ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು, ಸುದ್ದಿ

ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್

ಪ್ರತಿ ರಾತ್ರಿ ಒಂಬತ್ತೂವರೆ ಆಗುತ್ತಿದ್ದಂತೆ ಪಂಜಾಬಿನ ಭಟಿಂಡಾ ರೈಲು ನಿಲ್ದಾಣದಿಂದ ಟ್ರೈನ್ ನಂ. ೩೩೯ ನಿಧಾನವಾಗಿ ರಾಜಸ್ಥಾನದ ಬಿಕಾನೇರಿನತ್ತ ಗಾಲಿ ಎಳೆಯುತ್ತ ಸಾಗುತ್ತದೆ. ಈ ರೈಲಿನ ಹೆಸರೇ ಕ್ಯಾನ್ಸರ್ ಟ್ರೈನ್. ಪ್ರತಿದಿನ ಇಲ್ಲಿಂದ ಕನಿಷ್ಟ ೬೦ ಕ್ಯಾನ್ಸರ್ ರೋಗಿಗಳು ಬಿಕಾನೇರಿನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ ಹೋಗುತ್ತಾರೆ.

ಬರೀ ನಗರದ ಕಾಯಿಲೆ ಎಂದೇ ಪರಿಗಣಿತವಾಗಿದ್ದ ಕ್ಯಾನ್ಸರ್ ಈಗ ಹಳ್ಳಿಗರನ್ನೂ ಬಲಿ ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ಅಚ್ಚರಿ, ಆತಂಕ ತಂದಿದೆ. ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಶನ್ ಆಫ್ ಮೆಡಿಕಲ್ ಎಜುಕೇಶನ್ ಎಂಡ್ ರಿಸರ್ಚ್ (ಪಿ ಜಿ ಐ ಎಂ ಇ ಆರ್) ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗದ ಸಾರ್ವಜನಿಕ ಆರೋಗ್ಯ ಶಾಲೆ, ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿ – ಇವುಗಳಲ್ಲಿದ್ದ ವಿಜ್ಞಾನಿಗಳು ಸಂಯುಕ್ತವಾಗಿ ನಡೆಸಿದ ಅಧ್ಯಯನದಲ್ಲಿ ಕ್ಯಾನ್ಸರ್ ಹೆಚ್ಚಳದ ದಾಖಲೆಯಾಗಿದೆ.

ಈ ಅಧ್ಯಯನವನ್ನು ನೀವು ಮಿತ್ರಮಾಧ್ಯಮ ವೆಬ್‌ಸೈಟಿನಿಂದಲೇ ಪಡೆದು ಓದಬಹುದು. ಈ ವರದಿಯಲ್ಲಿ ಇರುವ ಕೆಲವು ಸಾಲುಗಳನ್ನು ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ. ಕೀಟನಾಶಕಗಳು ಮತ್ತು ಹಸಿರುಕ್ರಾಂತಿಯ ಸಾಮಾಜಿಕ ದುಷ್ಪರಿಣಾಮಗಳು ಹೇಗೆ ತಾಳವಂಡಿ ಸಾಬೋ ಗ್ರಾಮವನ್ನು ಆಕ್ರಮಿಸಿವೆ ಎಂದು ಗಮನಿಸಿ:

The proportion of people drinking alcohol in Talwandi Sabo was higher as compared to those in Chamkaur Sahib (p<0.002). It has been estimated by Guenel et al that alcohol drinking increases the risk of breast cancer in women by approximately 7{6b09db3aa5f93902f5b13d7cd1ca34c48af3bc9efd698eb6a237d5b106094f0c} for each increment of 10 g alcohol per day [13]. It was noticed that smoking (14{6b09db3aa5f93902f5b13d7cd1ca34c48af3bc9efd698eb6a237d5b106094f0c}), chewing tobacco (7.8{6b09db3aa5f93902f5b13d7cd1ca34c48af3bc9efd698eb6a237d5b106094f0c}) and passive smoking (18.4{6b09db3aa5f93902f5b13d7cd1ca34c48af3bc9efd698eb6a237d5b106094f0c}) were higher in Talwandi Sabo than Chamkaur Sahib (p<0.002). A hospital-based case-control study conducted among southern Indian patients suggests an association of cancer esophagus with smoking, alcohol and betel nut chewing, similar to reports from other parts of the country and the world [12].

