ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ

ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐ ಎ ಇ ಎ )ಯು ೨೦೦೨ರಿಂದ ಈವರೆಗೆ ನೀಡಿದ ವಾರ್ಷಿಕ ವರದಿಗಳನ್ನು ಓದಿದರೆ ಒಂದಷ್ಟು ಪ್ಯಾರಾಗಳು ಮಾತ್ರ ಬದಲಾಗದೇ ಇರುವುದು ಗೊತ್ತಾಗುತ್ತದೆ. ಅವೆಲ್ಲವೂ ಉತ್ತರ ಕೊರಿಯಾಗೆ ಸಂಬಂಧಿಸಿದ್ದು.

ಪರಮಾಣು ಸುರಕ್ಷತೆ ದೃಷ್ಟಿಯಿಂದ ಯಾವುದೇ ಪರಿವೀಕ್ಷಣೆ ನಡೆಸಲು ಉತ್ತರ ಕೊರಿಯಾವು ಅನುಮತಿ ನೀಡಿಲ್ಲ ಎಂದು ಐ ಎ ಇ ಎ ಮಹಾನಿರ್ದೇಶಕ ಯುಕಿಯಾ ಅಮಾನೋ ಇದೇ ಸೆಪ್ಟೆಂಬರ್ ೧೩ರಂದು ನೀಡಿದ ೨೦೧೦ರ ವಾರ್ಷಿಕ ವರದಿಯ ಪೀಠಿಕಾ ಹೇಳಿಕೆಯಲ್ಲಿ ಮತ್ತೆ ದಾಖಲಿಸಿದ್ದಾರೆ. ವಿಶ್ವಸಂಸ್ಥೆಯು ಈ ಸಂಬಂಧ ಜಾರಿ ಮಾಡಿದ ೧೭೧೮ ಮತ್ತು ೧೮೭೪ ನಿರ್ಣಯಗಳನ್ನೂ ಉತ್ತರ ಕಒರಿಯಾವು ಮಾನ್ಯ ಮಾಡಿಲ್ಲ ಎಂದು ಯುಕಿಯಾ ಹೇಳಿದ್ದಾರೆ. ಹೀಗೆ ಐ ಎ ಇ ಎ ಯನ್ನು ಒಪ್ಪದ ದೇಶಗಳಲ್ಲಿ ಇರಾನ್ ದೇಶವೂ ಇದೆ.

As the Agency has had no inspectors in the Democratic People´s Republic of Korea since April last year, I have nothing to report to the Board on any activities of the IAEA in relation to that country.

The DPRK has not permitted the Agency to implement safeguards in the country since December 2002 and it has not implemented the relevant measures called for in Security Council resolutions 1718 and 1874. I urge the DPRK to fully implement all relevant nuclear non-proliferation obligations. I again call on all parties concerned to make concerted efforts for a resumption of the Six-Party Talks at an appropriate time, with the ultimate aim of the denuclearization of the Korean Peninsula.

