ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ

ಉಡುಪಿ: ಸ್ಥಳೀಯ ಸರಕಾರಿ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿಯುತ್ತಿದ್ದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ಅವರಿಗೆ ೪೨ ವರ್ಷಗಳಿಂದ ಬರಬೇಕಿದ್ದ ಸಂಬಳದ ಹಣ ಹಾಗೂ ನಿವೃತ್ತಿ ಸೌಲಭ್ಯವನ್ನು ಸಂಪೂರ್ಣವಾಗಿ ಪಾವತಿಸುವಂತೇ ತಾನು ಆದೇಶ ಹೊರಡಿಸಿರುವುದಾಗಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಅಫಿದಾವತ್ ಗಮನಿಸಿದ ಸುಪ್ರೀಂಕೋರ್ಟ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಯ ಕಾರ್ಯಾಚರಣೆಯನ್ನು ಕೈಬಿಟ್ಟಿದೆ.

Akku-leela

ಕಳೆದ ೪ ವರ್ಷಗಳಿಂದಲೂ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸದ ಸರಕಾರದ ಉದ್ಧಟತನವನ್ನು ಪ್ರಶ್ನಿಸಿ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಇದುವರೆಗೆ ೨೫ಕ್ಕೂ ಹೆಚ್ಚಿನ ಲೇಖನಗಳನ್ನು ಪ್ರಕಟಿಸಿ, ವಿಚಾರ ಸಂಕೀರ್ಣಗಳನ್ನು ಸಂಘಟಿಸಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ. ಕಳೆದೆರಡು ದಶಕಗಳಿಂದ ಉಡುಪಿ ಕ್ಷೇತ್ರವನ್ನು ಪ್ರತಿನಿಽಸುತ್ತಿದ್ದ ಮಂತ್ರಿಗಳು ಹಾಗೂ ಶಾಸಕರು ಈ ಕುರಿತು ಬರೇ ಆಶ್ವಾಸನೆಗಳನ್ನೇ ನೀಡುತ್ತಾ ಬಂದಿದ್ದರು.

ವಿವಿಧ ನ್ಯಾಯಾಲಯಗಳ ಯಾವ ತೀರ್ಪಿಗೂ ಮಣಿಯದ ಶಿಕ್ಷಣ ಇಲಾಖೆಯ ಮಂತ್ರಿ ಹಾಗೂ ಅಽಕಾರಿ ವರ್ಗದವರು ಮೇಲ್ಮನ, ಅಂತರ್ ಇಲಾಖಾ ಪತ್ರವ್ಯವಹಾರ, ದಾಖಲೆಗಳ ಅಲಭ್ಯತೆ ಮುಂತಾದ ತಂತ್ರಗಳಿಂದ ಕಾಲಹರಣ ಮಾಡುತ್ತಲೆ ಬಂದಿದ್ದರು.