It was shown that the level of heptachlor, a known carcinogen that is now banned in India were higher in

samples of tap water in Talwandi Sabo as compared with Chamkaur Sahib[14]. A similar study carried out by Quintana et al in USA found that the highest quartile level of organochlorines were also associated with elevated Non Hodgkin lymphoma risk (OR 2.7) [15]. Mills et al in United Farm Workers of America had shown that risk of prostate cancer was increased with specific chemicals, including simazine, lindane, heptachlor and suggestive increases were observed with dichlorvos. A comparison of Talwandi Sabo and Chamkaur Sahib  shows that heavy metals like arsenic (0.015 ppm), selenium (0.09 ppm) and mercury (0.004 ppm) were above the permissible level. A study carried out by Dixit et al in industrial area of Delhi has shown that the levels of  manganese, copper, selenium and cadmium were found marginally above the Indian Standards (IS) in groundwater supply [16]. A study carried out in Orsk city of Russia  found that the high carcinogenic risk is associated with arsenic in water [17].

 

ಡೇನಿಯೆಲ್ ಜ್ವೆರ್‍ದ್‌ಲಿಂಗ್ ಎಂಬ ಹಿರಿಯ ಪತ್ರಕರ್ತ ಎನ್ ಪಿ ಆರ್ (ನ್ಯಾಶನಲ್ ಪಬ್ಲಿಕ್ ರೇಡಿಯೋ)ಗಾಗಿ ಭಟಿಂಡಾ ರೈಲುನಿಲ್ದಾಣದಲ್ಲಿ ಈ ನತದೃಷ್ಟರನ್ನು ಕಂಡು ತನ್ನ ಅನುಭವಗಳನ್ನು ದಾಖಲಿಸಿದ್ದಾನೆ.  ೨೦೦೯ರ ಮೇ ತಿಂಗಳಿನಲ್ಲಿ ಆತ ಪ್ರಕಟಿಸಿದ ಈ ಕಥೆ ಕೇಳಿ: 

ರೋಗಿಗಳು ನಿಧಾನವಾಗಿ ಶಾಲು ಹೊದ್ದುಕೊಂಡು ಪ್ಲಾಟ್‌ಫಾರ್ಮಿನಲ್ಲಿ ಕೂತುಕೊಂಡಿದ್ದಾರೆ. ಚಹಾ, ಚಪಾತಿ ಮಾರುವವರು ಅತ್ತಿತ್ತ ತಿರುಗುತ್ತಿದ್ದಾರೆ.

`ಇವನಿಗೆ ರಕ್ತದ ಕ್ಯಾನ್ಸರ್ ರೋಗ’ ಎಂದು ಬಿಳಚಿಕೊಂಡ ಹದಿನಾರರ ಹರೆಯದ ಮಗನನ್ನು ತೋರಿಸುತ್ತ ಜಸ್ಸಾ ಸಿಂಗ್ ಹೇಳುತ್ತಾನೆ.  ಇನ್ನೊಬ್ಬ ತನ್ನ ಮಗನ ಪಿರ್ರೆಯ ಮೂಳೆಗೆ ಕ್ಯಾನ್ಸರ್ ಬಂದಿದೆ ಎಂನ್ನುತ್ತಾನೆ. ಹಳದಿ ಪೇಟಾ ಧರಿಸಿದ ಘನತೆವೆತ್ತ ವೃದ್ಧನೊಬ್ಬ ತನಗೆ ಗಂಟಲಿನ ಕ್ಯಾನ್ಸರ್ ಆಗಿದೆ ಎಂದು ತಿಳಿಸುತ್ತಾನೆ. `ನೋಡಿ ಮಾತನಾಡೋದೇ ಕಷ್ಟ’ ಎಂದು ಕಂಪ್ಯೂಟರಿನಂತೆ ಧ್ವನಿ ಹೊರಡಿಸುತ್ತಾನೆ. ಅವನ ಗಂಟಲಿಗೆ ಯಾವುದೋ ಸಾಧನವನ್ನು ಸಿಕ್ಕಿಸಿದ್ದಾರೆ. ಅವರೆಲ್ಲರೂ ಕೃಷಿಕರು. `ವಿಷಯ ಏನಪ್ಪಾ ಅಂದ್ರೆ ಕೃಷಿ ಉತ್ಪಾದನೆ ಚೆನ್ನಾಗೇ ಇದೆ. ಆದ್ರೆ ಎಲ್ರಿಗೂ ಅನಾರೋಗ್ಯ. ಇಲ್ಲಿರೋ ಜನರ ಆರೋಗ್ಯ ದಿನೇ ದಿನೇ ಹದಗೆಡ್ತಾ ಇದೆ’ ಎಂದು ಅವರೆಲ್ಲ ಒಮ್ಮತದಿಂದ ನುಡಿಯುತ್ತಾರೆ.

