ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು

ದಿನಾಂಕ ೧೦ ಅಕ್ಟೋಬರ್‌ ೨೦೧೨ರಂದು ಸಮಗ್ರ ವಿಕಾಸ ಮತ್ತು ಮಿತ್ರಮಾಧ್ಯಮದ  ಜಂಟಿ ಪ್ರಾಯೋಜಕತ್ವದಲ್ಲಿ ನಡೆದ `ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ  ಚಿತ್ರಗಳು ಇಲ್ಲಿವೆ.  ಸಮಾರಂಭಕ್ಕೆ ಬಂದ ಎಲ್ಲರಿಗೂ ಮಿತ್ರಮಾಧ್ಯಮದ ವಂದನೆಗಳು. ಮುಖ್ಯ ಅತಿಥಿಗಳಲ್ಲದೆ ಸಭಿಕರಾಗಿ ಹಲವು ಹಿರಿಯರು, ವಿಷಯ ತಜ್ಞರು ಭಾಗವಹಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ಬೆಂಗಳೂರಿನ ಹೆಮ್ಮೆಯ ಅಜ್ಜಿ, ಘನತ್ಯಾಜ್ಯ ವಿಲೇವಾರಿಯ ಹೋರಾಟಗಾರ್ತಿ ಅಲ್ಮಿತ್ರಾ ಪಟೇಲ್‌ರವರ ಭಾಗಿತ್ವ ಸಭೆಗೆ ಶೋಭೆ ತಂದಿದ್ದಂತೂ ನಿಜ. ನಿರೀಕ್ಷೆಯಷ್ಟು ಜನ ಬರಲಿಲ್ಲ. ಆದರೆ ಸಭೆಯಲ್ಲಿ ಚರ್ಚೆ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ತುಂಬಾ ರಚನಾತ್ಮಕವಾಗಿ ನಡೆಯಿತು.


ಈ ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ

Leave a Reply

Theme by Anders Norén