ ತರಬೇತಿ ಎಂಬ ಫ್ರಾಂಚೈಸ್ ಕೂಡಾ ಆರಂಭಿಸಿದ್ದು, ಆಮೇಲೆ ದಾರಿ ಕಾಣದೆ ಮುಚ್ಚಿದ್ದು ಹಲವರಿಗೆ ಗೊತ್ತಿಲ್ಲ!

ಇನ್ನು ಅಬ್ಬೀಫಿಲ್ ಇನ್‌ಫೋ ಕನ್ಸೂಮಬಲ್ಸ್ ಎಂಡ್ ಪೆರಿಫೆರಲ್ಸ್ ಶ್ಶಾಪಿ ಎಂಬ ಸಂಸ್ಥೆಯು ಕೇವಲ ಮಾರುಕಟ್ಟೆ ಸಂಸ್ಥೆ. ಅಂದರೆ ಇದೇನು ಸ್ವತಃ ರಿಫಿಲ್ ಇಂಕು ಮತ್ತಿತರೆ ಬ್ರಾಂಡೇತರ ಬಿಡಿಭಾಗ ಮತ್ತು ಟೋನರ್‌ಗಳನ್ನು ತಯಾರಿಸುವುದಿಲ್ಲ. ಬದಲಿಗೆ ಗ್ಲೋಯಿಮಾ ಅನ್ನೋ ಇನ್ನೊಂದು ಸಂಸ್ಥೆಯು ಈ ಇಂಕನ್ನು ತಯಾರಿಸುತ್ತದೆ. ಅದನ್ನು ಅಬ್ಬೀಯು ಖರೀದಿಸಿ ತನ್ನ ಫ್ರಾಂಚೈಸಿಗಳಿಗೆ ಕೊಡುತ್ತದೆ. ಸರಿ ಅದರಲ್ಲೇನು ಅಂದಿರಾ? ಗ್ಲೋಯಿಮಾ ವೆಬ್‌ಸೈಟನ್ನು ಅಂತಾರಾಷ್ಟ್ರೀಯ ಡೊಮೈನ್ ರಿಜಿಸ್ಟ್ರಾರರಲ್ಲಿ ನೋಂದಣಿ ಮಾಡಿಸಿದ್ದು ಅಬ್ಬೀ ಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆ! ಇದರ ಯಜಮಾನರು? ಅವರೇ, ಬಿ ಬಿ ಸೋಮಾನಿ. ಅವರ ವೆಬ್‌ಸೈಟ್? ಅಬೀ ಇನ್‌ಫೋ ಡಾಟ್‌ಕಾಮ್. ಈ ಮೈಲ್ ಐಡಿ: ಬಿಬಿಸೋಮಾನಿ ಎಟ್ ಅಬೀಇನ್‌ಫೋ ಡಾಟ್ ಕಾಮ್. ಇಲ್ಲೂ ಹುಷಾರ್, ಅಬೀಯಲ್ಲಿ ಒಂದೇ b ಇದೆ! ಅಬ್ಬೀಫಿಲ್ ಇನ್‌ಫೋ ಕನ್ಸೂಮಬಲ್ಸ್ ಎಂಡ್ ಪೆರಿಫೆರಲ್ಸ್ ಲಿಮಿಟೆಡ್ ಸಂಸ್ಥೆಯ ವೆಬ್‌ಸೈಟ್? ಅದು ಅಬ್ಬೀಫಿಲ್. ಇದರಲ್ಲಿ ಎರಡು b ಇವೆ!!

ಇನ್ನು ವ್ಯಾಸ್ ಟೆಕ್ನಾಲಜೀಸ್, ವ್ಯಾಸ್‌ಗುರುಕುಲ್, ವ್ಯಾಸ್‌ಜಾಬ್ಸ್ ಮುಂತಾದ ವೆಬ್‌ಸೈಟ್‌ಗಳೂ ಸೋಮಾನಿಯ ಒಡೆತನದಲ್ಲಿವೆ. ಇದರಲ್ಲಿ ವ್ಯಾಸ್ ಟೆಕ್ನಾಲಜೀಸ್ ವೆಬ್‌ಸೈಟಿಗೆ ನೀವೇನಾದರೂ ಹೋದರೆ, ನಿಮಗೆ ಸಿಗೋದು ಖಾಲಿ ಪುಗಸಟ್ಟೆ ಉಪದೇಶಗಳು ಮಾತ್ರ! ಬೇರೇನೂ ಇಲ್ಲವೇ ಇಲ್ಲ.ನಿಮ್ಮ ಊಹೆ ನಿಜ: ವ್ಯಾಸ್‌ನ ಸ್ಪೆಲ್ಲಿಂಗ್‌ನಲ್ಲಿ ಎರಡು a (vyaas) ಇದೆ! 