೧೯೬೦ ಮತ್ತು  ೭೦ರ ದಶಕದಲ್ಲಿ ಪಂಜಾಬಿನಾದ್ಯಂತ ಹಸಿರು ಕ್ರಾಂತಿಯ ಬಿರುಗಾಳಿ ಬೀಸಿತ್ತು. ಹಸಿರು ಎಂದರೆ ಆಗ ಇಂದಿನ ಹಾಗೆ ಸಾವಯವವೂ ಆಗಿರಲಿಲ್ಲ; ಕೀಟನಾಶಕಮುಕ್ತವೂ ಆಗಿರಲಿಲ್ಲ. ರಾಜಕಾರಣಿಗಳು, ವಿಜ್ಞಾನಿಗಳು, ಅಮೆರಿಕಾದ ದಆನಿ ಸಂಸ್ಥೆಗಳು ಮಾನವೀಯತೆ ಮತ್ತು ಶೀತಲ ಸಮರದ ಪ್ರಭಾವಕ್ಕೆ ಒಳಗಾಗಿ ಈ ಹಸಿರುಕ್ರಾಂತಿಗೆ ಮುನ್ನುಡಿ ಬರೆದಿದ್ದರು.

ಭಾರತದಂಥ ದೇಶದಲ್ಲಿ ರೈತರು ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಅಮೆರಿಕಾದ ಹಾಗೆ ಕೀಟನಾಶಕ, ರಸಗೊಬ್ಬರ ಹಾಗೂ ಅಧಿಕ ಇಳುವರಿ ತಳಿಗಳನ್ನು ಬಳಸಬೇಕು ಎಂಬುದು ಅವರೆಲ್ಲರ ಖಚಿತ ಅಭಿಮತವಾಗಿತ್ತು. ಆದರೆ ಇದಕ್ಕಾಗಿ ಭಾರೀ ಬೆಲೆ ತೆರುತ್ತಿದ್ದೇವೆ ಎಂದು ಪಂಜಾಬಿನ ರೈತರಿಗೆ ಅನ್ನಿಸಿರುವುದು ವಾಸ್ತವ.

ಪಂಜಾಬಿನ ಪುಟ್ಟ ಹಳ್ಳಿ ಜಜ್ಜಾಲ್‌ನ ರೈತ ಜರ್ನೈಲ್ ಸಿಂಗ್‌ಗೆ ಈ ಬಗೆಯ ಕಾಯಿಲೆಯ ಪ್ರಕರಣಗಳು ಅನುಮಾನ ಹುಟ್ಟಿಸಿದವು. ಆತನೇ ಪಿ ಜಿ ಐ ಎಂ ಇ ಆರ್ ಗೆ ಈ ಸುದ್ದಿ ಮುಟ್ಟಿಸಿದ.

ನಿಮಗೆ ಭಾರತದ ರಾಷ್ಟ್ರೀಯ ಪಕ್ಷಿ ಗೊತ್ತಿರಬಹುದು : ನವಿಲು. ಇವು ಪಂಜಾಬಿನಲ್ಲಿ ಹೇರಳವಾಗಿದ್ದವು. ಆದರೆ ಎಂಬತ್ತರ ದಶಕದ ಕೊನೆಯಲ್ಲಿ, ೯೦ರ ದಶಕದ ಆರಂಭದಲ್ಲಿ ಇವೆಲ್ಲವೂ ಕಣ್ಮರೆಯಾಗಿರೋದನ್ನು ಜರ್ನೈಲ್ ಸಿಂಗ್ ಗಮನಿಸಿದ. ವರ್ಷಗಳ ಅಂತರದಲ್ಲಿ ಅವನ ಕುಟುಂಬದಲ್ಲಿ ಏಳು ಜನರಿಗೆ ಕ್ಯಾನ್ಸರ್ ಕಾಯಿಲೆ ವಕ್ಕರಿಸಿತ್ತು. ಅವರಲ್ಲಿ ಮೂವರು ಸತ್ತರು. ಜಜ್ಜಾಲ್‌ನ ನೆರೆಹೊರೆ ಹಳ್ಳಿಗಳಲ್ಲೂ ಈ ಪ್ರಕರಣಗಳು ಕಂಡುಬಂದವು.

