ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!

ನನಗಂತೂ ಈ ಕಮರ್ಶಿಯಲ್‌ ಕರಕರೆಯಿಂದ ಎಷ್ಟು ಸಿಟ್ಟು ಬಂದಿದೆ ಎಂದರೆ  ಒಂದು ದಿನ ಸುತ್ತಿಗೆ ತೆಗೆದುಕೊಂಡು ಅಂಥ ಕರೆ ಮಾಡಿದ ಕಚೇರಿಯನ್ನು ಹುಡುಕಿಕೊಂಡು ಹೊರಟಿದ್ದೆ! ಗೊತ್ತಿಲ್ಲದ ವ್ಯಕ್ತಿಗೆ ಅವರು ಕರೆ ಮಾಡಿ ಹಣ ಕೊಡಿ, ಡಿಪಾಸಿಟ್‌ ಮಾಡುತ್ತೇವೆ, ಫೈನಾನ್ಶಿಯಲ್‌ ಪ್ಲಾನ್‌ ಕೊಡುತ್ತೇವೆ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಎಂದರೆ ನಾವೇಕೆ ನಂಬಬೇಕು? ಮೊದಲನೇದಾಗಿ ಅವರಿಗೆ ನೀವು ವಾಪಸು ಕರೆ ಮಾಡಲು ಬರುವುದೇ ಇಲ್ಲ; ಎರಡನೇದಾಗಿ, ಅವರು ಯಾವ ಬ್ಯಾಂಕ್‌ ಸಿಬ್ಬಂದಿಯೂ ಆಗಿರುವುದಿಲ್ಲ; ಕಷ್ಟಪಟ್ಟು ದುಡಿಯುವ ಅನಿವಾರ್ಯತೆಯಿಂದ ಕಾಲ್‌ಸೆಂಟರಿನಲ್ಲಿ ಕೆಲಸ ಮಾಡುವವರು; ಮೂರನೇದಾಗಿ ಅವರು ಸುಳ್ಳು ಹೆಸರುಗಳನ್ನೇ ಕೊಡುತ್ತಾರೆ; ನಾಲ್ಕನೇದಾಗಿ ಅವರು ನಮ್ಮ ದೂರವಾಣಿ ಸಂಖ್ಯೆ ಅವರಿಗೆ ಸಿಕ್ಕಿದ್ದಾದರೂ ಹೇಗೆ ಎಂದು ತಿಳಿಸುವುದಿಲ್ಲ.

ಇಂಥ ಹತ್ತಾರು ಕಾರಣಗಳನ್ನು ನಾನು ಪಟ್ಟಿ ಮಾಡಿದ್ದೇನೆ. ಈಗ, ಸೆಪ್ಟೆಂಬರ್‌ ೨೭ರಿಂದ ಕೇಂದ್ರ ಸರ್ಕಾರವು ಹೊಸ ವ್ಯವಸ್ಥೆಯನ್ನು ಜಾರಿ ಮಾಡಿದೆ. ಈ ಪ್ರಕಾರ ನೀವು ೧೯೦೯ ಸಂಖ್ಯೆಗೆ (ಟೋಲ್‌ ಫ್ರೀ) ದೂರವಾಣಿ ಮಾಡುವುದರ ಮೂಲಕ, ಅಥವಾ ಮೊಬೈಲಿನಿಂದ ಎಸ್‌ ಎಂ ಎಸ್‌ ಕಳಿಸುವ ಮೂಲಕ ಈ ಕರೆಗಳನ್ನು ಪೂರ್ಣವಾಗಿ ನಿಲ್ಲಿಸಲು ಕೇಳಬಹುದು,  ಅಥವಾ ಈ ಕಾಟ ಬೇಕಾದರೆ ಎಷ್ಟು ಬೇಕೋ ಎಂಬುದನ್ನು ನಮೂದಿಸಿಕೊಳ್ಳಬಹುದಾಗಿದೆ.  ವಿವರಗಳಿಗೆ  ಈ ಪಿ ಡಿ ಎಫ್‌ ಫೈಲನ್ನು ಓದಿರಿ.

ಹೆಚ್ಚಿನ ವಿವರಗಳು ಬೇಕಾದರೆ ಇಲ್ಲಿದೆ, ಓದಿ: http://www.nccptrai.gov.in/nccpregistry/index.jsp?EIID=null

Leave a Reply

Theme by Anders Norén