ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]

ಮಿತ್ರಮಾಧ್ಯಮದಿಂದ ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ ಮಾಡಬೇಕು ಎಂಬ ನಮ್ಮ ಒಂದು ವರ್ಷದ ಕನಸು ಸೆಪ್ಟೆಂಬರ್‌ ೨೬ರಂದು ನನಸಾಗುತ್ತಿದೆ. ಇದಕ್ಕೆ ಕಾರಣರಾದ ಸುರಾನಾ ಕಾಲೇಜಿಗೆ, ಆ ಕಾಲೇಜಿನಲ್ಲಿ ಪಾಠದ ಮತ್ತು ಪ್ರಯೋಗದ ತರಗತಿಗಳನ್ನು ತೆಗೆದುಕೊಂಡ ಪವನಜ ಯು ಬಿ, ಡಾ|| ಎ ಸತ್ಯನಾರಾಯಣ, Srinidhi Tg Omshivaprakash HLN A Mahamed Ismail – ಎಲ್ಲರಿಗೂ ನನ್ನ ಕೃತಜ್ಞತೆಗಳು. (ನಾನೂ ಈ ಕನ್ನಡ + ಕಂಪ್ಯೂಟರ್‌ ತಂಡದ ಸದಸ್ಯ ಅನ್ನಿ). 
 
ಸೆ.೨೬ರ ಶುಕ್ರವಾರ, ಸುರಾನಾ ಕಾಲೇಜಿನ ಸೆಮಿನಾರ್‌ ಸಭಾಂಗಣದಲ್ಲಿ ಬೆಳಗ್ಗೆ ೧೦.೦೦ ಗಂಟೆಗೆ ಕಾರ್ಯಕ್ರಮ. ನಮ್ಮ ತರಗತಿಗಳಿಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳೂ ಅಲ್ಲಿರುತ್ತಾರೆ. ನೀವೂ ಬನ್ನಿ!17092014 freebook invitation FINAL
ಈ ಕಾರ್ಯಕ್ರಮಕ್ಕೆ ಬಂದು ಪುಸ್ತಕ ಬಿಡುಗಡೆ ಮಾಡಲು ಕಳೆದ ವರ್ಷವೇ ಒಪ್ಪಿಗೆ ನೀಡಿದ್ದ ನಮ್ಮ ಕನ್ನಡದ ಯುವ – ಜನಪ್ರಿಯ ಹಾಡುಗಾರ, ಖ್ಯಾತ ಸಂಗೀತಗಾರ ಗಿಟಾರಿನ ಮೋಡಿಗಾರ ಶ್ರೀ ರಘು ದೀಕ್ಷಿತ್‌ @raghudixit.music ಈಗಲೂ `ಖಂಡಿತ ಬರ್‍ತೀನ್ರೀ’ ಎಂದು ಖುಷಿಯಿಂದ ಒಪ್ಪಿದ್ದಾರೆ. ಸುರಾನಾ ಕಾಲೇಜಿನ ಮ್ಯಾನೇಂಜಿಂಗ್‌ ಟ್ರಸ್ಟೀ ಶ್ರೀಮತಿ ಅರ್ಚನಾ ಸುರಾನಾ ಮುಖ್ಯ ಅತಿಥಿಯಾಗಿರುತ್ತಾರೆ; ಕಾಲೇಜಿನ ಪ್ರಾಂಶುಪಾಲ ಡಾ|| ಬಿ ಎಸ್‌ ಶ್ರೀಕಂಠ ಅಧ್ಯಕ್ಷತೆ ವಹಿಸುವರು.ಈ ಪುಸ್ತಕ ಬೇಕಾದವರು ಬೆಂಗಳೂರಿನ ಶಂಕರಪುರಂನಲ್ಲಿರುವ ನಮ್ಮ ರಿವರ್‌ಥಾಟ್ಸ್‌ [ Riverthoughts Media Private Limited] ಕಚೇರಿಗೆ ಬಂದು ಪಡೆಯಬಹುದು. ಇದರ ಇ-ಪ್ರತಿಯನ್ನೂ ಪ್ರಕಟಿಸುವ ಇರಾದೆ ಇದೆ. ನಮ್ಮ ಉದ್ದೇಶ ಪುಸ್ತಕ ಸಂಸ್ಕೃತಿ… ಅದು ಮುದ್ರಿತವೇ ಆಗಬೇಕು ಎಂಬ ಹಟ ನಮಗಿಲ್ಲ. ಅಥವಾ ಈ ಅಭಿಯಾನವನ್ನು ನಾವೊಬ್ಬರೇ ಮಾಡಬೇಕು ಎಂದೂ ಬಯಸಿಲ್ಲ.  ನೀವೂ ಈ ಅಭಿಯಾನವನ್ನು ಮುಂದುವರೆಸಬಹುದು! ವಿವರಗಳಿಗೆ ನಮ್ಮನ್ನು ಸಂಪರ್ಕಿಸಿ.
 
ಅಂದಹಾಗೆ, ಮುಂದಿನ ದಿನಗಳಲ್ಲಿ `ಉಚಿತ ಪುಸ್ತಕ ಸಂಸ್ಕೃತಿ’ ಅಭಿಯಾನದ ಮೂಲಕ ಪ್ರಕಟಿಸಬಹುದಾದ ವಿಷಯಗಳನ್ನು ನೀವು ಸೂಚಿಸಬಹುದು; ಬರೆಯಲೂ ಬಹುದು; ಪ್ರಾಯೋಜಿಸಲೂಬಹುದು!  
ವಿಶ್ವಾಸದಿಂದ 
ಬೇಳೂರು ಸುದರ್ಶನ
ರಾಮನಾಥ ಮಯ್ಯ
(ಟ್ರಸ್ಟೀಗಳು, ಮಿತ್ರಮಾಧ್ಯಮ)

 

Leave a Reply

Theme by Anders Norén