ನಿಮಗೆ ತುಂಬಾ ಗೊಂದಲವಾಗಿದ್ದರೆ ಇಲ್ಲಿಗೇ ನಿಲ್ಲಿಸುತ್ತೇನೆ. ನಾನೇನೋ ಈ ಸಂಸ್ಥೆಗಳ ಬಗ್ಗೆ ತಲೆ ಹಾಳುಮಾಡಿಕೊಂಡೆ ಅಂದ್ರೆ ನೀವು ಯಾಕೆ ಮಾಡ್ಕೋಬೇಕು ಹೇಳಿ? ಒಟ್ಟಿನಲ್ಲಿ ಅವ್ಯವಹಾರ, ಅಕ್ರಮ, ಗೊಂದಲ, ತಪ್ಪು ಮಾಹಿತಿ, ನಿಯಮ ಉಲ್ಲಂಘನೆ, ಕಪ್ಪು ಇಂಕು – ಎಲ್ಲವೂ ಸೇರಿದರೆ ಸಿಗೋದೇ…….. ಮನೋಹರ ಮಸ್ಕಿಯ ಎಲೈಟ್ ಎಂಟರ್‌ಪ್ರೈಸಸ್‌ನ ಅಲ್ಪ ಚಿತ್ರಣ !

ಇಂಥ ಕಳಂಕಿತ ಚಹರೆಯ ಅಬ್ಬೀಫಿಲ್ ಫ್ರಾಂಚೈಸ್‌ನ ಉದ್ಘಾಟನೆಗೆ ಮುಖ್ಯಮಂತ್ರಿಯವರನ್ನೇ ಕರೆಸಿ ಅವರ ಮುಖಕ್ಕೂ ಮಸಿ ಹಚ್ಚಲು ಹೊರಟಿದ್ದ ಮಸ್ಕಿ. ಹೇಗೋ, ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿದ್ದರೂ ಈ ಕಾರ್ಯಕ್ರಮಕ್ಕೆ ಬರಲಿಲ್ಲ. 

ಕಲಬೆರಕೆ ಸಂಗತಿಗಳೇ ಇರುವ ಈ ಇಂಕ್ ರಿಫಿಲ್ಲಿಂಗ್‌ನ ಗುಣಮಟ್ಟವು ಎಚ್ ಪಿ ಯಂಥ ಬ್ರಾಂಡಿನ ಟೋನರ್‌ಗಳಿಗಿಂತಲೂ ಉತ್ತಮ, ಬೆಲೆ ತೀರಾ ಕಡಿಮೆ ಎಂದು ಈ ಸಂಸ್ಥೆಗಳು, ಮನೋಹರ ಮಸ್ಕಿ ಪ್ರಚಾರ ಮಾಡುತ್ತಾರೆ. ಆದರೆ ಇವುಗಳ ಬಗ್ಗೆ ಕ್ವಾಲಿಟಿ ಲಾಜಿಕ್ ಸಂಸ್ಥೆಯವರು ರೂಪಿಸಿದ ಈ ಅಧ್ಯಯನ ವರದಿಯನ್ನು ಓದಿದರೆ ನಿಮಗೆ ಒಂದಷ್ಟಾದರೂ ನಿಜ ಸಂಗತಿಗಳು ಗೊತ್ತಾಗಬಹುದು. ನಿಮ್ಮ ಕೈಗೆ ಮಸಿ ಹತ್ತಿ ಅದು ಮುಖವನ್ನೂ ಆವರಿಸುವ ಮುನ್ನ ರಿಫಿಲ್ ಕಾರ್ಟ್‌ರಿಜ್ ಎಂಬ ಮಾಫಿಯಾದಿಂದ ಹೊರಬನ್ನಿ.

ಅಲ್ರೀ, ಮನೋಹರ ಮಸ್ಕಿ ಹೆಂಡತಿ – ಮಗ ಇರೋ ಪಾಲುದಾರಿಕೆ ಸಂಸ್ಥೆ ಅಂತೀರಿ, ಮಸ್ಕಿ ಎಲ್ಲಿಂದ ಬಂದ ಎಂದು ನೀವು ಕೇಳಬಹುದು. ನಾನೂ ಹಾಗೇ ಆಂದ್ಕೊಂಡಿದ್ದೆ.  ಆದರೆ ಲಿಂಕಡ್‌ಇನ್ ನಲ್ಲಿ ಇರೋ ಈ ಪುಟ ಗಮನಿಸಿ:

 

ಇದರಲ್ಲಿ ಮಸ್ಕಿಯೇ ಎಲೈಟ್ ಎಂಟರ್‌ಪ್ರೈಸಸ್‌ನ ಯಜಮಾನ ಅಂತ ಘೋಷಿಸಲಾಗಿದೆ!