ಕಳೆದ ಜೂನ್ ತಿಂಗಳಲ್ಲಿ ಈ ಕುರಿತು ಸುಪ್ರೀಂಕೋರ್ಟಿನಲ್ಲಿ ನ್ಯಾಯಾಂಗ ನಿಂದನಾ ದಾವೆ ಸಲ್ಲಿಸಲಾಯಿತು. ತೀರ್ಪನ್ನು ಕಾರ್ಯಗತಗೊಳಿಸಲು ಸುಪ್ರೀಂಕೋರ್ಟು ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅವಽ ನೀಡಿತ್ತು. ಸರ್ಕಾರಕ್ಕೆ ಇನ್ನು ಈ ಪ್ರಕರಣದಲ್ಲಿ ಪಾವತಿ ಮಾಡದೆ ನುಣುಚಿಕೊಳ್ಳಲು ಆಗುವುದೇ ಇಲ್ಲ ಎಂದು ಖಚಿತವಾದಾಗ ಕಳೆದ ಡಿಸೆಂಬರ್ ೫ರಂದು ಅಕ್ಕು ಹಾಗೂ ಲೀಲಾ ಅವರಿಗೆ ೨.೧೧ ಲಕ್ಷ ರೂಪಾಯಿ ಪಾವತಿಸಿ ಕೈ ತೊಳೆದುಕೊಳ್ಳಲು ಪ್ರಯತ್ನಿಸಿತು. ಈ ಕುರಿತು ಪ್ರತಿಷ್ಠಾನವು ಸುಪ್ರೀಂಕೋರ್ಟಿನಲ್ಲಿ ದೂರು ನೀಡಿದಾಗ ಪುನಃ ೩.೬೮ ಲಕ್ಷ ರೂ. ನೀಡಿತು. ಇದಾಗಿ ೬ ತಿಂಗಳು ಕಳೆದರೂ ಅವರಿಬ್ಬರ ಸೇವೆ ಸಕ್ರಮಗೊಳಿಸಲು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಪುನಃ ಅದನ್ನೂ ಸುಪ್ರೀಂಕೋರ್ಟಿನ ಗಮನಕ್ಕೆ ತರಲಾಯಿತು. ಜುಲೈ ೪ರಂದು ಅಂತಿಮ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಕರ್ನಾಟಕ ಸರಕಾರಕ್ಕೆ ಒಂದೇ ವಾರದ ಅವಽ ನೀಡಿತು. ಇದೀಗ ಕರ್ನಾಟಕ ಸರಕಾರ ಅಕ್ಕು ಹಾಗೂ ಲೀಲಾರ ಸೇವೆಯ ಸಕ್ರಮದ ಕುರಿತು ಸ್ಪಷ್ಟವಾದ ಸರಕಾರಿ ಆದೇಶ ಹೊರಡಿಸಿದೆ. ಇದರ ಆಧಾರದ ಮೇಲೆ ಇವರಿಬ್ಬರೂ ೧೯೭೧ರಿಂದ ನಿವೃತ್ತಿಯ ದಿನಾಂಕವಾದ ೨೦೧೧ರ ವರೆಗಿನ ಅವಽಯ ಸಂಪೂರ್ಣ ಸಂಬಳ ಹಾಗೂ ನಿವೃತ್ತಿ ಸೌಲಭ್ಯಗಳಾದ ಪ್ರಾವಿಡೆಂಟ್ ಫಂಡ್, ಗ್ರಾಚ್ಯುವಿಟಿ ಮತ್ತು ಪಿಂಚಣಿ ಪಡೆಯಲಿದ್ದಾರೆ.

ಪ್ರಕರಣದ ಹಿನ್ನೆಲೆ

ರಾಜ್ಯ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಉಡುಪಿಯ ಸರಕಾರಿ ಹೆಣ್ಮಕ್ಕಳ ತರಬೇತಿ ಕೇಂದ್ರ (ಟ್ರೈನಿಂಗ್ ಶಾಲೆ ) ದಲ್ಲಿ ಸುಮಾರು ೪೨ ವರ್ಷಗಳ ಕಾಲ ತಾತ್ಕಾಲಿಕ ನೆಲೆಯಲ್ಲಿ ತಿಂಗಳಿಗೆ ಬರೇ ೧೫ ರೂಪಾಯಿ ಮೂಲವೇತನದಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ೨೦೧೧ರಲ್ಲಿ ನಿವೃತ್ತಿಯಾದರು.

ತಮ್ಮ ಸೇವೆಯನ್ನು ಖಾಯಂಗೊಳಿಸಿರಿ ಹಾಗೂ ಇತರ ನೌಕರರಂತೇ ತಮಗೆ ಪೂರ್ಣ ವೇತನ ನೀಡಿರಿ ಎಂದು ಅಕ್ಕು – ಲೀಲಾ ಮಾಡಿದ ಎಲ್ಲಾ ಮನವಿಗಳು ವ್ಯರ್ಥವಾದವು.
೧೯೮೪ರ ಮೊದಲು ನಿರಂತರವಾಗಿ ೧೦ ವರ್ಷಗಳಿಗಿಂತಲೂ ಹೆಚ್ಚಿನ ಅವಗೆ ಸೇವೆ ನೀಡಿದ ಎಲ್ಲಾ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು ಎಂದು ಸ್ಪಷ್ಟವಾದ ಸರಕಾರಿ ಆದೇಶವಿದ್ದರೂ ಅಕ್ಕು – ಲೀಲಾರ ಮನಗಳೆಲ್ಲವನ್ನೂ ತಿರಸ್ಕರಿಸಲಾಗಿತ್ತು.

