ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ

೧೯೮೭ರಲ್ಲಿ ನಾನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಆಗ ಅಲ್ಲಿಗೆ ಬಂದವರು ಧರಂಪಾಲ್. ಸದಾ ಯಾವುದೋ ಗಂಭೀರ ಚಿಂತನೆಯಲ್ಲಿದ್ದ ಮುಖ. ಕೊಂಚ ದಪ್ಪ ಶರೀರ. ಮೃದು ಶಾರೀರ. ಬಿಳಿ ಉಡುಗೆ. ಅಪ್ಪಟ ಸರಳ ದಿನಚರಿಯ ವ್ಯಕ್ತಿತ್ವ. ಅವರು ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಿ ಬಂದವರು ಎಂದು ಕೇಳಿದ್ದೆ. ಅವರ ಅತಿಥಿ ಸತ್ಕಾರದ ಹೊಣೆಯನ್ನು ನನಗೆ ವಹಿಸಿದ್ದರು. ಸಂಶೋಧನಾ ವೇದಿಯ ಯಾವುದೋ ಪುಸ್ತಕವನ್ನು ಅವರು ಗಂಭೀರವಾಗಿ ಓದುತ್ತಿದ್ದರು. ಅವರ ಕೋಣೆಗೆ ಹೋದರೆ ಮೇಜಿನ ಮೇಲೆ ಬರೀ ಕೋಷ್ಟಕಗಳೇ ಕಾಣುತ್ತಿದ್ದವು. ಯಾವುದೋ ಶತಮಾನದ ದಾಖಲೆಗಳನ್ನು ಅವರು ತಾಳೆ ಹಾಕಿ ನೋಡುತ್ತಿದ್ದರು. ಬಿಟ್ಟರೆ ಅವರಿಗೆ ಬೇರೇನೂ ಬದುಕೇ ಇರಲಿಲ್ಲ ಅನ್ನಿಸಿತ್ತು. ನನ್ನ ಒತ್ತಾಯಕ್ಕೆ ಕಟ್ಟುಬಿದ್ದು ಅವರು ನನ್ನೊಂದಿಗೆ ಒಂದು ಫೋಟೋಗೆ ಜೊತೆಗೆ ನಿಂತಿದ್ದರು (ಅವರಿಗೆ ನೋಬೆಲ್ ಪ್ರಶಸ್ತಿ ಬಂದರೆ ಈ ಫೋಟೋಗೆ ವ್ಯಾಲ್ಯೂ ಇರುತ್ತೆ ಎಂಬ ದೂರಾಲೋಚನೆ ನನ್ನದಾಗಿತ್ತು). ಫೋಟೋ ಕ್ಲಿಕ್ ಆದಕೂಡಲೇ ಮರುಮಾತಾಡದೆ ಹೊರಟಿದ್ದರು. ಅಂಥ ಪರಮ ಲೌಕಿಕ ವಿಷಯಗಳಲ್ಲಿ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ.

೨೦೦೬ರಲ್ಲಿ, ತಮ್ಮ ೮೪ರ ವಯಸ್ಸಿನಲ್ಲಿ ವಾರ್ಧಾದ ಸೇವಾಗ್ರಾಮದಲ್ಲಿ ಕೊನೆಯುಸಿರೆಳೆದ ಧರಂಪಾಲ್ ಇಪ್ಪತ್ತನೇ ಶತಮಾನದ ಮಹಾನ್ ಸಂಶೋಧಕರಲ್ಲಿ ಒಬ್ಬರು ಎಂದೇ ನನಗನ್ನಿಸಿದೆ. ಅವರ ಜೊತೆಗಿದ್ದಾಗ ನಾನಿನ್ನೂ ೨೨ರ ವಯಸ್ಸಿನವನು; ಸಂಶೋಧನೆ ಎಂದರೇನು, ಸಂಶೋಧಕರ ಸಾಧನಗಳೇನು ಎಂಬ ಯಾವ ವಿಚಾರವೂ ಗೊತ್ತಿರಲಿಲ್ಲ. ಈಗ ನೋಡಿದರೆ, ಧರಂಪಾಲ್ ಸಂವಹನ ಕ್ರಾಂತಿಯ ಮುನ್ನಾ ದಿನಗಳಲ್ಲಿ ಎಷ್ಟೆಲ್ಲ ಶ್ರಮ ಹಾಕಿ ಸಂಶೋಧನೆ ಮಾಡಿದರು; ಭಾರತವು ನಿಜಕ್ಕೂ ಹಲವು ಜ್ಞಾನವಾಹಿನಿಗಳಲ್ಲಿ ಮಹತ್ತರ ಸಾಧನೆ ಮಾಡಿತ್ತು; ಈ ಜ್ಞಾನದ ನಾಯಕತ್ವವು ಹೇಗೆ ತೀರ ಇತ್ತೀಚಿನವರೆಗೂ, ಅಂದರೆ ೧೮ನೇ ಶತಮಾನದವರೆಗೂ ಅವಿಚ್ಛಿನ್ನವಾಗಿ ಮುಂದುವರಿದಿತ್ತು ಎಂಬುದನ್ನು ಧರಂಪಾಲ್ ಬ್ರಿಟಿಶರು ಸಂಗ್ರಹಿಸಿಟ್ಟಿದ್ದ ದಾಖಲೆಗಳಿಂದಲೇ ನಿರೂಪಿಸಿದರು. ಅವರ ಮಾಹಿತಿಗಳನ್ನು ಈವರೆಗೂ ಯಾರೂ ಅಲ್ಲಗಳೆದಿಲ್ಲ.

