ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು, ಸುದ್ದಿ

ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ

ಕೊನೆಗೂ ಭಾರತ ಸರ್ಕಾರವೂ ನಾಚಿಕೆ ಬಿಟ್ಟಿದೆ. ಕಳೆದ ವಾರ ಸ್ವಿಜರ್‌ಲ್ಯಾಂಡಿನ ಜಿನೀವಾದಲ್ಲಿ ನಡೆದ  ಸ್ಟಾಕ್‌ಹೋಮ್ ಸಮಾವೇಶದಲ್ಲಿ ಎಂಡೋಸಲ್ಫಾನ್ ಎಂಬ ಡರ್ಟಿ ಡಜನ್ ವಿಷಕುಟುಂಬಕ್ಕೆ ಸೇರಿದ ಮಹಾವಿಷದ ಉತ್ಪಾದನೆಯ ನಿಷೇಧ ಪ್ರಸ್ತಾಪವನ್ನು ವಿರೋಧಿಸಿದೆ. ಇದು ನಾಚಿಕೆಗೇಡಿನ ಘಟನೆ ಎಂದು ಕೇರಳದ ಮುಖ್ಯಮಂತ್ರಿಯೊಬ್ಬರೇ ಕೇಂದ್ರ ಸರ್ಕಾರವನ್ನು ಝಾಡಿಸಿದ್ದಾರೆ. ಕೇರಳದ ಕೃಷಿ ಸಚಿವ ಬಿನೋಯ್ ವಿಶ್ವಂ ಕೂಡಾ ಭಾರತದ ನಿಲುವು ತಪ್ಪು ಎಂದು ಪತ್ರಿಕಾ ಸಂದರ್ಶನ ನೀಡಿದ್ದಾರೆ. ಉಳಿದೆ ರಾಜ್ಯಗಳ ಪ್ರತಿಕ್ರಿಯೆ ಶೂನ್ಯವಾಗಿದೆ.

ABOVE: Eight month old Sainaba lives in the Kasaragod district close to where Endosulfan has been sprayed. She suffers from hydrocephalus ©Shree Padre

ಸದ್ಯಕ್ಕಂತೂ ಭಾರತದ ರೈತರು, ಕೆಳವರ್ಗದ ನೂರಾರು ಕುಟುಂಬಗಳು ಎಂಡೋಸಲ್ಫಾನ್‌ನ ವಿಷಬಾಹುವಿನಿಂದ ತಪ್ಪಿಸಿಕೊಳ್ಳುವಂತಿಲ್ಲ. ಭಾರತ ಸರ್ಕಾರದ ಒಂದು ಸಾರ್ವಜನಿಕ ಉದ್ದಿಮೆಯೇ ಎಂಡೋಸಲ್ಫಾನನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸುತ್ತಿರೋದ್ರಿಂದ ಇನ್ನೇನು ಮಾಡೋದಕ್ಕೆ ಸಾಧ್ಯ? ಕೆಲವು ತಿಂಗಳುಗಳ ಹಿಂದೆ ಎಂಡೋಸಲ್ಫಾನ್ ನ ದುಷ್ಪರಿಣಾಮಕ್ಕೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಪಾವತಿ ಮಾಡಿಸುವಲ್ಲಿ ಈಗಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯಶ ಪಡೆದಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎಂಡೋ ಸಲ್ಫಾನ್ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಯೆಡ್ಯೂರಪ್ಪನವರು ಪ್ರಕಟಿಸಿದ್ದರು. ಆದರೆ ಈ ನಿರ್ಧಾರ ಇನ್ನೂ ಆಗಿಲ್ಲ.