ಕೀಟನಾಶಕ ಬಳಸುವಾಗ ರೈತರು ತಮ್ಮ ದೇಹವನ್ನು ಮುಚ್ಚಿಕೊಂಡಿರುವುದಿಲ್ಲ. ಅವರ ಕಣ್ಣು, ಕೂದಲು ಎಲ್ಲೆಲ್ಲೂ ಕೀಟನಾಶಕ ಹತ್ತಿಕೊಂಡಿರುತ್ತದೆ. ನಿಜ, ಈ ಕೀಟನಾಶಕಗಳ ಮೇಲೆ ಬಳಕೆ ಕುರಿತ ಸೂಚನೆಗಳಿರುತ್ತವೆ. ಆದರೆ ಭಾರತದ ರೈತರನ್ನು ಕೇಳಬೇಕೆ? ಅವರಿಗೆ ಸೂಚನೆಗಳನ್ನು ಓದಿ ಹೇಳುವವರಾರು?  ಒಂದು ಋತುವಿನಲ್ಲಿ ಎರಡು ಸಲ ಮಾತ್ರ ಕೀಟನಾಶಕ ಬಳಸಬೇಕು ಎಂದಿದ್ದರೂ ರೈತರು ಒಂದು ಡಜನ್ ಸಲ ಕೀಟನಾಶಕ ಸಿಂಪಡಿಸಿದ್ದಿದೆ. ಇದೆಲ್ಲದರ ಫಲವೇ ಕ್ಯಾನ್ಸರ್ ಟ್ರೈನ್. ಈ ಪ್ರದೇಶದಲ್ಲಿ ಕ್ಯಾನ್ಸರ್ ವಿಪರೀತ ಪ್ರಮಾಣದಲ್ಲಿ ರೈತರನ್ನು ಆಕ್ರಮಿಸಿದ್ದನ್ನು ಅಧ್ಯಯನ ಖಚಿತಪಡಿಸಿದೆ.

ಬಿಕಾನೇರ್‌ಗೆ ಬೆಳಗ್ಗೆ ಆರು ಗಂಟೆಗೆ ತಲುಪುವ ರೈಲಿನಿಂದ ಇಳಿಯುವ ಈ ರೋಗಿಗಳು ಸೀದಾ ಆಚಾರ್ಯ ತುಳಸಿ ರೀಜನಲ್ ಕ್ಯಾನ್ಸರ್ ಟ್ರೀಟ್‌ಮೆಂಟ್ ಎಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ತೆರಳುತ್ತಾರೆ. ದಿನವಿಡೀ ವಿವಿಧ ಪರೀಕ್ಷೆ, ತಪಾಸಣೆಗಳಿಗೆ ಒಡ್ಡಿಕೊಂಡ ಈ ರೋಗಿಗಳು ಮತ್ತೆ ರೈಲು ನಿಲ್ದಾಣಕ್ಕೆ ಬಂದು ಕ್ಯಾನ್ಸರ್ ಟ್ರೈನ್ ಸಮಯಕ್ಕೆ ಸರಿಯಾಗಿ ಬರುವುದೇ ಎಂದು ವಿಚಾರಿಸುತ್ತಾರೆ.

ಮೇರೆ ದೇಶ್ ಕೀ ಧರತೀ….