೧೯೨೨ರಲ್ಲಿ ಉತ್ತರ ಪ್ರದೇಶದ ಖಂಡಾಲಾದಲ್ಲಿ ಹುಟ್ಟಿದ ಧರಂಪಾಲ್ ತನ್ನ ತಂದೆಯ ಜೊತೆಗೆ ೧೯೨೯ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದವರು. ೧೯೪೦ರಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಧರಂಪಾಲ್ ಬಿಎಸ್‌ಸಿ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಅವರು ಸ್ವಾತಂತ್ರ್ಯ ಬಂದ ನಂತರ ಪಶ್ಚಿಮ ಪಾಕಿಸ್ತಾನದಲ್ಲಿ ನಿರಾಶ್ರಿತರ ಪುನರ್ವಸತಿ ಕಾರ್ಯದಲ್ಲಿ ಭಾಗಿಯಾದರು. ಕಮಲಾದೇವಿ ಚಟ್ಟೋಪಾಧ್ಯಾಯ, ರಾಮ್ ಮನೋಹರ್ ಲೋಹಿಯಾ , ಎಲ್ ಸಿ ಜೈನ್ ಮುಂತಾದವರ ಸಂಪರ್ಕ ಸಾಧಿಸಿದ ಅವರು ಇಸ್ರೇಲಿನ ಗ್ರಾಮೀಣ ಮತ್ತು ಸಮುದಾಯ ಪುನರ್ನಿರ್ಮಾಣದ ಯೋಜನೆಗಳನ್ನು ಅಭ್ಯಸಿಸಲು ಹೋದರು. ಅಲ್ಲಿಂತ ನೇರವಾಗಿ ಬರಲಾಗದೆ ಇಂಗ್ಲೆಂಡ್‌ಗೆ ಬಂದ ಧರಂಪಾಲ್‌ಗೆ ಫಿಲಿಸ್ ಎಂಬಾಕೆಯ ಪರಿಚಯವಾಗಿ ಅವರನ್ನು ಮದುವೆಯಾದರು. ೧೯೫೦ರಲ್ಲಿ ಮೀರಾಬೆನ್ ಜೊತೆಗೂಡಿ ಬಾಪುಗ್ರಾಮದ ಸ್ಥಾಪನೆಗೆ ಶ್ರಮಿಸಿದರು. ನಂತರ ಹೆಂಡತಿ ಮಕ್ಕಳೊಂದಿಗೆ ಲಂಡನ್ನಿಗೆ ಹೋಗಬೇಕಾಗಿ ಬಂತು. ಅಲ್ಲಿ ಅವರು ಮೂರು ವರ್ಷ ಇದ್ದರು; ಪತ್ರಿಕೆಗಳಿಗೆ ಶಾಂತಿ ಮತ್ತು ಅಹಿಂಸೆ ಕುರಿತ ಲೇಖನಗಳನ್ನು ಬರೆದರು. ೧೯೫೮ರಿಂದ ೧೯೬೪ರವರೆಗೆ ಅವಾರ್ಡ್ (ಅಸೋಸಿಯೇಶನ್ ಫಾರ್ ವಾಲಂಟರಿ ಏಜೆನ್ಸೀಸ್ ಫಾರ್ ರೂರಲ್ ಡೆವಲಪ್‌ಮೆಂಟ್) ಎಂಬ ಸಂಸ್ಥೆಯ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಆನಂತರ ಲೋಕನಾಯಕ ಜಯಪ್ರಕಾಶ ನಾರಾಯಣ್ ಪ್ರಭಾವಕ್ಕೆ ಸಿಲುಕಿದ ಧರಂಪಾಲ್, ಜೆಪಿ ಜೊತೆಗೆ ನಿಕಟ ಸ್ನೇಹ ಸಂಪಾದಿಸಿದರು. ೧೯೬೨ರಲ್ಲಿ ನೆಹರೂ ವಿರುದ್ಧ ಬರೆದ ಬಹಿರಂಗ ಪತ್ರಕ್ಕಾಗಿ ತಿಹಾರ್ ಸೆರೆವಾಸ ಅನುಭವಿಸಿದ ಧರಂಪಾಲ್ ಮುಂದೆ ಅಖಿಲ ಭಾರತ ಪಂಚಾಯತ್ ಪರಿಷತ್ತಿನ ನಿರ್ದೇಶಕರಾಗಿ ಮದ್ರಾಸು ಪಂಚಾಯತ್ ವ್ಯವಸ್ಥೆಯನ್ನು ತಿಳಿದುಕೊಂಡರು.