ಅಕ್ಟೋಬರ್ ೧೧ರಿಂದ ೧೫ರವರೆಗೆ ಜಿನೀವಾದಲ್ಲಿ ನಡೆದ ಸಭೆಯಲ್ಲಿ ಎಂಡೋಸಲ್ಫಾನ್ ಸೇರಿದಂತೆ ಡರ್ಟಿ ಡಜನ್ ಎಂದೇ ಹೆಸರಾದ ಹಲವು ವಿಷಗಳ ನಿಷೇಧದ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಹಾಜರಿದ್ದ ೨೯ ದೇಶಗಳು ಎಂಡೋಸಲ್ಫಾನ್‌ನ ಉತ್ಪಾದನೆ, ಬಳಕೆ, ಆಮದು ಮತ್ತು ರಫ್ತನ್ನು ನಿಷೇಧಿಸಬೇಕು ಮತ್ತು ಈ ಕುರಿತು ಕೆಲವೇ ವಿನಾಯ್ತಿಗಳಿರಬೇಕು ಎಂದು ನಿರ್ಣಯಿಸಿದವು. ಆದರೆ ಇನ್ನುಳಿದ ನಾಲ್ಕು ದೇಶಗಳು ಸಭೆಗೆ ಗೈರು ಹಾಜರಾದವು. ಭಾರತವು ಮೊದಲು ಚರ್ಚೆಯಲ್ಲಿ ಭಾಗವಹಿಸದೇ ಸುಮ್ಮನುಳಿಯಿತು. ಆಮೇಲೆ ಮತದಾನದಲ್ಲಿ ಭಾಗವಹಿಸದೆ ಇದ್ದೂ ಇಲ್ಲದೆ ಗೈರುಹಾಜರಾತಿಯನ್ನು ದಾಖಲಿಸಿತು.

ಈ ಸಭೆಯಲ್ಲಿ ಎಂಡೋಸಲ್ಫಾನನ್ನು ಪಿಓಪಿ (ಪರ್ಸಿಸ್ಟೆಂಟ್ ಆರ್ಗಾನಿಕ್ ಪೊಲ್ಯುಟೆಂಟ್ಸ್: ಈ ಕುರಿತ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ) ಪಟ್ಟಿಯ ವರ್ಗೀಕರಣದಲ್ಲಿ ಸಂಪೂರ್ಣವಾಗಿ ನಿಷೇಧಿಸುವ ವರ್ಗ`ಎ’ಗೆ ಸೇರಿಸಬೇಕು ಎಂಬ ನಿರ್ಣಯವಾಯಿತು. ಎಂಡೋಸಲ್ಫಾನ್‌ನ್ನು ಸೋಯಾ, ಹತ್ತಿ, ಚಹಾ ಮತ್ತು ಭತ್ತ ಬೆಳೆಯಲು ವ್ಯಾಪಕವಾಗಿ ಬಳಸುತ್ತಾರೆ (ಕೇರಳದ ಕಾಸರಗೋಡಿನಲ್ಲಿ ಗೇರುಕೃಷಿಯಲ್ಲಿ ಈ ವಿಷವನ್ನು ಬಳಸಿದ್ದರಿಂದ ಆದ ಮಾನವ ದುರಂತದ ಬಗ್ಗೆ ಈ ಲೇಖನ ಓದಿ).  ಎಂಡೋಸಲ್ಫಾನ್ ಮನುಷ್ಯರಿಗೆ, ಪ್ರಾಣಿಗಳಿಗೆ ಮತ್ತು ಪರಿಸರಕ್ಕೆ, ಆರ್ಕಟಿಕ್ ಮಹಾದ್ವೀಪಕ್ಕೆ ಅತ್ಯಂತ ಅಪಾಯಕಾರಿ ಎಂಬುದನ್ನು ಈ ಸಭೆಯು ದಾಖಲಿಸಿದೆ.

ಸಭೆಯಲ್ಲಿ ಭಾರತವೊಂದೇ ಎಂಡೋಸಲ್ಫಾನ್ ಪರವಾಗಿ ಮಾತನಾಡಿತು ಎಂಬುದಕ್ಕೆ ಈ ಸಭೆಯ ನಡಾವಳಿ ಬಗ್ಗೆ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಡೆವಲಪ್‌ಮೆಂಟ್ (ಐಐಎಸ್‌ಡಿ) ಯು ಪ್ರಕಟಿಸಿದ ವರದಿಯ ಈ ಭಾಗವನ್ನು ಓದಿ:

The most controversial substance facing the Committee was the pesticide endosulfan, the listing of which a small but fervent minority of members strongly opposes. Endosulfan dominated the POPRC’s agenda during its previous two meetings. This year was a marked change, and indeed, several observers commented that as the number of countries banning endosulfan continues to grow, the writing is on the wall—it will be listed under the Stockholm Convention. This recognition was perhaps best illustrated by the Committee’s focus on the availability of alternatives to endosulfan, as stakeholders looked ahead to COP5’s negotiations on possible time-limited exemptions for specific uses. Nevertheless, India once again objected to the procedure by which endosulfan has been advanced through each stage of review, and opposed any further action on the substance prior to COP5. While this concern with procedure took little time in plenary discussion, India’s opposition compelled the Committee to choose either to set the chemical aside or to vote to move it forward. While several members emphasized their reluctance to vote, 24 Committee members did vote to recommend that COP5 list the substance in Annex A with exemptions. As a result of this decision, endosulfan will be the only chemical recommended for listing under the Convention at COP5 in April 2011.

 

ಅದಕ್ಕೇ ಕೇರಳದ ಮುಖ್ಯಮಂತ್ರಿ ವಿ ಎಸ್ ಅಚ್ಯುತನಂದನ್ ಈ ಕುರಿತು ಭಾರತದ ನಡೆ ನಾಚಿಕೆಗೇಡಿನದು ಎಂದು ಟೀಕಿಸಿ ಈ ಬಗ್ಗೆ ಸರ್ಕಾರವು ಸಾರ್ವಜನಿಕರಿಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಯಾವಾಗಲೂ ಪರಿಸರ ರಕ್ಷಣೆಯ ಬಗ್ಗೆ ಮಾತನಾಡುವ ಕೇಂದ್ರ ಸಚಿವ ಜೈರಾಂ ರಮೇಶ್ ಈ ಬಗ್ಗೆ ಏನು ಹೇಳುತ್ತಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ನಿಲುವು ಹೇಗಿರಬೇಕು, ಏನಿರಬೇಕು ಎಂದು ಒಂದು ರಾಜ್ಯಸರ್ಕಾರವಾಗಿ ಕೇರಳವು ವರ್ತಿಸುವ ಈ ರೀತಿಯನ್ನು ಪ್ರಜಾತಂತ್ರದ ಹಕ್ಕು ಎಂದು ಭಾವಿಸಿ ಸ್ವಾಗತಿಸಬೇಕು. ಕೇರಳ ಸರ್ಕಾರಕ್ಕೆ ಇರುವ ಈ ಬಗೆಯ ಕ್ರಿಯಾಶೀಲತೆ ಉಳಿದ ರಾಜ್ಯಗಳಿಗೆ ಬರುವುದು ಯಾವಾಗಲೋ?

ಆದರೆ ಇದೇ ವೇಳೆ, ಎಂಡೋಸಲ್ಫಾನನ್ನು ನಿಷೇಧಿಸುವುದಾಗಿ ಆಸ್ಟ್ರೇಲಿಯಾ ಪ್ರಕಟಿಸಿದೆ. ಎಂಡೋಸಲ್ಫಾನ್ ಆವಿಯಾಗಿ ಪರಿಸರದಲ್ಲೇ ಹರಡಿಕೊಳ್ಳುತ್ತದೆ. ಜೀವಿಗಳ ಕೊಬ್ಬಿನಲ್ಲಿ ಇವು ಕರಗಿಹೋಗುತ್ತವೆ. ಇದು ಭಾರೀ ಅಪಾಯಕಾರಿ ಎಂದು ಆಸ್ಟ್ರೇಲಿಯಾ ಹೇಳಿದೆ. ಇದರೊಂದಿಗೆ ಎಂಡೋಸಲ್ಫಾನನ್ನು ನಿಷೇಧಿಸಿದ ೬೦ಕ್ಕೂ ಹೆಚ್ಚು ದೇಶಗಳ ಸಾಲಿಗೆ ಆಸ್ಟ್ರೇಲಿಯಾ ಸೇರಿದಂತಾಗಿದೆ. ಆದರೆ ಒಟ್ಟಾರೆ ಆಸ್ಟ್ರೇಲಿಯಾದಿಂದ ಎಂಡೋಸಲ್ಫಾನ್ ಪೂರ್ತಿಯಾಗಿ ತೊಲಗಲು ಎರಡು ವರ್ಷಗಳ ಪ್ರಕ್ರಿಯೆ ನಡೆಯಲಿದೆ. ಇದನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಟಾಕ್ಸಿಕ್ ನೆಟ್‌ವರ್ಕ್ ತೀವ್ರವಾಗಿ ವಿರೋಧಿಸಿದೆ.  ಈ ಬಗ್ಗೆ ಅದು ನೀಡಿದ ಪತ್ರಿಕಾ ಹೇಳಿಕೆಯನ್ನು ಓದಿ:

Regulator finally acts to ban endosulfan

The National Toxic Network (NTN) today welcomes the announcement by the Australian Pesticides and Veterinary Medicines Authority (APVMA) to deregister all endosulfan pesticide products in Australia, but says the agency took too long to make the decision and has jeopardised the environment as a result.

“We’ve said for many years endosulfan could not be ‘risk managed’ and the decision today finally vindicates our position,” says Ms Jo Immig, NTN coordinator.

“The APVMA has stated that ‘off site movement (spray drift and run-off) could lead to significant adverse chronic and sub chronic environmental effects’ as its reason for removing the registration”.

“What really concerns us is that the APVMA has taken so long to remove this dangerous pesticide and in its decision has stated it will allow the environment to be exposed for another two years as stocks of the chemical are used up,” she says.

“Over 70 other countries have already banned endosulfan and an international  scientific assessment has already shown that it is a persistent organic pollutant. It’s likely to be listed on the Stockholm Convention for global phase out in the near future”.

“Endosulfan is an organochlorine pesticide used by a number of Australian agricultural industries.  It persists and bioaccumulates in the environment and is toxic. Why would any regulator allow a chemical with these characteristics to be used for a moment longer?” she says.

“The APVMA did not act quickly enough when the science was clear and as a result the environment has been put at risk. The regulator needs to answer questions about its slowness in acting to protect the Australian environment”.

ಭಾರತದಲ್ಲಿ ಹೀಗೆ ಎಂಡೋಸಲ್ಫಾನ್ ನಿಷೇಧಕ್ಕೆ ಹಲವು ಗಣ್ಯರು, ಸಂಸ್ಥೆಗಳು ಒತ್ತಾಯಿಸಿವೆ. ಆದರೆ ಭಾರತ ಸರ್ಕಾರದ್ದು ಜಾಣಗಿವುಡು.

ಗಮನಿಸಿ: ಈ ಸಭೆಯಲ್ಲಿ ಬೇರೆ ಬೇರೆ ವಿಷಗಳ ಕುರಿತ ಹಲವು ನಿರ್ಣಯಗಳೂ ಆದವು; ಮುಂದಿನ ಸಭೆಯಲ್ಲಿ ಏನೇನು ಚರ್ಚಿಸಬೇಕು ಎಂಬ ನಿರ್ಧಾರವೂ ಆಯಿತು. ಹೆಕ್ಸಾಬ್ರೋಮೋಸೈಕ್ಲೋಡೋಡೆಕೋನ್ (ಎಚ್‌ಬಿಸಿಡಿ) ಎಂಬ ರಾಸಾಯನಿಕದ ಅಪಾಯಗಳನ್ನು ದಾಖಲಿಸಿ ಮುಂದಿನ ಸಭೆಯಲ್ಲಿ (ಏಪ್ರಿಲ್ ೨೦೧೧)  ಈ ಬಗ್ಗೆ ಪರಾಮರ್ಶೆ ನಡೆಸುವ ತೀರ್ಮಾನಕ್ಕೆ ಬರಲಾಯಿತು. ಈ ರಾಸಾಯನಿಕವನ್ನು ಜವಳಿ ಉದ್ಯಮದಲ್ಲಿ ಕೋಟಿಂಗ್‌ಗೆ ಮತ್ತು ವಿದ್ಯುತ್ ಉಪಕರಣಗಳಿಗೆ ಬಳಸುತ್ತಾರೆ.

1 Comment

  1. Murali

    its very sad that india is not even considering banning endosulphan even after so many disasters..

Leave a Reply

Theme by Anders Norén