ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಪಿ ಸಾಯಿನಾಥ್ ನೀಡುತ್ತಿರುವ ಕೌಂಟರ್ ಮೀಡಿಯಾ ಪ್ರಶಸ್ತಿಗೆ ಆಹ್ವಾನ

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಲು ಇದೇ ಮೊದಲ ಬಾರಿಗೆ ‘ಕೌಂಟರ್ ಮೀಡಿಯಾ’ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಮುಖ್ಯಸ್ಥರಾದ ಪಿ ಸಾಯಿನಾಥ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ, ಬಡತನ,ಹಸಿವಿನ ಬಗ್ಗೆ ಬರೆದು ಸಾಮಾಜಿಕ ಉನ್ನತಿಗೆ ಶ್ರಮಿಸಿದ ಇಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

  • ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ, ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ, 35 ವರ್ಷದೊಳಗಿನ ಪತ್ರಕರ್ತರು ತಮ್ಮ ಉತ್ತಮ ಅಭಿವೃದ್ಧಿ ವರದಿಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು. ಎರಡು ಬಹುಮಾನಗಳಲ್ಲಿ ಒಂದು ಬಹುಮಾನ ಮಹಿಳಾ ಪತ್ರಕರ್ತರಿಗಾಗಿ ಮೀಸಲು. ಅರ್ಹ ಪತ್ರಕರ್ತರಿಗೆ – ಅದರಲ್ಲೂ ಮಹಿಳೆಯರಿಗೆ ವಯೋಮಾನ ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
  • ಯಾವುದೇ ಮುದ್ರಣ, ಟೆಲಿವಿಷನ್ ಮತ್ತು ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟಿಸಲಾಗಿರುವ ವರದಿ / ಲೇಖನಗಳು ಪ್ರಶಸ್ತಿಗೆ ಅರ್ಹ.
  • ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ ಜೂನ್ 12, 2012.
  • ಪತ್ರಕರ್ತರು ತಮ್ಮ ಲೇಖನ/ ವರದಿಗಳನ್ನು countermediaawards@gmail.com ಗೆ ಅಥವಾ ಕೌಂಟರ್ ಮೀಡಿಯಾ ಅವಾರ್ಡ್ಸ್, ನಂ 142, 69ನೇ ಕ್ರಾಸ್,ರಾಜಾಜಿನಗರ 5ನೇ ಬ್ಲಾಕ್, ಬೆಂಗಳೂರು – 560 010 ಈ ವಿಳಾಸಕ್ಕೆ ಕಳಿಸಲು ಕೋರಲಾಗಿದೆ.
  • ಪತ್ರಕರ್ತರು ತಮ್ಮ ಸ್ವ ವಿವರಗಳನ್ನು ಮತ್ತು ತಾವು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸುವ ಕಿರು ಬರಹವನ್ನು ಲೇಖನಗಳೊಂದಿಗೆ ಕಳಿಸಲು ಕೋರಲಾಗಿದೆ.
  • ಟೆಲಿವಿಷನ್ ಮಾಧ್ಯಮದ ಪತ್ರಕರ್ತರು ತಮ್ಮ ವರದಿ ಪ್ರಸಾರವಾಗಿರುವ ಸಿಡಿ ಅಥವಾ ಡಿವಿಡಿಯನ್ನು ಅರ್ಜಿಯೊಂದಿಗೆ ಕಳಿಸಬೇಕಾಗಿದೆ.
  • ಪ್ರಶಸ್ತಿಯು ರೂ 25,000 ಜೊತೆಗೆ ಒಂದು ಡಿಜಿಟಲ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 1, 2012ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಪ್ರಶಸ್ತಿಯ ವಿವರಗಳು ಈ ರೀತಿ ಇವೆ:

  • ಪ್ರಶಸ್ತಿಯ ಮುಖ್ಯ ಉದ್ದೇಶ ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ ಯಾವುದೇ ಭಾರತೀಯ ಭಾಷೆಯಲ್ಲಿ ಉತ್ತಮ ಗುಣಮಟ್ಟದ ಗ್ರಾಮೀಣ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಕುರಿತಾಗಿ ಲೇಖನಗಳನ್ನು ಪ್ರಕಟಿಸಿದ ಪತ್ರಕರ್ತರನ್ನು ಗುರುತಿಸುವುದು.
  • ಮಹಿಳೆಯರಿಗೆ ಆದ್ಯತೆಯನ್ನು ಕೊಡಲಾಗುವುದು.
  • ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣಿತರ ಸಮಿತಿಯು ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಿದ್ದು, ತೀರ್ಪುಗಾರರ ತೀರ್ಪು ಅಂತಿಮ.
  • ಪತ್ರಕರ್ತರು ಅವರ ಇತ್ತೀಚಿಗಿನ ಒಂದು ಲೇಖನ / ವರದಿ ಅಥವಾ ವಿಷಯಕ್ಕೆ ಸಂಬಂಧಪಟ್ಟಂತೆ ಅನೇಕ ವರದಿಗಳನ್ನು ಪ್ರಶಸ್ತಿಗಾಗಿ ಕಳಿಸಬಹುದು.
  • ಈ ಪ್ರಶಸ್ತಿಯನ್ನು ಪಿ ಸಾಯಿನಾಥ್ ಅವರು ತಮ್ಮ (’ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್) ಪುಸ್ತಕದ ಸಂಭಾವನೆಯ ಹಣದಿಂದ ಸ್ಥಾಪಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಟಿ ಆರ್ ಮಹೇಶ್ ಬಾಬು

ಮೊಬೈಲ್: 98443 79722

Leave a Reply

Theme by Anders Norén