೧೯೩೧ರಲ್ಲಿ ಗಾಂಧೀಜಿಯವರು ಒಂದು ವಾದವನ್ನು ಮಂಡಿಸಿದ್ದರು: ನೂರು ವರ್ಷಗಳ ಹಿಂದಿನ ಭಾರತೀಯ ಶಿಕ್ಷಣ ವ್ಯವಸ್ಥೆ ಇಂದಿನ (ಗಾಂಧೀಜಿ ಕಾಲದ) ಬ್ರಿಟಿಶ್ ಶಿಕ್ಷಣಕ್ಕಿಂತ ಉತ್ತಮವಾಗಿತ್ತು ಎನ್ನುವುದೇ ಈ ಪ್ರತಿಪಾದನೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಈ ವಿಷಯವು ಧರಂಪಾಲರನ್ನು ತುಂಬಾ ಕಾಡಿತ್ತು. ೬೦ರ ದಶಕದಿಂದ ಅರಂಭಿಸಿ ಧರಂಪಾಲ್ ಭಾರತದ ಇತಿಹಾಸ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡರು. ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳನ್ನು, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಸಿಕ್ಕ ದಾಖಲೆಗಳನ್ನು ಆಳವಾಗಿ ಆಭ್ಯಸಿಸಿದರು. ಇದರ ಫಲವಾಗಿ ೧೯೭೧ರಲ್ಲಿ ಬಂದ ಪುಸ್ತಕವೇ:  ೧೮ನೇ ಶತಮಾನದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ. ಭಾರತೀಯ ಖಗೋಳಶಾಸ್ತ್ರ, ವೈದ್ಯಕೀಯ ವಿಜ್ಞಾನ, ಕಬ್ಬಿಣ ಮತ್ತು ಉಕ್ಕು ತಯಾರಿಕೆ, ಮಂಜುಗಡ್ಡೆ ತಯಾರಿಕೆ, ಕೃಷಿ ಸಲಕರಣೆಗಳು, – ಮುಂತಾದ ಕ್ಷೇತ್ರಗಳಲ್ಲಿ ಭಾರತೀಯರ ಸಕ್ಷಮತೆ ಇತ್ತೆಂದು ಸಾಬೀತುಪಡಿಸಿದ ಈ ಪುಸ್ತಕವು ಆಗ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