೧೯೯೮ರಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ದೂರು ನೀಡಿದ ಅಕ್ಕು -ಲೀಲಾ ರನ್ನು ಶಿಕ್ಷಣ ಇಲಾಖೆ ಸೇವೆಯಿಂದಲೇ ವಜ ಮಾಡಿತು. ಸಂಬಳ ಪಡೆಯದೇ ಇದ್ದರು ಅಕ್ಕು -ಲೀಲಾ ತಮ್ಮ ಸೇವೆಯನ್ನು ತಪ್ಪದೇ ನಿರ್ವಹಿಸುತ್ತಿದ್ದರು. ೨೦೦೩ ರಲ್ಲಿ ಈ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಮಂಡಳಿ ಇವರೀರ್ವರ ಸೇವೆಯನ್ನು ಖಾಯಂಗೊಳಿಸಿ ೧೯೭೧ ರಿಂದಲೂ ಅವರಿಗೆ ಇತರರಂತೆ ವೇತನ ಪಾವತಿಸಲು ಆದೇಶಿಸಿತು.

ಈ ಆಜ್ಞೆಯನ್ನು ಪ್ರಶ್ನಿಸಿ ದಾವೆ ಹೂಡಿದ ಕರ್ನಾಟಕ ಸರಕಾರದ ವಾದವನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್ ೨೦೦೪ರಲ್ಲಿ ಸ್ಪಷ್ಟವಾದ ಆದೇಶ ನೀಡಿ ಆಡಳಿತ ನ್ಯಾಯ ಮಂಡಳಿಯು ನೀಡಿದ ಆeಯನ್ನೇ ಪಾಲಿಸುವಂತೇ ಸೂಚಿಸಿತ್ತು.
ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಕೊಂಡೊಯ್ದ ಕರ್ನಾಟಕ ಸರಕಾರ ಅಲ್ಲೂ ಮುಖಭಂಗವನ್ನು ಎದುರಿಸಿತ್ತು. ೨೦೧೦ರ ಜನವರಿ ತಿಂಗಳಲ್ಲಿ ಅಂತಿಮ ಆದೇಶ ನೀಡಿದ ಸುಪ್ರೀಂ ಕೋರ್ಟ್ ಅಕ್ಕು – ಲೀಲಾರ ಸೇವೆಯನ್ನು ಖಾಯಂಗೊಳಿಸಿ ಅವರ ಸೇವೆಗೆ ೧೯೭೧ರಿಂದಲೂ ಪೂರ್ಣ ವೇತನ ನೀಡುವಂತೇ ಸೂಚಿಸಿತ್ತು.

ಮುಂದಿನ ಹೆಜ್ಜೆ

elizabeth and padma

ಅಕ್ಕು – ಲೀಲಾರ ಸಂಬಳ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಲೆಕ್ಕಾಚಾರ ಮಾಡಲು ಸರಕಾರಕ್ಕೆ ಮೂರು ತಿಂಗಳ ಅವಽ ನೀಡಿದ್ದು ಅವರಿಗೆ ಕೊನೆಯ ರೂಪಾಯಿ ಸಿಗುವ ತನಕ ಪ್ರಕರಣವನ್ನು ಬೆನ್ನಟ್ಟಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಬದ್ಧವಾಗಿದೆ.
ಇದೇ ರೀತಿಯ ಸೇವೆ ಸಲ್ಲಿಸಿದ ಸುಮಾರು ೭೮ ಪ್ರಕರಣಗಳಲ್ಲಿ ದೂರುಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ ಮಂಗಳೂರಿನ ಶ್ರೀಮತಿ ಎಲಿಜಬೆತ್ ಹಾಗೂ ಮಲ್ಪೆ ಫಿಶರಿಸ್ ಹೈಸ್ಕೂಲಿನ ಶ್ರೀಮತಿ ಪದ್ಮಾ ಅವರೂ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದು ಅವರಿಗೂ ನ್ಯಾಯ ನೀಡುವಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು. ಉಳಿದ ಎಲ್ಲಾ ಪ್ರಕರಣಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ದಿನಾಂಕ:೧೮-೭-೨೦೧೪
ಡಾ| ರವೀಂದ್ರನಾಥ್ ಶ್ಯಾನುಭಾಗ್
ಉಡುಪಿ ಅಧ್ಯಕ್ಷರು
ENGLISH PRESS NOTE

Human Rights Protection Foundation, Udupi.