ಈ ಹಿಂದೆ ಸಿಫಿನ್  ಎಂಬ ಸಹಕಾರಿ ಸಂಸ್ಥೆಗಳ ಶೇರುಪಾಲು ಇರುವ ಸಂಸ್ಥೆಯ ಮೂಲಕ ೮೦ ಲಕ್ಷ ರೂ.ಗಳನ್ನು ಕ್ರಿಮಿನಲ್ ಆರೋಪ ಇರುವ ವ್ಯಕ್ತಿಗಳ ವಿವಾದಿತ ಒಡೆತನದಲ್ಲಿದ್ದ (ವಾಸ್ತವವಾಗಿ ಗೊರೂರು ರಾಮಸ್ವಾಮಿ ಐಯಂಗಾರ್‌ರವರ ವಸತಿಗೆಂದೇ ನಿರ್ದಿಷ್ಟವಾಗಿ ಸೂಚಿಸಿ ಬಿಡಿಎಯು ನೀಡಿದ್ದ) ನವರಂಗ್ ಬಳಿಯ ನಿವೇಶನದ ಮೇಲೆ ಮುಂದೆ ಎಂದೋ ಕಟ್ಟಲಿರುವ ಕಟ್ಟಡದ ಲೀಸ್‌ಗೆಂದು ಮುಂಗಡವಾಗಿ ನೀಡಿದ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಇದರಲ್ಲಿ ೪೦ ಲಕ್ಷ ರೂ.ಗಳನ್ನು ಮನೋಹರ ಮಸ್ಕಿಯು ತನ್ನ ಅಣ್ಣ ಇರುವ ಸಹಕಾರಿ ಸಂಸ್ಥೆಯಿಂದ ತುಂಬಿಸಿಕೊಂಡಿದ್ದಾನೆ. ಈ ವ್ಯವಹಾರವು ಎಷ್ಟೆಲ್ಲ ಕಳಂಕಿತ ಎಂದು ಬರೆದರೆ ಅದೇ ಒಂದು ದೊಡ್ಡ ಹಗರಣ.

ತಮಾಶೆ ಎಂದರೆ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ಅಧ್ಯಕ್ಷ ಆಗಿದ್ದಾಗ, ವಿನಿವ್ ಇಂಕ್ (ಪತ್ರಿಕೆಗಳಲ್ಲಿ ವಿನಿವಿಂಕ್ ಎಂದೇ ಕುಪ್ರಸಿದ್ಧ) ಪ್ರಕರಣವಾದ ಕೂಡಲೇ ನನ್ನಿಂದ ತರಾತುರಿಯಲ್ಲಿ ೨೪ ತಾಸುಗಳಲ್ಲೇ ಸ್ಟಾಪ್‌ಫ್ರಾಡ್ ಡಾಟ್ ಇನ್ ಎಂಬ ವೆಬ್‌ಸೈಟನ್ನು ರೂಪಿಸಿಕೊಂಡು ಭರ್ಜರಿಯಾಗಿ ಕಾರ್ಯಕ್ರಮ ನಡೆಸಿದ್ದ ಇದೇ ಮನೋಹರ ಮಸ್ಕಿಗೆ ತನ್ನದೇ ವೆಬ್‌ಸೈಟಿನಲ್ಲಿ ಇರುವ ಹೂಡಿಕೆದಾರ ಜಾಗೃತಿ ಮಾಹಿತಿ ಗೊತ್ತಿಲ್ಲದೆ ಅಬ್ಬೀಫಿಲ್‌ನಲ್ಲಿ ಲಕ್ಷಗಟ್ಟಳೆ ಹಣವನ್ನು ಹೂಡಿ ವ್ಯಾಪಾರ ಮಾಡಲು ಮುಂದಾಗಿದ್ದು.