೧೯೮೩ರಲ್ಲಿ ವರು ಬರೆದ ಗ್ರಂಥ: `ದಿ ಬ್ಯೂಟಿಫುಲ್ ಟ್ರೀ’ ಅವರ ಅತ್ಯಂತ ಆಳ ಅಧ್ಯಯನದ ಫಲ. ೪೩೬ ಪುಟಗಳ ಈ ಪುಸ್ತಕದಲ್ಲಿ ಅವರು ೧೮ನೇ ಶತಮಾನದ ಭಾರತದ ಶಿಕ್ಷಣ ವ್ಯವಸ್ಥೆ ಎಷ್ಟು ಗಟ್ಟಿಯಾಗಿತ್ತು, ಆಮೇಲೆ ಬ್ರಿಟಿಶರು ಹೇಗೆ ಅದನ್ನು ಶಿಥಿಲಗೊಳಿಸಿದರು ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಕಾರ್ಲ್ ಮಾರ್ಕ್ಸ್‌ನಿಂದ ಹಿಡಿದು ಅಂದಿನ ಪ್ರಮುಖ ಚಿಂತಕರು ಭಾರತವನ್ನು ಪಾಶ್ಚಾತ್ಯೀಕರಣಗೊಳಿಸಲು ಹೊರಟ ಸಂಗತಿಯೇ ಹೇಗೆ ನಮ್ಮ ಪಾರಂಪರಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಅವರು ವಿವರಿಸಿದ್ದಾರೆ. ಅದನ್ನೆಲ್ಲ ಅವರು ಬ್ರಿಟಿಶ್ ದಾಖಲೆಗಳನ್ನು ಬಳಸಿಯೇ ನಿರೂಪಿಸಿದ್ದಾರೆ ಎಂಬುದು ಗಮನಾರ್ಹ.

ಅವರು ಹೇಳುವ ಮಾತಿನ ಝಲಕ್ ಇಲ್ಲಿದೆ:

The First Report: A Survey of Post-1800 Material

Adam’s first report is a general statement of the situation and a presentation of the data which he could derive from post-1800 official and other sources. His conclusions: first, every village  had at least one school and in all probability in Bengal and Bihar with 1,50,748 villages, ‘there will still be 1,00,000’ villages that have these schools.59 Second, on the basis of personal observation and what he had learnt from other evidence, he inferred that on an average there were around 100 institutions of higher learning in each district of Bengal. Consequently, he concluded that the 18 districts of Bengal had about 1,800 such institutions. Computing the number studying in these latter at the lowest figure of six scholars in each, he also computed that some 10,800 scholars should be studying in them.

School attendance, especially in the districts of the Madras Presidency, even in the decayed state of the period 1822-25, was proportionately far higher than the numbers in all variety of schools in England in 1800. The conditions under which teaching took place in the Indian schools were less dingy and more natural;37 and, it was observed, the teachers in the Indian schools were generally more dedicated and sober than in the English versions. The only aspect, and certainly a very important one, where Indian institutional education seems to have lagged behind was with regard to the education of girls.

——————————

The following indicative list of the crafts listed in some of the districts of the Madras Presidency (collected in the early 19th  century records for levying tax on them) may give, however, some idea of their variety.

TANKS, BUILDINGS, ETC.

 • Stone-cutters
 • Wood woopers (Wood cutters)
 • Marble mine workers
 • Bamboo cutters
 • Chunam makers
 • Wudders (Tank diggers)
 • Sawyers Brick-layers

METALLURGY

 • Iron ore collectors
 • Copper-smiths
 • Iron manufacturers
 • Lead washers
 • Iron forge operators
 • Gold dust collectors
 • Iron furnaces operators
 • Iron-smiths
 • Workers of smelted metal
 • Gold-smiths
 • Horse-shoe makers
 • Brass-smiths
 • TEXTILES
 • Cotton cleaners
 • Fine cloth weavers
 • Cotton beaters
 • Coarse cloth weavers
 • Cotton carders
 • Chintz weavers
 • Silk makers
 • Carpet weavers
 • Spinners
 • Sutrenze carpet weavers
 • Ladup, or Penyasees Cot tape weavers
 • Cotton spinners
 • Cumblee weavers
 • Chay thread makers
 • Thread purdah weavers
 • Chay root diggers (a dye)
 • Gunny weavers
 • Rungruaze, or dyers
 • Pariah weavers (a very large Mudda wada, or dyers in red  number)
 • Indigo maker
 • Mussalman weavers
 • Barber weavers
 • Dyers in indigo
 • Boyah weavers
 • Loom makers
 • Smooth and glaze cloth men
 • Silk weavers

OTHER CRAFTSMEN

 • Preparers of earth for bangles
 • Salt makers
 • Bangle makers
 • Earth salt manufacturers
 • Paper makers
 • Salt-petre makers
 • Fire-works makers
 • Arrack distillers
 • Oilmen Collectors of drugs and roots
 • Soap makers
 • Utar makers, druggists