http://www.iaea.org/NewsCenter/Statements/2010/amsp2010n015.html

ವಿಶ್ವದ ಪ್ರಮುಖ ಪರಮಾಣು ಶಕ್ತಿಯಾಗಿರುವ ಉತ್ತರ ಕೊರಿಯಾ ದೇಶದ ತುಂಬೆಲ್ಲ ಪರಮಾಣು ಸಿಡಿತಲೆಗಳಿವೆ. ದೇಶದ ತುಂಬೆಲ್ಲ ಬಂಕರುಗಳನ್ನು ಕಟ್ಟಲಾಗಿದೆ. ಯಾವುದೇ ಸಂದರ್ಭದಲ್ಲಿ, ವಿಶೇಷವಾಗಿ ಅಮೆರಿಕಾವು ದಾಳಿ ಮಾಡಿದರೆ ಉತ್ತರ ಕೊರಿಯಾದ ಪ್ರಮುಖರೆಲ್ಲ ಬಂಕರ್ ಸೇರುತ್ತಾರೆ. ೮೦೦ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ೬೦೦ ಸ್ಕಡ್ ಕ್ಷಿಪಣಿಗಳು, ೨೦೦ ರೊಡೊಂಗ್ ಕ್ಷಿಪಣಿಗಳು ಈ ದೇಶದಲ್ಲಿವೆ. ಸ್ಕಡ್ ಕ್ಷಿಪಣಿಗಳ ದಾಳಿಯ ಸಾಮರ್ಥ್ಯ ೩೦೦ರಿಂದ ೫೦೦ ಕಿಮೀಗಳಾಗಿದ್ದರೆ, ರೊಡೊಂಗ್ ಕ್ಷಿಪಣಿಗಳ ಸಾಮರ್ಥ್ಯ ೧೦೦೦ – ೧೪೦೦ ಕಿಂಇಗಳು ಎಂಬುದು ಒಂದು ಅಂದಾಜು. ಇನ್ನು ತೇಪೊಡೊಂಗ್ – ೧ ಎಂಬ ಕ್ಷಿಪಣಿಯು ೨೦೦೦ದಿಂದ ೨೩೦೦ ಕಿಮೀವರೆಗೂ ದಾಳಿ ಮಾಡಬಲ್ಲದಂತೆ. ಈಗ ಅಭಿವೃದ್ಧಿಪಡಿಸುತ್ತಿರುವ ತೇಪೊಡೊಂಗ್ – ೨ ಕ್ಷಿಪಣಿಯು ೫೦೦೦-೭೦೦೦ ಕಿಮೀ ವ್ಯಾಪ್ತಿಯನ್ನು ಹೊಂದಿದೆಯಂತೆ. ಮೊದಲು ರಶ್ಯಾದಿಂದ ಕ್ಷಿಪಣಿ ತಂತ್ರಜ್ಞಾನವನ್ನು ಪಡದ ಉತ್ತರ ಕೊರಿಯಾ ನಂತರ ಚೀನಾವನ್ನು ತಬ್ಬಿಕೊಂಡಿತು. ತೇಪೊಡೊಂಗ್ – ೨ ಕ್ಷಿಪಣಿಯ ದಾಳಿಯ ವ್ಯಾಪ್ತಿಯಲ್ಲಿ ಭಾರತವೂ ಇದೆ.

ಇದೇ ಸೆಪ್ಟೆಂಬರ್ ೧೯ರಂದು ವಾಯ್ಸ್ ಆಫ್ ಅಮೆರಿಕಾವು ಉತ್ತರ ಕೊರಿಯಾದ ಒಂದು ಮಿಲಿಟರಿ ದಾಖಲೆಯನ್ನು ಪ್ರಕಟಿಸಿದೆ.

ಈ ವರದಿಯ ಪ್ರಕಾರ ಉತ್ತರ ಕೊರಿಯಾವು ರಾಡಾರ್‌ಗಳ ಕಣ್ಣು ತಪ್ಪಿಸುವ ಬಣ್ಣವನ್ನು ಶಸ್ತ್ರಗಳಿಗೆ ಬಳಿಯುವುದೇ ಮುಂತಾದ ತಂತ್ರಗಳನ್ನು ವಿವರಿಸಲಾಗಿದೆ. ಕೊರಿಯನ್ ಭಾಷೆಯ ಈ ವರದಿಯನ್ನು ಪತ್ರಿಕೆಯು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಿದ್ದು ಅದನ್ನು ಈ ಕೊಂಡಿಯಲ್ಲಿ ಪಡೆಯಬಹುದು. ಈ ದಾಖಲೆಯನ್ನು ಉತ್ತರ ಕೊರಿಯಾ ಕುರಿತ ಮಿಲಿಟರಿ ತಜ್ಞ ಡೇನಿಯೆಲ್ ಪಿಂಕ್‌ಸ್ಟನ್ ವಿಶ್ಲೇಷಿಸಿದ್ದಾರೆ. ಐದು ವರ್ಷ ಹಳೆಯದಾದ ಈ ದಾಖಲೆಯಲ್ಲಿ ವೈರಿಪಡೆಗಳಿಗೆ ಚಳ್ಳೆಹಣ್ಣು ತಿನ್ನಿಸುವ ಹಲವು ತಂತ್ರಗಳನ್ನು ಉಲ್ಲೇಖಿಸಲಾಗಿದೆ.

