ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಮಾಹಿತಿ / ಲೇಖನ, ಶಂಕರ್ ಶರ್ಮ | SHANKAR SHARMA

ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಿಂದ ಲಾಭವಿದೆಯೆ?

ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ)ಯಿಂದ  ೪೦೦೦ ಮೆಗಾವಾಟ್‌ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಹೊಸ ವಿದ್ಯುತ್‌ ಸ್ಥಾವರದ ನಿರ್ಮಾಣವು  ಬಿಜಾಪುರ ಜಿಲ್ಲೆಉ ಕೂಡಿಗಿಯಲ್ಲಿ ಇನ್ನೇನು ಆರಂಭವಾಗಲಿದೆ. ಇದೇ ರೀತಿ ಕರ್ನಾಟಕದಲ್ಲಿ ಇನ್ನೂ ಹಲವು ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ವಿಸ್ತರಣೆ, ಯರಮರಸ್‌, ಯೆಡ್ಲಾಪುರ, ಆಫಜಲ್‌ಪುರ, ಹಿಡಕಲ್‌ ಅಣೆಕಟ್ಟು, ಕೌಶಿಕ – ಹೀಗೆ ನಿರ್ಮಿಸಲು ಉದ್ದೇಶಿಸಿರುವ ಇತರೆ ಸ್ಥಾವರಗಳು. ಸಾಮಾಜಿಕವಾಗಿ, ಪಾರಿಸರಿಕವಾಗಿ ಮತ್ತು ಆರ್ಥಿಕ  ಹಿನ್ನೆಲೆಯಲ್ಲಿ ಈ ಕಲ್ಲಿದ್ದಲು ಸ್ಥಾವರಗಳು  ಉಂಟು ಮಾಡುವ ಭಾರೀ ದುಷ್ಪರಿಣಾಮಗಳನ್ನು ಗಮನಿಸಿದರೆ, ಇಂಥ ವಿದ್ಯುತ್‌ ಸ್ಥಾವರಗಳಿಂದ ಸಮಾಜಕ್ಕೆ ಆಗುವ ಲಾಭಗಳೇನು ಎಂಬ ಬಗ್ಗೆ ಸೂಕ್ತ ಸಾರ್ವಜನಿಕ ಚರ್ಚೆಯಾಗಬೇಕಿದೆ; ಇವುಗಳ ಲಾಭ ಮತ್ತು ಖರ್ಚುಗಳ ನೈಜ ವಿಶ್ಲೇಷಣೆ ಆಗಬೇಕಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕೂಡಿಗಿಯ ಉಷ್ಣಸ್ಥಾವರದ ಬಗ್ಗೆ ಸೂಕ್ತ ವಿಶ್ಲೇಷಣೆ ನಡೆದು ಈ ಸ್ಥಾವರವು ನಾಡಿನ ಹಿತದೃಷ್ಟಿಯಲ್ಲಿದೆಯೆ ಎಂಬ ಬಗ್ಗೆ ಸಾರ್ವಜನಿಕರೇ ತೀರ್ಮಾನಿಸಬೇಕಿದೆ.

ಕರ್ನಾಟಕದಲ್ಲಿ  ಕಲ್ಲಿದ್ದಲೂ ಸೇರಿದಂತೆ ಯಾವುದೇ ಬಗೆಯ ಫಾಸಿಲ್‌ ಇಂಧನ ಮೂಲ (ಪಳೆಯುಳಿಕೆ ಇಂಧನ) ಇಲ್ಲ. ಈ ಇಂಧನವನ್ನು ದೂರದ ಪ್ರದೇಶಗಳಿಂದಲೇ ತರಬೇಕು. ಈಗಾಗಲೇ ಸ್ಥಾಪಿತವಾಗಿರುವ ವಿದ್ಯುತ್‌ ಸ್ಥಾವರದ ಆರ್ಥಿಕತೆ ನೀತಿಗಳ ಪ್ರಕಾರ ಕಲ್ಲಿದ್ದಲಿನ ಸ್ಥಾವರವು ಕಲ್ಲಿದ್ದಲನ್ನು ಎತ್ತುವ ಪ್ರದೇಶದಲ್ಲಿ ಅಥವಾ ವಿದ್ಯುತ್‌ ಬೇಡಿಕೆ ಹೆಚ್ಚು ಇರುವ ಸ್ಥಳದಲ್ಲಿ ಸ್ಥಾಪಿತವಾದರೇನೇ ಹೆಚ್ಚು ಉಪಯುಕ್ತ ಮತ್ತು ಕಾರ್ಯಸಾಧ್ಯ. ಕೂಡಿಗಿಯೂ ಸೇರಿದಂತೆ ಈಗ ಪ್ರಸ್ತಾವನೆಯಲ್ಲಿರುವ ಯಾವುದೇ ಕಲ್ಲಿದ್ದಲು ಸ್ಥಾವರವೂ ಕಲ್ಲಿದ್ದಲಿನ ಗಣಿಯ ಬಳಿಯೂ ಇಲ್ಲ; ಅಥವಾ ಈ ಪ್ರದೇಶಗಳು ವಿದ್ಯುತ್ತಿನ  ಅತಿ ಬೇಡಿಕೆಯ ಸ್ಥಳಗಳ  ಹತ್ತಿರವೂ ಇಲ್ಲ.  ಆದ್ದರಿಂದಲೇ ಈ ಹಿಂದೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕರ್ನಾಟಕದಲ್ಲಿ ಕಲ್ಲಿದ್ದಲು ಸ್ಥಾವರವು  ಕಾರ್ಯಸಾಧ್ಯವಲ್ಲ ಎಂದೇ ಹೇಳಿ ಅಂಥದ್ದೊಂದು ಕಲ್ಲಿದ್ದಲು ಸ್ಥಾವರವನ್ನು ಛತ್ತೀಸ್‌ಗಢದಲ್ಲಿ ಸ್ಥಾಪಿಸಲಾಗುವುದು ಎಂದು ಅಲ್ಲಿ ಕೆಲಸಕಾರ್ಯವನ್ನು ಆರಂಭಿಸಿದ್ದರು.

ಅನಿಶ್ಚಿತ ಕಲ್ಲಿದ್ದಲು ಪೂರೈಕೆಯಿಂದಾಗಿ ರಾಯಚೂರು ಮತ್ತು ಬಳ್ಳಾರಿಗಳಲ್ಲಿ ಈಗಾಗಲೇ ಸ್ಥಾಪನೆಗೊಂಡಿರುವ ಕಲ್ಲಿದ್ದಲು ಸ್ಥಾವರಗಳು ಪದೇ ಪದೇ ತೊಂದರೆಗೆ ಒಳಗಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಎನ್‌ಟಿಪಿಸಿಯು ಕಲ್ಲಿದ್ದಲು ಪಡೆಯುವಲ್ಲಿ ಆದ್ಯತೆ ಹೊಂದಿದ್ದರೂ, ಇಂಥ ಕಲ್ಲಿದ್ದಲನ್ನು ಅತಿದೂರದಿಂದ ತರುವ ಹೊಣೆಗಾರಿಕೆಯ ಹಿಂದಿನ ತೊಂದರೆ ತಾಪತ್ರಯಗಳು ವಿಪರೀತವೇ ಹೌದು. ದೇಶದ ಇತರೆ ಎನ್‌ ಟಿ ಪಿ ಸಿ ಚಾಲಿತ ಸ್ಥಾವರಗಳೂ ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿವೆ ಎಂಬ ವರದಿಗಳೂ ಬಂದಿವೆ. ಹಲವಾರು ತಾಂತ್ರಿಕ, ವ್ಯಾವಹಾರಿಕ ಮತ್ತು ಬೆಲೆ ಸಂಬಂಧಿತ ಸಂಗತಿಗಳಿಂದಾಗಿ  ಕೂಡಿಗಿ  ಸ್ಥಾವರಕ್ಕೆ ಯಥೋಚಿತ ಕಲ್ಲಿದ್ದಲಿನ ಪೂರೈಕೆಯ ಭರವಸೆಯನ್ನು ಪಡೆಯುವುದೇ ಕಷ್ಟ.

ಈ ಯೋಜನೆಗೆ ೩೨೦೦ ಎಕರೆಗಳಷ್ಟು ಭೂಪ್ರದೇಶ ಬೇಕಿದೆ. ಇದಕ್ಕಾಗಿ ಗುರುತಿಸಿರುವ ಎಲ್ಲಾ ಭೂಪ್ರದೇಶವೂ ಕೃಷಿಯೋಗ್ಯವಲ್ಲ  ಎಂದು ಹೇಳುವುದು ಸರಿಯಲ್ಲ. ಹೀಗೆ ಕೃಷಿಭೂಮಿಯನ್ನು ಈ ಯೋಜನೆಗೆ ಬಳಸುವುದರಿಂದ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆಗಳ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ. ಜನಸಂಖ್ಯೆ ಬೆಳೆಯುತ್ತಿರುವ ಕರ್ನಾಟಕದಲ್ಲಿ, ಹಲವು ಯೋಜಿತ ಸ್ಥಾವರಗಳಿಗಾಗಿ ಕೃಷಿಭೂಮಿಯನ್ನು ಕೊಡಲು ನಾವು ಸಿದ್ಧರೆ?

ಈ ಸ್ಥಾವರಗಳನ್ನು ಯೋಜಿಸಿರುವ ಉತ್ತರ ಕರ್ನಾಟಕದ ಹಲವು ಪ್ರದೇಶಗಳು ಹಲವು ದಶಕಗಳಿಂದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆಲಮಟ್ಟಿ, ಹಿಡಕಲ್‌, ಮಲಪ್ರಭಾ, ತುಂಗಭದ್ರಾ, ನಾರಾಯಣಪುರ ಮುಂತಾದ ಹಲವು ಜಲಾಶಯಗಳನ್ನು ಮೂಲತಃ ಕಟ್ಟಿದ್ದೇ ಈ ಪ್ರದೇಶಗಳ ಕೃಷಿಭೂಮಿಗೆ ಮತ್ತು ಮನೆಗಳಿಗೆ ನೀರನ್ನು ಸರಬರಾಜು ಮಾಡಲೆಂದು. ಇವುಗಳಲ್ಲಿ ಆಲಮಟ್ಟಿಯೂ ಸೇರಿದಂತೆ ಹಲವು ಜಲಾಶಯಗಳು  ಬೇಸಗೆಯಲ್ಲಿ  ಒಣಗಿಹೋಗುವುದು ಸಾಮಾನ್ಯ. ಮಾಧ್ಯಮಗಳಲ್ಲಿ ವರದಿಯಾದಂತೆ ಎನ್‌ಟಿಪಿಸಿಯ ಉದ್ದೇಶಿತ ಕೂಡಿಗಿ ಸ್ಥಾವರಕ್ಕೆ ೫.೨ ಟಿ ಎಂ ಸಿ ನೀರನ್ನು ಬಳಸುವ ಉದ್ದೇಶವಿದ್ದರೆ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನರಿಗೆ ಉಂಟಾಗುವ ಈ ಪ್ರಮಾಣದ ನೀರಿನ ಕೊರತೆಯನ್ನು ಹೇಗೆ ಭರಿಸಲಾಗುವುದು? ನೀರಿನ ಬಿಕ್ಕಟ್ಟು ಇನ್ನೂ ಉಲ್ಬಣಿಸುವುದು ಎಂದು ಯಾರಾದರೂ ಊಹಿಸಬಹುದು. ಬೇಸಗೆಯ ಕಾಲದಲ್ಲಂತೂ ಹೀಗೆ ನೀರನ್ನು ಬೇರೆಡೆಗೆ ಬಳಸುವುದಕ್ಕೇ ಭಾರಿ ವಿರೋಧ ವ್ಯಕ್ತವಾಗಬಹುದು.

ಉದ್ಯಮೀಕರಣಕ್ಕೆ ನೀರಿನ  ಕೊರತೆಯೇ ಪ್ರಮುಖ ಕಾರಣ ಎಂದು ಕರ್ನಾಟಕ ಸರ್ಕಾರವು ಈಗಾಗಲೇ ಗುರುತಿಸಿದೆ. ರಾಜ್ಯದ ಶೇ. ೭೭ರಷ್ಟು ಭೂಪ್ರದೇಶವು ಒಣ ಅಥವಾ ಅರೆ-ಒಣ ಪ್ರದೇಶ. ಪ್ರತಿವರ್ಷ ೭೫೦ ಮಿಮೀಗೂ ಕಡಿಮೆ ಮಳೆಯನ್ನು ಪಡೆಯುವ ಮೂರನೇ ಎರಡರಷ್ಟು ಪ್ರದೇಶವು ಬರಗಾಲಕ್ಕೆ ತುತ್ತಾಗುವ ಅಪಾಯ ಯಾವಾಗಲೂ  ಇದ್ದೇ ಇದೆ. ಈ ದಿನಗಳಲ್ಲಿ ಬರಗಾಲವು ವ್ಯಾಪಿಸಿದ್ದೂ ಇದೇ ಕಾರಣಕ್ಕೆ ಎಂಬುದನ್ನು ಗಮನಿಸಬೇಕಿದೆ.ಬರಗಾಲಕ್ಕೆ ತುತ್ತಾಗುವ ಸಂಭಾವ್ಯ ಪ್ರದೇಶದ ಗಾತ್ರದಲ್ಲಿ ಕರ್ನಾಟಕವು ರಾಜಸ್ಥಾನದ ನಂತರದ, ಅಂದರೆ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದಿದೆ. ೩೦ ಜಿಲ್ಲೆಗಳ ಪೈಕಿ ೧೮ರಲ್ಲಿ, ಅಂದರೆ ೧೭೬ ತಾಲೂಕುಗಳ ಪೈಕಿ ೮೮ ತಾಲೂಕುಗಳು -ಅರ್ಥಾತ್‌ ರಾಜ್ಯದ ಶೇ. ೫೪ರಷ್ಟು ಭೂಪ್ರದೇಶವು ಬರಗಾಲಪೀಡಿತ ಪ್ರದೇಶವಾಗಿದೆ. ಆದ್ದರಿಂದ ಯಾವುದೇ ರಾಜ್ಯವು ತನ್ನ ಅಭಿವೃದ್ಧಿ ಯೋಜನೆಯಲ್ಲಿ ಬರಗಾಲ ಪೀಡಿತ ಪ್ರದೇಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ  ರಾಜ್ಯವು ಎನ್‌ಟಿಪಿಸಿ ಸ್ಥಾವರಕ್ಕೆ ೫.೨ ಟಿಎಂಸಿ ನೀರನ್ನು ಕೊಡಲು ಸಾಧ್ಯವಿದೆಯೆ? ಹೀಗೆಯೇ ಇತರೆ ಕಲ್ಲಿದ್ದಲು ಸ್ಥಾವರಗಳಿಗೂ ನೀರನ್ನು  ನೀಡಲು ಸಾಧ್ಯವಿದೆಯೆ?

ಎನ್‌ಟಿಪಿಸಿಯ ಸ್ಥಾವರವು ಭಾರೀ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಸುಟ್ಟು ಪರ್ವತಗಟ್ಟಳೆ ಬೂದಿಯನ್ನು ಹೊರಬಿಡಲಿದೆ. ಅಲ್ಲದೆ  ಭಾರಿ ಪ್ರಮಾಣದಲ್ಲಿ ಇಂಗಾಲದ ಡಯಾಕ್ಸೈಡ್‌, ಗಂಧಕದ ಡಯಾಕ್ಸೈಡ್‌, ಪಾದರಸ ಮತ್ತು ಇತರೆ ವಿಷಾನಿಲಗಳನ್ನು ತ್ಯಾಜ್ಯವಾಗಿ ಹೊರಬಿಡಲಿದೆ.

ಹೀಗೆ ಭಾರಿ ಪ್ರಮಾಣದಲ್ಲಿ ಪರಿಸರವನ್ನು ಹಾಳುಗೆಡಹುವ ತ್ಯಾಜ್ಯಗಳಿಂದ ಗಂಭೀರವಾದ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ;  ಎರಡೂ ಜಿಲ್ಲೆಗಳ ತೋಟಗಾರಿಕೆ ಮತ್ತು  ಆಹಾರ ಬೆಳೆಗಳ ಮೇಲೆ  ದುಷ್ಪರಿಣಾಮ ಉಂಟುಮಾಡುತ್ತವೆ.  ಮಾಧ್ಯಮಗಳ ವರದಿಯಂತೆ, ಈ ಎನ್‌ ಟಿ ಪಿ ಸಿ ಸ್ಥಾವರವು ಒಮ್ಮೆ ಸಂಪೂರ್ಣವಾಗಿ ಕಾರ್ಯಚರಣೆ ಆರಂಭಿಸಿದ ಮೇಲೆ ಬಹುಶಶಃ ಪ್ರತಿದಿನವೂ ೮೦೦  ಟನ್‌  ಗಂಧಕದ ಡಯಾಕ್ಸೈಡ್‌, ೧೬೦ ಟನ್‌  ನೈಟ್ರೋಜನ್‌ ಡಯಾಕ್ಸೈಡ್‌, ೨೦ ಟನ್‌ ಘನತ್ಯಾಜ್ಯ (ಇದರಲ್ಲಿ ಶೇ. ೩೪ರಷ್ಟು ಹಾರುಬೂದಿ; ಇದುಉಶೇ. ೯೯.೯ರಷ್ಟು ಎಲೆಕ್ಟ್ರೋಸ್ಟಾಟಿಕ್‌ ಪ್ರೆಸಿಪಿಟೇಟರ್‌ ದಕ್ಷತೆಯನ್ನು  ಹೊಂದಿದೆ) ಮತ್ತು  ೨೪-೩೪ ಸಾವಿರ ಟನ್‌ ತ್ಯಾಜ್ಯವನ್ನು  ಬೂದಿಯನ್ನು ಹೊರಬಿಡಲಿದೆ.   ಭಾರತೀಯ ಕಲ್ಲಿದ್ದಲು ಸ್ಥಾವರಗಳ ಇನ್ನೊಂದು ಪ್ರಮುಖ ತ್ಯಾಜ್ಯವೆಂದರೆ ಪಾದರಸ. ಅಲ್ಲದೆ ಈ ಕಲ್ಲಿದ್ದಲುಸ್ಥಾವರಗಳು ಹೊರಚೆಲ್ಲಬಹುದಾದ ಸಲ್ಫರ್‌ ಡಯಾಕ್ಸೈಡ್‌, ನೈಟ್ರೋಜನ್‌ ಡಯಾಕ್ಸೈಡ್‌, ಪಾದರಸಗಳ ತ್ಯಾಜ್ಯದ ಪರಿಮಿತಿಯ ಮಾನದಂಡಗಳೇ ಇಲ್ಲ.  ಸುಮಾರು ೪೦ ವರ್ಷಗಳ ಕಾಲ ಈ ಪ್ರದೇಶಗಳ ಜನರು ಈ ಮಾಲಿನ್ಯವನ್ನು ಎದುರಿಸಿಕೊಂಡು ಬದುಕುತ್ತಾರೆ?  ಇಲ್ಲಿನ ಜಲ-ಜೀವ ಸಂಕುಲಗಳು ಬದುಕುತ್ತವೆ? ಇದರಿಂದ ಆಲಮಟ್ಟಿ ಅಣೆಕಟ್ಟಿನ ನೀರಿನ ಮಾಲಿನ್ಯದ ಪ್ರಮಾಣ ಮತ್ತು  ಕೃಷ್ಣಾ ನದಿಯ ಮಾಲಿನ್ಯದ ಪ್ರಮಾಣ  – ಇವುಗಳೂ ಸಮ್ಮತಿಸಬಲ್ಲ ಪ್ರಮಾಣದಲ್ಲೇ ಇರುತ್ತವೆಯೆ?

ಕಲ್ಲಿದ್ದಲು ಸ್ಥಾವರದ ಈ ಎಲ್ಲ ಸಮಸ್ಯೆಗಳು ಮತ್ತು ಅದಕ್ಕೇ ಸ್ವತಃ ಬೇಕಾದ ಇಂಧನವನ್ನು ಗಮನದಲ್ಲಿ ಇಟ್ಟುಕೊಂಡರೆ, (೮೦{6b09db3aa5f93902f5b13d7cd1ca34c48af3bc9efd698eb6a237d5b106094f0c} ಪೀಕ್‌ ಲೋಡ್‌ ಫ್ಯಾಕ್ಟರ್‌ ಲೆಕ್ಕದಲ್ಲಿ ಶೇ. ೧೦ರಷ್ಟು ಉತ್ಪಾದಿತ ವಿದ್ಯುತ್‌ ಆಕ್ಸಿಲರಿ – ಅಂದರೆ ಸ್ವಂತಕ್ಕೆ – ಬಳಕೆಯಾಗುತ್ತದೆ), ಈ ಸ್ಥಾವರದಿಂದ ಸರಾಸರಿ ೨೮೮೦ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ ಎಂದು ಅಂದಾಜು ಮಾಡಬಹುದು. ವರದಿಗಳ ಪ್ರಕಾರ ಕರ್ನಾಟಕಕ್ಕೆ ಇದರಲ್ಲಿ ಶೇ. ೫೦ರಷ್ಟು ಪಾಲು ಸಿಗುತ್ತದೆ. ಅಂದರೆ ೧೪೪೦ ಮೆಗಾವಾಟ್‌. ಕರ್ನಾಟಕದ ವಿದ್ಯುತ್‌ ವ್ಯವಸ್ಥೆಯಲ್ಲಿ ಇರುವ ಸೋರಿಕೆ ಪ್ರಮಾಣವು ಶೇ. ೨೫ರಷ್ಟು ಇರುವುದನ್ನು ಗಮನಕ್ಕೆ ತೆಗೆದುಕೊಂಡರೆ, ರಾಜ್ಯದ ಪ್ರಗತಿಗಾಗಿ ಮತ್ತು ಆರ್ಥಿಕತೆಗಾಗಿ ಕೇವಲ ೧೦೮೦ ಮೆಗಾವಾಟ್‌ ವಿದ್ಯುತ್‌ ಸಿಗುತ್ತದೆ ಎಂಬ ಅಂದಾಜು ಮಾಡಬಹುದು. ಭೂಮಿ, ನೀರು, ಮಾಲಿನ್ಯ, ಕೃಷಿ / ತೋಟಗಾರಿಕೆ ಭೂಮಿಯ ನಷ್ಟ – ಇವೆಲ್ಲವನ್ನೂ ನೋಡಿದರೆ ಹೀಗೆ ಸಿಗುವ ವಿದ್ಯುತ್ತಿನ ಪ್ರಮಾಣವು ತುಂಬಾ ಕನಿಷ್ಠವೇ ಆಗಿದೆ. ಹಾಗೆಯೇ ರಾಜ್ಯಕ್ಕೆ ಒದಗುವ ನಷ್ಟವನ್ನು  ಲೆಕ್ಕ ಹಾಕಿದರೆ ಇತರೆ ಕಲ್ಲಿದ್ದಲು ಆಧಾರಿತ ಸ್ಥಾವರಗಳಿಂದ ಸಿಗುವ ಲಾಭವೂ ತೀರಾ ಕಡಿಮೆಯೇ.

ಈ ಹಿನ್ನೆಲೆಯಲ್ಲಿ ಉತ್ಪಾದನೆ, ಸಾಗಣೆ, ವಿತರಣೆ ಮತ್ತು ಬಳಕೆಯ ದಕ್ಷತೆಯನ್ನು ಸುಧಾರಿಸುವ ಕ್ರಮಗಳಿಂದಲೇ ರಾಜ್ಯವು ೧೦೮೦ ಮೆಗಾವಾಟ್‌ ವಿದ್ಯುತ್ತಿನ ಹೆಚ್ಚುವರಿ ಉತ್ಪಾದನೆಯನ್ನು ಸಾಧಿಸಬಹುದು. ಈಗಾಗಲೇ ಸ್ಥಾಪಿತವಾಗಿರುವ ಲೆಕ್ಕಾಚಾರಗಳ ಪ್ರಕಾರ ಹೀಗೆ ಸುಧಾರಣೆ ಮಾಡುವ ಕ್ರಮಗಳಿಗೆ ತಲುವು ವೆಚ್ಚವು ಕಲ್ಲಿದ್ದಲು ಸ್ಥಾವರಗಳ ಸ್ಥಾಪನೆಯ ವೆಚ್ಚದ ಶೇ. ೨೫ರಷ್ಟು ಮಾತ್ರ. ಡಿಮ್ಯಾಂಡ್‌ ಸೈಡ್‌ ಮ್ಯಾನೇಜ್‌ಮೆಂಟ್‌, ಇಂಧನ ಸಂರಕ್ಷಣೆ ಮತ್ತು ಬಯೋಮಾಸ್‌, ಗಾಳಿ / ಸೌರ ವಿದ್ಯುತ್‌ ಮೂಲಗಳಮಿಶ್ರ ಬಳಕೆ ಮಾಡುವ ಮೂಲಕ ಮರುಬಳಕೆ ಇಂಧನಮೂಲಗಳನ್ನು ವ್ಯಾಪಕವಾಗಿ ಬಳಸುವುದರಿಂದ ಸದ್ಯೋಭವಿಷ್ಯತ್ತಿನ ವಿದ್ಯುತ್‌ ಬೇಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸಬಹುದಾಗಿದೆ.

  • ಪರ್ಯಾಯ ಒಂದು: ಸಾಗಾಣಿಕೆ ಮತ್ತು ವಿತರಣೆಯಲ್ಲಿ ಆಗುತ್ತಿರುವ ನಷ್ಟದ ಪ್ರಮಾಣವನ್ನು ಶೇ. ೨೫ರಿಂದ ಶೇ. ೫ಕ್ಕೆ ತಗ್ಗಿಸುವುದರಿಂದ ನಾವು ೧೨೦೦ ಮೆಗಾವಾಟ್‌ಗಳ ಹೆಚ್ಚುವರಿ ವಿದ್ಯುತ್ತನ್ನು  ಪಡೆಯಬಹುದು.
  • ಪರ್ಯಾಯ ಎರಡು:  ನೀರಾವರಿ ಪಂಪ್‌ಸೆಟ್‌ (ಐಪಿ)ಗಳಲ್ಲಿನ ತಾಂತ್ರಿಕ ವಿದ್ಯುತ್ ನಷ್ಟವನ್ನು ತಗ್ಗಿಸುವುದರಿಂದ ೧೧೦೦ ಮೆಗಾವಾಟ್‌ ವಿದ್ಯುತ್ತನ್ನು ಹೆಚ್ಚುವರಿಯಾಗಿ ಪಡೆಯಬಹುದು.
  • ಪರ್ಯಾಯ ಮೂರು: ಸಿ ಎಫ್‌ ಎಲ್‌ಗಳ ಬಳಕೆ, ಸಮರ್ಥ ವಸತಿ ವಿದ್ಯುತ್‌ ಸಾಧನಗಳ ಬಳಕೆಯಂಥ ಡಿಮ್ಯಾಂಡ್‌ ಸೈಡ್‌ ಮ್ಯಾನೇಜ್‌ಮೆಂಟ್‌ನಿಂದ (ಬೇಡಿಕೆ ಬದಿಯ ನಿರ್ವಹಣೆ) ೧೧೦೦ ಮೆಗಾವಾಟ್‌ ವಿದ್ಯುತ್ತನ್ನು ಹೆಚ್ಚುವರಿಯಾಗಿ ಪಡೆಯಬಹುದು.

(ಇಲ್ಲಿ ಉಳಿಸಿದ  ವಿದ್ಯುತ್ತೇ ಹೆಚ್ಚುವರಿ ವಿದ್ಯುತ್‌ ಎಂದು ತಿಳಿಯಬೇಕು).

ಎನ್‌ ಟಿ ಪಿ ಸಿ ಸ್ಥಾವರದ ಮೂಲಕ ಪಡೆಯುವ ವಿದ್ಯುತ್‌ ಪ್ರಮಾಣದಷ್ಟನ್ನೇ ಇತರೆ ಪರ್ಯಾಯ ಮಾರ್ಗಗಳ ಮೂಲಕ ಮತ್ತು ಕಡಿಮೆ ವೆಚ್ಚದಲ್ಲಿ ಪಡೆಯುವುದಕ್ಕೆ ಕರ್ನಾಟಕಕ್ಕೆ ಇನ್ನೂ ಹಲವು ಮಾರ್ಗಗಳಿವೆ. ಇದರಿಂದ ರಾಜ್ಯದ ಕೃಷಿ, ನೀರು ಮತ್ತು ಪರಿಸರದ ಮೇಲೆ ಯಾವುದೇ ಪರಿಣಾಮವೂ ಆಗುವುದಿಲ್ಲ. ಈ ಎಲ್ಲಾ  `ಮುಖಕ್ಕೆ ರಾಚುವ’ ಸಂಗತಿಗಳನ್ನು ಗಮನಕ್ಕೆ ತೆಗೆದುಕೊಂಡು ರಾಜ್ಯವು ತನ್ನ ಬೊಕ್ಕಸದ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವನ್ನು ಬಲಿಕೊಟ್ಟು ಹೊಸ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರ ಸ್ಥಾಪಿಸುವುದು ಎಷ್ಟು ಸರಿ ಎಂಬುದನ್ನು ಸಾರ್ವಜನಿಕರೇ ನಿರ್ಧರಿಸಬೇಕು. ಅದರಲ್ಲೂ  ತಾಂತ್ರಿಕ- ಆರ್ಥಿಕವಾಗಿ ಕಾರ್ಯಸಾಧ್ಯವಾದ ಮತ್ತು ಪಾರಿಸರಿಕವಾಗಿ ಸೂಕ್ತವಾದ ಪರ್ಯಾಯ ಮಾರ್ಗಗಳನ್ನು ಮೊದಲು ಕೈಗೆ ತೆಗೆದುಕೊಳ್ಳದೇ ಹೀಗೆ ಮಾಡುವುದು ಎಷ್ಟು ಸರಿ?

ದೇಶವು ತನ್ನ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಡಿಪಿ) ಪ್ರಮಾಣಕ್ಕೆ ಆಧಾರವಾದ ಇಂಧನದ ಬಳಕೆಯ ತೀವ್ರತೆಯನ್ನು ತಗ್ಗಿಸಲು ಇಡೀ ದೇಶವೇ ಚಿಂತಿಸುತ್ತಿದೆ. ಅಲ್ಲದೆ ರಾಜ್ಯವು ತನ್ನ ಜಲಮೂಲಗಳನ್ನು ಉಳಿಸಿಕೊಳ್ಳಲು ಮತ್ತು ಫಲವತ್ತಾದ ಕೃಷಿಭೂಮಿಯನ್ನು ಸಂರಕ್ಷಿಸಿಕೊಳ್ಳಲು ಯೋಗ್ಯ ಮಾರ್ಗಗಳನ್ನು ಹುಡುಕುತ್ತಿದೆ. ಇಂಥ ಸ್ಥಿತಿಯಲ್ಲಿ ಇಷ್ಟೆಲ್ಲ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳ ಒಟ್ಟಾರೆ ಪರಿಣಾಮ ಏನಾದೀತು ಎಂಬುದನ್ನು ವಾಸ್ತವಿಕ ನೆಲೆಯಲ್ಲಿ ಮತ್ತು ನಮ್ಮ ರಾಜ್ಯದ ಎಲ್ಲಾ ವರ್ಗಗಳ  ಕಲ್ಯಾಣದ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕು. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ರಾಜ್ಯ ಸರ್ಕಾರವು ಸಂಬಂಧಿತ ಭಾಗೇದಾರಿಗಳನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು, ಚರ್ಚಿಸಿ, ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಿಂದ ಸಮಾಜಕ್ಕೆ ಒಟ್ಟಾರೆ ಆಗುವ ಲಾಭ ಮತ್ತು ನಷ್ಟವನ್ನು ಲೆಕ್ಕ ಹಾಕಬೇಕಿದೆ.

 ಇದು ಕೊಂಚ ಬದಲಾವಣೆಗಳನ್ನು ಒಳಗೊಂಡ ಅನುವಾದಿತ ಲೇಖನ.  ಈ ಲೇಖನದ ಮೂಲ ಇಂಗ್ಲಿಶ್ ಲೇಖನ ಇಲ್ಲಿದೆ.

Benefits to Karnataka from NTPC’s coal power plant at Bijapur

Shankar Sharma, Power Policy Analyst, Thirthahally

————————————————

NTPC’s huge size coal power plant near Bijapur (4,000 MW) is about to begin construction shortly.  Similarly, a number of coal based power projects are planned in Karnataka.  Other major projects proposed are: extension of Raichur and Bellary thermal power projects; new projects at Yeramaras, Yedlapura,  Afzalpur,  Hidkal dam,  Kaushika, etc.  In view of the huge deleterious impacts of coal power plants on the social, environment and economic aspects of the state, there is an urgent need for an effective public debate on the costs and benefits to the society as a whole from such power plants.  In particular, the total costs and real benefits to our communities of Bijapur power plant need to be analysed so that the public can decide whether it is in the best interest of the state.

Karnataka has no known reserve of any type of fossil fuels, including coal, and hence coal for this plant has to be brought from a far off place.  As per well established power plant economics, a coal power plant would be most economical if it is situated either at coal pit head or near the electrical load centre.  All these power plants including Bijapur, being neither near a coal mine nor being a major load centre, cannot be suitable sites. For the same reasons the Chief Minister of Karnataka was known to have said some time ago that since setting up a coal power plant in Karnataka is not economical, a coal power plant was being set up in Chhattisgarh.

It should be highlighted that the existing coal power plants at Raichur and Bellary are repeatedly getting affected from unreliable coal supply.  Even though NTPC may get priority in getting coal supply, the logistics involved in bringing the same from the far off coal fields are immense.  NTPC power plants in the country are also reported to be suffering from shortage of coal. Due to various technical, logistics and price related issues adequate coal supply to Bijapur plant cannot be fully assured.

This project may need about 3,200 acres of land.  Not all of the land identified for this purpose can be said to be unfit for agriculture.  The agricultural lands to be diverted for this project will impact the agricultural/horticultural output in the state.  Can our state, with a growing population, afford to loose agricultural land for this plant and many other coal power plants planned in the state?

The districts of North Karnataka, where most of these coal power plants are proposed, have been facing water crises since many decades.  All the reservoirs such as Almatti, Hidkal, Malaprabha, Tunga Bhadra, Narayanapura etc.  in this region, were built primarily to supply water for households and agriculture in the region.  Most of these reservoirs, including Almatti, are getting dry generally during summer.  If 5.2 TMC/year of water is to be diverted to NTPC plant, as reported in the media, how will the people in the districts of Bijapur and Bagalakote be compensated for this quantity of water? One can realistically expect aggravated water shortage and hence popular opposition for diversion of water in summer months since it will result in deprivation of water to the locals.