MISCELLANEOUS

 • Boat-men
 • Sandal makers
 • Fishermen
 • Umbrella makers

ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆ ಇತ್ತು; ೧೮೩೦ರ ಹೊತ್ತಿನಲ್ಲಿ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಒಂದು ಲಕ್ಷ ಶಾಲೆಗಳಿದ್ದವು. ಮುಂಬಯಿ ಪ್ರೆಸಿಡಿನ್ಸಿಯಲ್ಲಿ ಶಾಲೆ ಇಲ್ಲದ ಒಂದು ಹಳ್ಳಿಯೂ ಇರಲಿಲ್ಲ; ಶಾಲೆಗಳಲ್ಲಿ ಬ್ರಾಹ್ಮಣೇತರರೂ ಶಿಕ್ಷಣ ಪಡೆಯುತ್ತಿದ್ದರು; ಉನ್ನತ ಶಿಕ್ಷಣದಲ್ಲಿ ಮಾತ್ರ ಬ್ರಾಹ್ಮಣರೇ ಹೆಚ್ಚಾಗಿದ್ದರು – ಇವೇ ಮುಂತಾದ ಅಂಶಗಳನ್ನು ಧರಂಪಾಲ್ ದಾಖಲಿಸಿದ್ದಾರೆ. ಇಂಥ ಸುಂದರ ವೃಕ್ಷ ಹೇಗೆ ಶಿಥಿಲವಾಯಿತು? ರಾಜಾರಾಮ್ ಮೋಹನ್‌ರಾಯ್ ಆಹ್ವಾನದ ಮೇರೆಗೆ ಬ್ರಿಟಿಶರು ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆದರು. ಇಂಥ ಶಾಲೆಗಳಿಗೆ ಸರ್ಕಾರದ ಮಾನ್ಯತೆ ನೀಡಲಾರಂಭಿಸಿದರು. ಆದ್ದರಿಂದ ದೇಶಿ ಶಿಕ್ಷಣ ವ್ಯವಸ್ಥೆಯು ಮಾನ್ಯತೆಯ ಕೊರತೆಯಿಂದ ತನ್ನಷ್ಟಕ್ಕೆ ತಾನೇ ಕುಸಿಯಿತು ಎಂಬ ವಾದವಿದೆ.

ಭಾರತೀಯ ವಿಜ್ಞಾನದ ಗರಿಮೆ

ಧರಂಪಾಲ್ ನಮಗೆ ಬಿಟ್ಟುಹೋಗಿರುವ ಇನ್ನೊಂದು ಪ್ರಮುಖ ದಾಖಲೆ ಎಂದರೆ ಭಾರತೀಯ ವಿಜ್ಞಾನ, ತಂತ್ರಜ್ಞಾನವು ಹೇಗೆ ಪಾಶ್ಚಾತ್ಯರಿಗಿಂತ ಉನ್ನತ ಮಟ್ಟದ್ದಾಗಿತ್ತು; ಅದನ್ನು ಬ್ರಿಟಿಶರು ಹೇಗೆ ದಮನಿಸಿದರು ಎಂಬ ಮಾಹಿತಿಗಳ ಪ್ರಬಂಧಗಳು. ಈ ಪ್ರಬಂಧಗಳನ್ನು ಓದುವುದೇ ಒಂದು ಥ್ರಿಲ್ಲರ್ ಓದಿದ ಅನುಭವ ಕೊಡುತ್ತದೆ.