೧೯೫೩ರಿಂದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳು ಸಮರದಲ್ಲೇ ನಿರತ. ಬಹುರ್ಶ ಮನುಕುಲದ ಅತಿ ದೀರ್ಘ ಮತ್ತು ಇನ್ನೂ ಮುಗಿಯದ ಸಮರ ಇದು. ಇಲ್ಲಿ ಕದನ ವಿರಾಮ ಘೋಷಣೆಯಾಗಿಲ್ಲ; ಬದಲಿಗೆ ಶಸ್ತ್ರ ಬಳಕೆಯಷ್ಟೇ ನಿಂತಿದೆ. ಅದಕ್ಕೆಂದೇ ಈ ಗಡಿಯಲ್ಲಿ ದಕ್ಷಿಣ ಕೊರಿಯಾದ ಆರು ಲಕ್ಷ ಮತ್ತು ಅಮೆರಿಕಾದ ೩೦ ಸಾವಿರ ಸೈನಿಕರು ಕಾವಲು ನಿಂತಿದ್ದಾರೆ. ೫೭ ವರ್ಷಗಳಿಂದ!

೨೦೦೬ರ ಅಕ್ಟೋಬರಿನಲ್ಲೇ ಮೊದಲ ಪರಮಾಣು ಬಾಂಬ್ ಸ್ಫೋಟ ಮಾಡಿದೆ ಎಂದು ಘೋಷಿಸಿದ ಉತ್ತರ ಕೊರಿಯಾ ೨೦೦೯ರ ಮೇ ೨೫ರಂದು ಎರಡನೇ ಪರಮಾಣು ಪರೀಕ್ಷೆ ಮಾಡಿ ಯಶಸ್ವಿಯಾಗಿರುವುದಾಗಿ ಪ್ರಕಟಿಸಿದೆ. ಇನ್ನೇನು, ಯಾವುದೇ ಕ್ಷಣದಲ್ಲೂ ಮೂರನೇ ಪರಮಾಣು ಪರೀಕ್ಷೆ ನಡೆಯಬಹುದು.

ಇನ್ನು ಮೂರೇ ವರ್ಷಗಳಲ್ಲಿ ಉತ್ತರ ಕೊರಿಯಾವು ಅಮೆರಿಕಾವನ್ನೂ ತಟ್ಟಬಲ್ಲಂಥ ಕ್ಷಿಪಣಿಗಳನ್ನು ತಯಾರಿಸಲಿದೆ ಎಂದು ಲಾಸ್ ಏಂಜಲಿಸ್ ಟೈಮ್ಸ್ ೨೦೦೯ರಲ್ಲೇ ವರದಿ ಮಾಡಿದೆ. ತೇಪೊಡೊಂಗ್ – ೨ ಕ್ಷಿಪಣಿಯನ್ನು ಅಮೆರಿಕಾ ಮೇಲೆ ದಾಳಿಗೆಂದೇ ರೂಪಿಸಿದ್ದರೂ ಅದು ಈವರೆಗೆ ಸಫಲವಾಗಿಲ್ಲ; ಆದರೆ ಇನ್ನು ಮೂರರಿಂದ ಐದು ವರ್ಷಗಳ ಒಳಗೆ ಉತ್ತರ ಕೊರಿಯಾವು ಈ ಗುರಿಯನ್ನು ತಲುಪಬಹುದು ಎಂದು ಜೇಮ್ಸ್ ಕಾರ್ಟ್‌ರೈಟ್ ಎಂಬ ನೌಕಾಪಡೆ ಅಧಿಕಾರಿಯು ಅಮೆರಿಕಾದ ಕಾಂಗ್ರೆಸ್ ಸಮಿತಿಗೆ ತಿಳಿಸಿದ್ದಾರೆ.