ಅವನು ಎಲ್ಲ ಬ್ಯಾಂಕುಗಳಿಗೆ ವಂಚನೆಯ ವಿರುದ್ಧ ಉಪದೇಶ ಬಿಗಿಯುತ್ತಿದ್ದ; ಸಹಕಾರಿ ಸಂಸ್ಥೆಗಳಲ್ಲಿ ಭಾಷಣ ಮಾಡುವಾಗ ಹಣಕಾಸಿನ ವಂಚನೆಗಳ ಬಗ್ಗೆ ವಿಪರೀತ ಮಾತಾಡುತ್ತಿದ್ದ; ಈಗ? ವಾಚೌಟ್ ಇನ್ವೆಸ್ಟರ್ಸ್ ಎಂಬ ಸರ್ಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಇದ್ದ ಮಾಹಿತಿಗಳನ್ನೂ ಪರಿಶೀಲಿಸದೆ ಈತ ಕರ್ನಾಟಕದಾದ್ಯಂತ ಮಸಿ ಮಾರಲು ಹೊರಟಿದ್ದಾನೆ! ಇವನ ಹಣಕಾಸು ‘ತಜ್ಞತೆಯ’ ಬಗ್ಗೆ ಬೇರೇನು ಉದಾಹರಣೆ ಬೇಕು? ಅಂದಿನ ಕಾರ್ಯಕ್ರಮಕ್ಕೆ (ತನ್ನ ಶಾಣ್ಯೇತನವನ್ನೆಲ್ಲ ಬಳಸಿ) ವಿಧಾನಸಭೆಯ ಪ್ರತಿಪಕ್ಷ ನಾಯಕ (ಇಂದಿನ ಮುಖ್ಯಮಂತ್ರಿ) ಶ್ರೀ ಯಡ್ಯೂರಪ್ಪನವರು, ಅಂದಿನ ಸಚಿವ ಶ್ರೀ ಎಚ್.ಕೆ. ಪಾಟೀಲ್, ಸಹಕಾರಿ ಸಚಿವ ಶ್ರೀ ಆರ್.ವಿ.ದೇಶಪಾಂಡೆಯವರನ್ನು  ಕರೆಸಿದ್ದ ಈ ಮಹಾಶಯ!    ಆಗ ವಂಚನೆಯ ಬಗ್ಗೆ ಇದ್ದ ಕಾಳಜಿ ಎಲ್ಲ ಹುಸಿ ಮತ್ತು ಹಸಿ ಸುಳ್ಳು ಎಂಬುದು ನನ್ನಂಥ ಮೂರ್ಖರಿಗೆ ಅರಿವಾಗುವ ಹೊತ್ತಿಗೆ ಈ ವೆಬ್‌ಸೈಟ್ ಮುಚ್ಚಿಯೇ ಹೋಯಿತು ಅನ್ನಿ! ಈಗ ಈ ಎಲ್ಲ ರಾಜಕಾರಣಿಗಳು ಇವನ ಕಳಂಕಿತ ವ್ಯವಹಾರವನ್ನು ತಿಳಿದು ಸರಿಯಾದ ಕ್ರಮ ತೆಗೆದುಕೊಳ್ಳಬೇಕಿದೆ.

ಈ ವೆಬ್‌ಸೈಟಿನ ಒಂದು ಪುಟದಲ್ಲಿ ಇದೇ ವಾಚೌಟ್ ಇನ್ವೆಸ್ಟರ್ಸ್ ವೆಬ್‌ಸೈಟ್‌ನ್ನು ಪರಿಶೀಲಿಸಿ ಅನ್ನೋ ಕಿವಿಮಾತೂ ಇತ್ತು! ಮಸ್ಕಿಗೆ ಇಂಕಿನ ವ್ಯವಹಾರಕ್ಕೆ ಬಂದಾಗ ಇವೆಲ್ಲ ಗೊತ್ತಾಗಲೇ ಇಲ್ಲವೆ? ಅಥವಾ ಗೊತ್ತಿದ್ದೂ ಈ ವ್ಯವಹಾರಕ್ಕೆ ಇಳಿದನೆ? ಅವನೇ ಖಚಿತಪಡಿಸಬೇಕು

ಅಂತೂ ಕಳಂಕಿತರು, ಕ್ರಿಮಿನಲ್ ಆರೋಪಿಗಳೊಂದಿಗೆ ವ್ಯವಹಾರ ಮಾಡುವುದೆಂದರೆ ಮನೋಹರ ಮಸ್ಕಿಗೆ ಪಂಚಪ್ರಾಣ!

1 Comment

  1. Dr mahesh

    what a great man he is. ha ha. he is sakala kala,vyavaharavallabh anta annabahude.???

Leave a Reply

Theme by Anders Norén