ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು

ಮೇ ೨೬ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಬಿಟಿ ಬದನೆ ಮತ್ತು ಜೀವವೈವಿಧ್ಯ ಕುರಿತಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಒಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿದ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಪ್ರೊ. ಬಿ. ಎಂ.ಕುಮಾರಸ್ವಾಮಿ ಮಾಡಿದ ಆರಂಭಿಕ ಭಾಷಣ ಇಲ್ಲಿದೆ. ಅಲ್ಲದೆ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ಶ್ರೀ ವೈ. ಬಿ. ರಾಮಕೃಷ್ಣ ಮತ್ತು ಎನ್‌ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ (ಇಎಸ್‌ಜಿ)ಯ ಶ್ರೀ ಲಿಯೋ ಸಲ್ಡಾನಾ ಮಾಡಿದ ಕಿರು ನಿರೂಪಣೆಯೂ ಇಲ್ಲಿದೆ.
ಬಿಟಿ ಬದನೆಯ ವಿಷಯದ ಬಗ್ಗೆ ಈಗಲೂ ಬಿಟಿ ಪರ ವಿಜ್ಞಾನಿಗಳು ತಮ್ಮ ಹಟ ಬಿಡುತ್ತಿಲ್ಲ. ಅಲ್ಲದೆ ಕೇಂದ್ರ ಸರ್ಕಾರವು ಹೇರಿದ ಸ್ತಂಭನವೂ ಹಾಗೆಯೇ ಮುಂದುವರಿಯುತ್ತದೆ ನಂಬುವಂತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಈ ಭಾಷಣಗಳು ಮಹತ್ವ ಪಡೆದಿವೆ.

ನೀವೂ ಕೇಳಿ. ಇತರರಿಗೂ ಹೇಳಿ. ಬಿಟಿ ಬದನೆಯ ಪ್ರವೇಶದಿಂದ ಉಂಟಾಗುವ ಅಪಾಯಗಳ ಬಗ್ಗೆ ಮತ್ತಷ್ಟು ಜನಜಾಗೃತಿ ಮಾಡೋಣ.

1 Comment

  1. samad Kottur

    ಬಿಟಿ ಬದನೆ ಕುರಿತು ತಮ್ಮ ಸರಣಿ ಲೇಖನಗಳು ವಿಚಾರ ಪೂರ್ಣವಾಗಿವೆ. ಖಾರ ಸ್ವಲ್ಪ ಹೆಚ್ಚಾಗಿಯೇ ಇದೆ. ಪರವಾಯಿಲ್ಲ. ಧನ್ಯವಾದಗಳು

Leave a Reply

Theme by Anders Norén