ಉತ್ತರ ಕೊರಿಯಾದ ಕ್ಷಿಪಣಿ ಸಾಮರ್ಥ್ಯವನ್ನು ಈ ಕೋಷ್ಟಕದಲ್ಲಿ ವಿವರವಾಗಿ ತಿಳಿಯಬಹುದು.

 

ಉತ್ತರ ಕೊರಿಯಾವು ವಿಶ್ವದಲ್ಲೇ ಐದನೇ ಅತಿದೊಡ್ಡ ಸೇನೆಯನ್ನು ಹೊಂದಿದೆ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಚಾರ. ಚೀನಾವು ೨೨.೮೫ ಲಕ್ಷ ಸೈನಿಕರನ್ನು ಹೊಂದಿದೆ. ಅದರ ಜನಸಂಖ್ಯೆಗೆ ಹೋಲಿಸಿದರೆ ಸಾವಿರಕ್ಕೆ ೮.೬ ಸೈನಿಕರು. ಉತ್ತರ ಕೊರಿಯಾ? ೧೧.೦೬ ಲಕ್ಷ ಸೈನಿಕರನ್ನು ಹೊಂದಿರುವ ಉತ್ತರ ಕೊರಿಯಾದ ಸಾವಿರ ಜನರಿಗೆ ೪೧೮ ಸೈನಿಕರು! ರಶ್ಯಾದ ಒಟ್ಟಾರೆ ಸೈನಿಕರ ಸಂಖ್ಯೆಯೇ ೧೦ ಲಕ್ಷ ಎಂದರೆ ನೀವೇ ಉತ್ತರ ಕೊರಿಯಾದ ಸೇನಾಪಡೆ ಅತಿ ಎನ್ನುತ್ತೀರೇನೋ….  ಅಮೆರಿಕಾದ ಸೈನಿಕರ ಸಂಖ್ಯೆ ೧೫.೮೦ ಲಕ್ಷ ಇದ್ದರೆ ಭಾರತದ ಸೈನಿಕರ ಸಂಖ್ಯೆ ೧೩.೨೫ ಲಕ್ಷ. ಪಾಕಿಸ್ತಾನದಲ್ಲಿ ೬.೧೭ ಲಕ್ಷ ಸೈನಿಕರಿದ್ದಾರೆ.

ಉತ್ತರ ಕೊರಿಯಾದ ಕ್ಷಿಪಣಿಗಳನ್ನು ಮಧ್ಯಪ್ರಾಚ್ಯದ ಅರಬ್ ದೇಶಗಳು ಖರೀದಿಸಿವೆ. ತೈಲಸಮೃದ್ಧ ದೇಶಗಳು ದುಡ್ಡು ಕೊಟ್ಟು ಕ್ಷಿಪಣಿ ಖರೀದಿಸುವುದು ಸಾಮಾನ್ಯ. ಪಾಕಿಸ್ತಾನವೂ ಪರಮಾಣು ತಜ್ಞತೆಯನ್ನು ಉತ್ತರ ಕೊರಿಯಾಗೆ ಕೊಟ್ಟು ಕ್ಷಿಪಣಿಗಳನ್ನು ಖರೀದಿಸಿದೆ.

ಉತ್ತರ ಕೊರಿಯಾವು ಹೀಗೆ ಕಿಮ್ ಜೊಂಗ್ ಇಲ್‌ನ ನಿಯಂತ್ರಣದಲ್ಲಿ ಇರುವುದಕ್ಕೆ ಆತ ಕಟ್ಟಿ ಬೆಳೆಸಿದ ಬಹುದೊಡ್ಡ ಕೂಟವೇ ಕಾರಣ. ಈ ಕೂಟವನ್ನು ತಜ್ಞರು ಹೀಗೆ ಕಂಡಿದ್ದಾರೆ.

ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಪ್ರಕಟಿಸಿದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದಲ್ಲಿ ಉತ್ತರ ಕೊರಿಯಾ ಮತ್ತು ಇರಾನ್ ದೇಶಗಳನ್ನು ನಿಯಂತ್ರಿಸುವ ಮಾತಿದೆ:

Present a Clear Choice to Iran and North Korea: The United States will pursue the denuclearization of the Korean peninsula and work to prevent Iran from developing a nuclear weapon. This is not about singling out nations—it is about the responsibilities of all nations and the success of the nonproliferation regime. Both nations face a clear choice. If North Korea eliminates its nuclear weapons program, and Iran meets its international obligations on its nuclear program, they will be able to proceed on a path to greater political and economic integration with the international community. If they ignore their international obligations, we will pursue multiple means to increase their isolation and bring them into compliance with international nonproliferation norms.

 (ಕೊನೆಯ ವಾಕ್ಯಕ್ಕೆ ಕೆಂಪು ಬಣ್ಣ ಹಾಕಿದ್ದು ನಾನು – ಬೇಳೂರು ಸುದರ್ಶನ)

ಇದರರ್ಥ ಇಷ್ಟೆ: ಒಂದಲ್ಲ ಒಂದು ದಿನ ಅಮೆರಿಕಾವು ಇರಾನ್ ಮತ್ತು ಉತ್ತರ ಕೊರಿಯಾದ ಮೇಲೆ ಸಮರ ಸಾರುವುದಂತೂ ನಿಶ್ಚಿತ. ಈ ಸಮರವು ಯಾವ ರೂಪದಲ್ಲಿರುತ್ತದೆ, ಯಾವ ಪ್ರಮಾಣದಲ್ಲಿ ಇರುತ್ತದೆ, ಯಾವ ದೇಶ ಮೊದಲು ಎನ್ನುವುದೆಲ್ಲ ಕಾಲಕ್ಕೆ ಬಿಟ್ಟ ವಿಚಾರ. ಈಗಿನ ಸುದ್ದಿಗಳ ಪ್ರಕಾರ ಅಮೆರಿಕಾವು ಮೊದಲು ಇರಾನನ್ನು ಚಿವುಟುತ್ತದೆ. ಆಮೇಲೆ ಉತ್ತರ ಕೊರಿಯಾ.

ತನಗೇನಾದರೂ ಮಾತುಕತೆಗೆ ಕರೆದರೆ ಉತ್ತರ ಕೊರಿಯಾ ಈ ಮುಂದಿನ ಷರತ್ತುಗಳನ್ನು ಹಾಕುವುದು ಗ್ಯಾರಂಟಿ ಎಂದು ಲ್ಯಾರಿ ನಿಕ್ಶ್  ಬರೆದ ಅಮೆರಿಕಾದ ಕಾಂಗ್ರೆಸ್ ವರದಿ ಸ್ಪಷ್ಟವಾಗಿ ಬರೆದಿದೆ:

ಅಮೆರಿಕಾದಿಂದ ಆರ್ಥಿಕ ನೆರವು ದೊರೆಯುವ ಷರತ್ತಿಗೆ ಬದಲಿಯಾಗಿ ಪರಮಾಣು ಕಾರ್ಯಕ್ರಮವನ್ನು ಉತ್ತರ ಕೊರಿಯಾವು ನಿಲ್ಲಿಸುವುದಿಲ್ಲ. ತನ್ನನ್ನು ಪರಮಾಣು ಶಕ್ತ ದೇಶ ಎಂದು ಪರಿಗಣಿಸಬೇಕೆಂದು ಉತ್ತರ ಕೊರಿಯಾ ಷರತ್ತು ಹಾಕುತ್ತದೆ.