First Floor,Vaikunta Baliga College of Law, Kunjibettu Udupi- 576 102
Press Release issued on 18.07.2014
——————————————————————————————————-
Akku – Leela case: Karnataka Govt surrenders to Apex Court : State Government regularises their services

Udupi: Supreme Court has disposed of the contempt petition in Akku-Leela’s case after observing the action taken by the Karnataka State Government on regularization of service rendered by Ms Akku and Ms Leela, who had served for 42 years in Government Women Teachers’ Training Institute.

The State Government has issued a Government order dated 8-07-2014 regularising the services of Akku and Leela from the dates they joined the services in 1971, and to release all the monetary and pensionary benefits till their superannuation.

It is worth noting here that the Supreme Court of India had directed the Karnataka Government to regularize the services of Akku and Leela in Januaru 2010. Human Rights Protection Foundation, Udupi, has endeavored to create a public opinion by publishing over 25 articles and conducting several seminars questioning the adamancy of the Government for not obeying the Supreme Court orders even after 4 years. The ministers and MLAs representing the Udupi Constituency have offered nothing but empty assurances.

The Ministers and officials of Department of Education did not move a hair to the orders of different Courts and wasted time evading responsibility under the pretext of moving the higher courts. A petition for contempt of court was filed in the Supreme Court for the same in the month of June. Since giving a time limit until September and October was of no avail, the Supreme Court had given an ultimatum. The State Government, after coming to a conclusion that it can never evade payments in this case, had opted for an initial payment of Rs 2.11 lakhs in last December and 3.68 lakhs in January 2014.

On 4th July, 2014, the Supreme Court issued a final warning giving one week’s time to comply with its order. Accordingly, State Government has issued the order on 8th July to this effect.

The Background Story

The two women, Smt. Akku and Smt Leela, put in about four decades of service, as temporarily appointed cleaners, at the Government Women Teachers’ Training Institute on a monthly salary of Rs. 15 before retiring in 2011. Their umpteen requests for making their job permanent and paying their complete salary went in vain.

Despite the clear orders from the Government to make all the temporary employees who served for over a period of 10 years prior to 1984, permanent, Akku – Leela’s pleas were disregarded.

In 1998 when Akku – Leela complained to the Administrative Tribunal of Karnataka, under the guidance of Human Rights Protection Foundation, Udupi, the Department of Education terminated them from service. But Akku- Leela continued to serve without any salary. The court’s verdict in 2003 was in favour of Akku –Leela, ordering for their jobs to be made permanent and their well deserved salaries due from 1971 to be paid.

Karnataka Government questioned these orders and moved The High Court, which in-turn overruled the argument gave clear orders in 2004, seconding the verdict of the Administrative Tribunal.

The Karnataka Government dragged the matter to Supreme Court and faced the same fate. In January 2010, it was ordered by the Supreme Court to make the posts of Akku-Leela permanent and pay their salaries due since 1971.

Future Steps

The Human Rights Protection Foundation will monitor the implementation of the Government order till the last rupee is paid. It has decided to help the Government employees in similar cases. Already the Foundation has received 78 such cases from all over Karnataka. Ms Padma (65yrs) from Government Training School of Balmatta, Mangalore and Ms Elizabeth (68 yrs) who has been working in Fisheries High School, Malpe, having served for 42 and 45 years respectively have already approached the Education Department to apply the same principle in their cases.
Dr Ravindranath Shanbhag
President
Human Rights Protection Foundation, Udupi.

ಲಗತ್ತಿಸಿದೆ

ಸರ್ಕಾರದ ಆದೇಶ ಪತ್ರ

ಗಮನಿಸಿ: ಅಕ್ಕು ಮತ್ತು ಲೀಲಾರ ಚಿತ್ರಗಳನ್ನು ನೀವು ಈ ಕೆಳಗಿನ ಕೊಂಡಿಯಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು

Archives

ಹೆಚ್ಚುವರಿ ದಾಖಲೆಗಳಿಗೆ ಇಲ್ಲಿ ಕ್ಲಿಕ್ ಮಾಡಿ: http://goo.gl/33g0Fs

 

ENCLOSED:

Government Order copy

PLEASE NOTE: YOU CAN DOWNLOAD THE IMAGES OF AKKU AND LEELA FROM THE FOLLOWING LINK

Archives

LINK TO ADDIONAL DOCUMENTS: http://goo.gl/33g0Fs

 

GO-AKKU-LEELA

 

Leave a Reply

Theme by Anders Norén