೧೬೭೮-೯೩ರ ಅವಧಿಯಲ್ಲಿ ಯೂರೋಪಿನಲ್ಲಿ ಹಾರ್ಟಸ್ ಮಲಬಾರಿಕಸ್ ಎಂಬ ೭೫೦ ಭಾರತೀಯ ಸಸ್ಯಪ್ರಬೇಧಗಳ ೧೨ ಸಂಪುಟಗಳ ಚಿತ್ರಸಹಿತ ಗ್ರಂಥ ಪ್ರಕಟವಾಗುತ್ತದೆ. ಇದರಲ್ಲಿ ಕೇರಳ ಮತ್ತು ಕೊಂಕಣ ಪ್ರದೇಶದ ಪಂಡಿತರು ಈ ಪುಸ್ತಕವು ಸರಿಯಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದಾರೆ! ಭಾರತೀಯ ಕೃಷಿ ಸಲಕರಣೆಗಳು ೧೮ನೇ ಶತಮಾನದ ಬ್ರಿಟಿಶ್ ಕೃಷಿಗೆ ಭಾರೀ ಪ್ರಮಾಣದಲ್ಲಿ ನೆರವಾದವು. ಸಿಡುಬಿಗೆ ಭಾರತದಲ್ಲಿ ನೀಡುತ್ತಿದ್ದ ಲಸಿಕೆಯ ವಿಧಾನ; ಅಲಾಹಾಬಾದ್ – ವಾರಾಣಸಿಯಲ್ಲಿ ಮಂಜುಗಡ್ಡೆ ಮಾಡುತ್ತಿದ್ದ ವಿಧಾನ, ಕಟ್ಟಡ ನಿರ್ಮಾಣದ ವಿವಿಧ ಯಾಂತ್ರಿಕ ಹಾಗೂ ರಾಸಾಯನಿಕ ಮಾಹಿತಿಗಳು, ಭಾರತೀಯ ಉಕ್ಕು – ಕಬ್ಬಿಣ ತಯಾರಿಕೆ ವಿಧಾನಗಳು, ಶಸ್ತ್ರಚಿಕಿತ್ಸೆ, ಶಾಲೆಗಳಲ್ಲಿನ ಬೋಧನಾ ಕ್ರಮಗಳು – ಇವೆಲ್ಲವನ್ನೂ ಬ್ರಿಟಿಶರು ತಿಳಿದುಕೊಂಡರು. ಅದಿರಲಿ, ೧೭೯೭ರಲ್ಲೇ ಬರ್ಮಾದಲ್ಲಿ ಸುಮಾರು ೫೨೦ ಪೆಟ್ರೋಲಿಯಂ ಬಾವಿಗಳಿದ್ದವು ಎಂಬುದನ್ನೂ ಧರಂಪಾಲ್ ದಾಖಲಿಸುತ್ತಾರೆ. ಆ ಕಾಲದಲ್ಲಿ ಅವುಗಳಿಂದ ಒಂದು ಲಕ್ಷ ಟನ್ ತೈಲವನ್ನು ಎತ್ತಿ ೧೦ ಲಕ್ಷ ಭಾರತೀಯ ರೂಪಾಯಿಯ ವರಮಾನ ಪಡೆಯಲಾಗುತ್ತಿತ್ತು! (ಈ ರೂಪಾಯಿ ಈಗಿನದಲ್ಲ, ಸುಮಾರು ೨೧೦ ವರ್ಷ ಹಳೆಯದು ಎಂಬುದನ್ನು ನೆನಪಿಡಿ). ಈ ತೈಲವನ್ನು ದೀಪ ಬೆಳಗಿಸಲು, ಮರಗಳಿಗೆ ಬಳಿಯಲು, ದೋಣಿ – ಹಡಗುಗಳ ಬುಡಕ್ಕೆ ಸವರಲು, ವೈದ್ಯಕೀಯ ಅಗತ್ಯಗಳಿಗಾಗಿ ಬಳಸಲಾಗುತ್ತಿತ್ತು.

೧೮೧೬ರಲ್ಲಿ ಆಧುನಿಕ ಬ್ರಿಟಿಶ್ ಶಸ್ತ್ರಚಿಕಿತ್ಸೆಯ ಸ್ಥಾಪಕ ಎಂದೇ ಮಾನ್ಯರಾದ ಜೆ ಸಿ ಕಾರ್ಪ್  ದಾಖಲಿಸಿದ  ಭಾರತೀಯ ಪ್ಲಾಸ್ಟಿಕ್ ಸರ್ಜರಿಯ ವಿವರಗಳನ್ನು ಧರಂಪಾಲ್ ಕೊಡುತ್ತಾರೆ:

It was in this manner that the nasal operation had become forgotten or despised, in at least the west of Europe; when, at the close of the last century, it was once more heard of in England, from a quarter whence mankind will yet, perhaps, derive many lights, as well in science, as in learning and in arts. A periodical publication, for the year 1794, contains the following communication from a correspondent in India, which is accompanied by a portrait of the person mentioned, explanatory of the operation. ‘Cowasjee, a Mahratta, of the castle of husbandman, was a bullock-driver with the English army, in the war of 1792, and was made a prisoner by Tippoo, who cut off his nose, and one of his hands.