ಈ ಕಥೆಯೇನೂ ವಿದೇಶಿ ಪತ್ರಕರ್ತರಿಗೆ ಮಾತ್ರವೇ ಕಾಣಿಸಿದ್ದಲ್ಲ. ಮುಂಬಯಿ ಮೂಲದ ಸಿನೆಮಾ ಪತ್ರಕತ್ರ ಸುಮಿತ್ ಖನ್ನಾಗೂ ಈ ವಿಷಯ ಹೊಳೆಯಿತು. ಅರೆ, ಪಂಜಾಬಿನ ಹಸಿರು ಹೊಲಗಳಲ್ಲಿ ಗುಬ್ಬಚ್ಚಿಗಳೇ ಇಲ್ಲವಲ್ಲ ಎಂದು ಆತ ಅಚ್ಚರಿಯಿಂದ ಗಮನಿಸಿದ. ` ಆಹಾರ ಅಪಾರವಾಗಿದ್ದರೂ ಗುಬ್ಬಚ್ಚಿಗಳು ಯಾಕೆ ಇಲ್ಲಿ ಕಾಣಿಸುತ್ತಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡಿತು. ಆಮೇಲೆ, ಇಲ್ಲಿನ ಹೊಲಗಳು ಇಷ್ಟೆಲ್ಲ ಕೀಟನಾಶಕಗಳಿಂದ ತುಂಬಿರುವಾಗ ಯಾವ ಪಕ್ಷಿ, ಪ್ರಾಣಿಯೂ ಇಲ್ಲಿನ ಆಹಾರ ಬಯಸುವುದಿಲ್ಲ ಎಂಬ ಅರಿವಾಯಿತು’ ಎಂದು ಸುಮಿತ್ ಖನ್ನಾ ಹೇಳುತ್ತಾರೆ. ಅವರ ಈ ತನಿಖಾ ಪ್ರವೃತ್ತಿಯ ಫಲವೇ ೫೮ ನಿಮಿಷಗಳ ಸಾಕ್ಷ್ಯಚಿತ್ರ: ಮೆರೆ ದೇಶ್ ಕೀ ಧರತೀ. ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ಟ್ರಸ್ಟ್ (ಪಿ ಎಸ್ ಬಿ ಟಿ) ಹಣಕಾಸು ನೆರವಿನೊಂದಿಗೆ ಈ ಸಿನೆಮಾ ನಿರ್ಮಿಸಲಾಗಿದೆ. ೨೦೦೬ರಲ್ಲಿ ರಾಷ್ಟ್ರೀಯ ಚಲಚ್ಚಿತ್ರೋತ್ಸವದಲ್ಲಿ ಅತ್ಯುತ್ತಮ ತನಿಖಾ ವರದಿ ಸಿನೆಮಾ ಪ್ರಶಸ್ತಿಯನ್ನು ಗಳಿಸಿರುವ ಈ ಸಿನೆಮಾದ ಕಥೆ ೧೯೬೬ರ ಹಸಿರು ಕ್ರಾಂತಿಯ ಆರಂಭದಿಂದಲೇ ಶುರುವಾಗುತ್ತದೆ. ಆ ವರ್ಷ ಭಾರತಕ್ಕೆ ೧೮ ಸಾವಿರ ಟನ್ ಬೀಜ ಮೆಕ್ಸಿಕೋದಿಂದ ಬಂತು.

ಈ ಸಿನೆಮಾದಲ್ಲಿ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ನೆಲ ಮತ್ತು ನೀರು ವಿಭಾಗದ ಮುಖ್ಯಸ್ಥ ಡಾ. ಜಿ ಎಸ್ ಹೀರಾ ಹೇಳುತ್ತಾರೆ: ಇಷ್ಟು ಭಾರೀ ಪ್ರಮಾಣದಲ್ಲಿ ಕೀಟನಾಶಕ ಬಳಸದಿದ್ದರೆ ಫಸಲು ಬರೋದೇ ಇಲ್ಲ!

ಕೀಟನಾಶಕಗಳ ಭಾರೀ ಪ್ರಚಾರ ಜಾಹೀರಾತುಗಳನ್ನೂ ಈ ಸಿನೆಮಾದಲ್ಲಿ ದಾಖಲಿಸಲಾಗಿದೆ. ಈ ಕೀಟನಾಶಕಗಳಲ್ಲಿ ಕ್ಯಾನ್ಸರ್ ಜನಕ ಗುಣಗಳಿವೆ  ಎಂದು (ಮೇಲೆ ತಿಳಿಸಿದ ಅಧ್ಯಯನ ಮಾಡಿದ) ಡಾ. ಜೆ ಎಸ್ ಠಾಕುರ್ ಹೇಳಿಕೆಯೂ ಇದರಲ್ಲಿ ದಾಖಲಾಗಿದೆ.

ಜೈಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್‌ನ ಡಾ. ಎಸ್ ಜಿ ಕಾಬ್ರಾ ಮಾಡಿದ ಅಧ್ಯಯನದ ಸಾರಾಂಶವನ್ನೂ ಸುಮಿತ್ ಖನ್ನಾ ದಖಲಿಸಿದ್ದಾರೆ. ಈ ಅಧ್ಯಯನ ಹೇಳಿದೆ: ತರಕಾರಿಗಳಲ್ಲಿ ಇರುವ ಅತ್ಯಧಿಕ ಪ್ರಮಾಣದ ