ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ

ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಸ್ಥೆಗೆ ಈ ವರ್ಷದ ಹ್ಯಾರಿಯೆಟ್ ಟಬ್‌ಮನ್ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ನೀಡುವ ಸಂಸ್ಥೆ ‘ಫ್ರೀ ದಿ ಸ್ಲೇವ್ಸ್’ ನವರು ಜೀವಿಕದ ಸಾಧನೆಗಳ ಬಗ್ಗೆ ಚಿತ್ರೀಕರಣ ಮಾಡಲು ಬಂದಾಗ ನಾನೂ ಅವರೊಂದಿಗೆ ಹೆಗ್ಗಡದೇವನಕೋಟೆಯ ಸುತ್ತಮುತ್ತಲಿನ ಹಳ್ಳಿಗಳಿಗೆ ಓಡಾಡಿದ್ದೆ. ಈ ಪ್ರಶಸ್ತಿ ೨೫ ಸಾವಿರ ಡಾಲರ್‌ಗಳ ನಗದು ಬಹುಮಾನ, ೧೫ ಸಾವಿರ ರೂ.ಗಳ ಅಧ್ಯಯನ ನೆರವನ್ನು ಒಳಗೊಂಡಿದೆ. ಜೀವಿಕದ ಮುಖ್ಯಸ್ಥ ಕಿರಣ ಕಮಲ್ ಪ್ರಸಾದ್ ಮತ್ತು ಜೀತವಿಮುಕ್ತ ಹೋರಾಟಗಾರ ಶಿವಣ್ಣ ಸದ್ಯದಲ್ಲೇ ಅಮೆರಿಕಾಗೆ ಹೋಗಲಿದ್ದಾರೆ.

 

ಫ್ರೀ ದಿ ಸ್ಲೇವ್ಸ್ ರೂಪಿಸಿದ ಈ ಕಿರು ಸ್ಲೈಡ್‌ಶೋನಲ್ಲಿ ನೀವು ಜೀವಿಕ ಸಂಸ್ಥೆಯ ಸಾಧನೆಗಳ ಕಿರುನೋಟ ವೀಕ್ಷಿಸಬಹುದು. 

JEEVIKA Standing Together Agains Slavery from Free the Slaves on Vimeo.

ಈ ಕೊಂಡಿಯಲ್ಲಿ ಜೀವಿಕ ಸಂಸ್ಥೆಯ ಕಿರುಪರಿಚಯ ಇದೆ. 

ಜೀವಿಕದ ಪ್ರಮುಖ ಕಾರ್ಯಕರ್ತ ಉಮೇಶ್ ಬಗ್ಗೆ ಬರೆದ ಬ್ಲಾಗ್ ಇಲ್ಲಿದೆ. 

Leave a Reply

Theme by Anders Norén