In this state, he joined the Bombay army near Seringapatam, and is now a pensioner of the Honourable East India Company. For above twelve months, he was wholly without a nose; when he had a new one put on, by a Mahratta surgeon, a Kumar, near Pune. This operation is not uncommon in India, and has been practised from time immemorial. Two of the medical gentlemen, Mr. Thomas Cruse and Mr. James Findlay, of Bombay, have been informed as follows: A thin plate of wax is fitted to the stump of the nose, so as to make a nose good appearance; it is then flattened, and laid on the forehead. A line is drawn round the wax, which is then of no further use; and the operator then dissects off as much skin as it covered, leaving undivided a small slip between the eyes. This slip preserves the circulation, till an union has taken place between the new and old parts. The cicatrix of the stump of the nose, is next pared off; and, immediately behind this raw part, an incision is made through the skin, which passes round both alae, and goes along the upper lip.

The skin is now brought down from the forehead; and, being that a nose is formed with a double hold, above, and with its alae and septum below, fixed in the incision; so that a nose is formed with a double hold, above, and with its alae and septum below, fixed in the incision. A little Terra Joponica is softened with water, and, being spread on slips of cloth, five or six of these are placed over each other, to secure the joining. No other dressing than this cement is used for four days; it is then removed, and cloths, dipped in ghee (a kind of butter), are applied. The connecting slip of skin is divided about the twenty-fifth day; when a little more dissecting is necessary to improve the appearance of the new nose. For five or six days after the operation, the patient is made to lie on his back; and, on the tenth day, bits of soft cloth are put in to the nostrils, to keep them sufficiently open.

This operation is always successful. The artificial nose is  secure, and looks nearly as well as the natural one; nor is the scar on the forehead very observable, after a length of time.

ಧರಂಪಾಲ್‌ರ ಪ್ರಬಂಧಗಳಲ್ಲಿ ತಿಳಿಯಲೇಬೇಕಾದ ಇನ್ನೊಂದು ಸಂಗತಿ: ಭಾರತದ ಉಕ್ಕು ಕುಲುಮೆಯ ತಂತ್ರಜ್ಞಾನ. ಈ ಬಗ್ಗೆಯ ಅವರು ಬರೆದಿದ್ದನ್ನು ಓದಿ: (ಅನುವಾದಕ್ಕಿಂತ ಅವರ ಮೂಲ ಭಾಷೆಯೇ ಸಂವಹನ ಹೆಚ್ಚಿಸಬಹುದೆಂದು ಇಂಗ್ಲೀಶಿನಲ್ಲಿಯೇ ದಾಖಲಿಸಿದ್ದೇನೆ)

Around 1800, a movable furnace of that time could on an average produce about 20 tonnes of fine-grade steel, if worked for some 35-40 weeks in the year. I had roughly estimated on the basis of available data for various areas that the number of such furnaces around 1800 might have been approximately 10,000. it is quite possible that the number was far larger but that most of them only worked for 10-20 weeks in the year. It is probable that in today’s circumstances, these furnaces may be found highly wasteful of both ore and fuel; and to start with, the steel that they will produce may be of relatively poor quality. To some an attempt of this kind may seem a great waste. But to the same people, a loss of a few hundred crores here and there because of hasty decisions, or defective technology, etc., may look like the ordinary hazards of modern economy and industry; while a loss of 10 to 20 or 50 crores on a project of this seems unpardonable’.

ಹೀಗೆ ಧರಂಪಾಲ್ ಒಬ್ಬ ಗಾಂಧಿವಾದಿಯಾಗಿ ನೈಜ ಭಾರತದ ಚಿತ್ರಣವನ್ನು ದಾಖಲೆ ಸಮೇತ ಕಟ್ಟಿಕೊಟ್ಟಿದ್ದಾರೆ. ಇಂಥ ಸಂಶೋಧನಾ ಪ್ರವೃತ್ತಿ ನಮ್ಮ ಯುವಸಮುದಾಯಕ್ಕೂ ಬರಲಿ ಎಂದು ಆಶಿಸೋಣ.

ಧರಂಪಾಲ್ ಕೃತಿಗಳು: ನಿಮಗಾಗಿ!

(ಸೌಜನ್ಯ: ಸಮನ್ವಯ ಡಾಟ್‌ಕಾಮ್. ಈ ವೆಬ್‌ಸೈಟಿನಲ್ಲಿ ನೀವು ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು)

Leave a Reply

Theme by Anders Norén