ಉತ್ತರ ಕೊರಿಯಾದ ಬಹುತೇಕ ಪರಮಾಣು ಸ್ಥಾವರಗಳು ಪ್ಯೋಂಗ್‌ಯಾಂಗ್‌ನ ಉತ್ತರ ದಿಕ್ಕಿನಲ್ಲಿ, ಯೋಂಗ್‌ಬ್ಯೋನ್ ಎಂಬ ಪ್ರದೇಶದಲ್ಲಿವೆ. ಒಂದು ಸ್ಥಾವರವು ವರ್ಷಕ್ಕೆ ಒಂದು ಪರಮಾಣು ಬಾಂಬ್ ತಯಾರಿಸಲು ಬೇಕಾಗುವ ಪ್ಲುಟೋನಿಯಂನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. (ಒಂದು ಪರಮಾಣು ಬಾಂಬ್ ತಯಾರಿಸಲು ೬ ಕಿಲೋಗ್ರಾಂನಷ್ಟು ಪ್ಲುಟೋನಿಯಂ ಬೇಕಂತೆ). ಯೋಂಗ್‌ಬ್ಯೋನ್ ಮತ್ತು ತೀಕೋನ್‌ನಲ್ಲಿ ಇರುವ ಇನ್ನೆರಡು ಸ್ಥಾವರಗಳಲ್ಲಿ ಒಟ್ಟು ವಾರ್ಷಿಕ ೨೦೦ ಕಿಲೋಗ್ರಾಂಗಳಷ್ಟು ಪ್ಲುಟೋನಿಯಂ ಉತ್ಪಾದಿಸಬಹುದು! ಅಂದರೆ ಈ ಎರಡು ಸ್ಥಾವರಗಳಿಂದ ವರ್ಷಕ್ಕೆ ಒಟ್ಟು ಕನಿಷ್ಟ ೩೦ ಪರಮಾಣು ಬಾಂಬ್ ತಯಾರಿಸಬಹುದು. ಇದಲ್ಲದೆ ಇದೇ ಪ್ರದೇಶದಲ್ಲಿ ೬೦೦ ಅಡಿ ಆಳದ ಪ್ಲುಟೋನಿಯಂ ಮರುಸಂಸ್ಕರಣಾ ಘಟಕವೂ ಇದೆ. ಈ ಎಲ್ಲ ಸ್ಥಾವರಗಳಲ್ಲಿ ೩೦೦೦ ವಿಜ್ಞಾನಿಗಳು ಕಾರ್ಯನಿರತರಾಗಿದ್ದಾರೆ.

ಒಟ್ಟಾರೆ ಉತ್ತರ ಕೊರಿಯಾದ ಪ್ಲುಟೋನಿಯಂ ಸಾಮರ್ಥ್ಯವನ್ನು ನೋಡಿದರೆ, ಅದು ವರ್ಷಕ್ಕೆ ಕನಿಷ್ಟ ಎರಡರಿಂದ ಮೂರು ಪರಮಾಣು ಬಾಂಬುಗಳನ್ನು ತಯಾರಿಸುತ್ತಿರಬಹುದು ಎಂದು ಅಮೆರಿಕಾದ ಗೂಢಚರ ಸಂಸ್ಥೆ ಸಿ ಐ ಎ ವರದಿ ಮಾಡಿದೆ. ೨೦೦೪ರ ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಉತ್ತರ ಕೊರಿಯಾವು ವರ್ಷಕ್ಕೆ ಆರು ಪರಮಾಣು ಬಾಂಬ್ ತಯಾರಿಸುತ್ತಿದೆ.

ಗೊತ್ತಾಯ್ತಲ್ಲ… ಉತ್ತರ ಕೊರಿಯಾದ ಪರಮಾಣು ಶಕ್ತಿ ಏನೆಂದು….. ಅಮೆರಿಕಾವೂ ಉತ್ತರ ಕೊರಿಯಾದ ಮೇಲೆ ಹಠಾತ್ತಾಗಿ ದಾಳಿ ಮಾಡಲು ಹಿಂಜರಿಯುತ್ತಿರುವುದು ಇದೇ ಕಾರಣಕ್ಕೆ….

Leave a Reply

Theme by Anders Norén