The Karnataka Government has already identified water as the biggest impediment for industrialisation.  About 77{6b09db3aa5f93902f5b13d7cd1ca34c48af3bc9efd698eb6a237d5b106094f0c} of the total geographical area of the state is arid or semi‐arid; drought is a threat to reckon with as two thirds of the state receives less than 750 mm rainfall per annum. Karnataka ranks second in India, next only to Rajasthan, in terms of total geographical area prone to drought. 54{6b09db3aa5f93902f5b13d7cd1ca34c48af3bc9efd698eb6a237d5b106094f0c} of total geographical area of the state is drought prone, affecting 88 of 176 taluks and 18 of the 33 districts.  Global Warming is projected to severely impact our state worsening the water problem.  Hence the drought prone characteristics of the sate should be a critical consideration for any developmental plan for the state.  In this grim scenario, can the state afford to divert 5.2 TMC per year for this NTPC plant?  Can we also afford to divert such huge quantities of water for other coal plants also?

The NTPC plant will burn enormous quantity of coal and generate mountains of ash, particulate matter, huge quantities of CO2,  Sulphur di-oxide and mercury and other flue gases.  Such a high level of pollution of the environment invariably leads to serious health problems and will affect horticulture and food crops in the two districts.  As per media reports this NTPC plant,  when fully commissioned, may emit around 800 ton per day (tpd) of SO2 (at 100 per cent load factor, 0.7 per cent sulphur content in coal), 160 tpd of NO2 and 20 tpd of particulate matter (at 34 per cent ash content, 99.9 per cent electrostatic precipitator efficiency) and ash around 24,000-30,000 tpd. Emission of Mercury is another concern from Indian coal power plants. There appears to be no formal emission standards for SO2, NOx and mercury emissions in coal-based power plants.  How can the people, flora and fauna in the region face this much of pollution year after year for about 40 years?  Will the resultant pollution of water in Almatti dam and the Krishna river be acceptable?

Taking into account the constraints of a coal power plant and the requirement for its own use (80{6b09db3aa5f93902f5b13d7cd1ca34c48af3bc9efd698eb6a237d5b106094f0c} PLF; 10{6b09db3aa5f93902f5b13d7cd1ca34c48af3bc9efd698eb6a237d5b106094f0c} aux. consumption), one can expect a daily maximum output of about 2,880 MW on an average.  As per reports Karnataka will get 50{6b09db3aa5f93902f5b13d7cd1ca34c48af3bc9efd698eb6a237d5b106094f0c} of this which will be 1,440 MW.  In view of the losses in Karnataka power system of about 25{6b09db3aa5f93902f5b13d7cd1ca34c48af3bc9efd698eb6a237d5b106094f0c}, about 1,080 MW only may be available for economic and welfare usage of the state.  This much power will be meager when compared to the enormous cost to the state in the form of land, water, pollution, loss of agricultural/horticultural production etc.  Similarly, the benefits of other coal power plants also will be meager when compared to the enormous cost to the state.

In this backdrop, a modest understanding of the electricity sector in Karnataka can clearly establish that the state can realise much more virtual additional capacity than 1,080 MW by efficiency improvement measures alone in generation, transmission, distribution and utilisation.  As per well established norms these measures are expected to cost only about 25{6b09db3aa5f93902f5b13d7cd1ca34c48af3bc9efd698eb6a237d5b106094f0c} of the cost of new coal power plants without any other attendant costs such as land, water and pollution.  Additionally, the measures like Demand Side Management, energy conservation and widespread use of distributed type renewable energy sources such as roof top solar power, community based bio-mass, hybrid of wind/solar etc. can meet most of the additional electricity demand satisfactorily in the near future.

  • Alternative Option 1: Loss reduction in transmission and distribution from 25{6b09db3aa5f93902f5b13d7cd1ca34c48af3bc9efd698eb6a237d5b106094f0c} to 5{6b09db3aa5f93902f5b13d7cd1ca34c48af3bc9efd698eb6a237d5b106094f0c} can provide about 1,200 MW virtual additional power.
  • Alternative Option 2: Technical loss reduction in IP set can provide about 1,100 MW virtual additional power.
  • Alternative Option 3:  Demand Side Management, such as use of CFLs and efficient domestic applicances can provide about 1,100 MW virtual additional power.

There are many more alternatives to obtain additional power equivalent to Karnataka’s net share from the NTPC plant at much less cost and without impacting the state’s agriculture, water, and environment.  In the background of all these glaring issues, the public has to decide how prudent it is for the STATE to spend thousands of crores of rupees of its revenue and precious natural resources in establishing coal power plants without first harnessing all the techno-economically viable and environmentally benign alternatives.

At a time when the entire nation is looking to reduce its energy intensity of GDP, and when the state should honestly be looking at credible ways and means of preserving our water resources and fertile agricultural land, the cumulative impact of so many coal based power projects should be objectively studied keeping in view the welfare of all sections of our state.

Keeping all these issues in objective consideration, the state govt. should involve all the concerned stake holders in detailed discussions regarding the total costs to the society and benefits from coal power projects in the state.

——————————-

Leave a Reply

Theme by Anders Norén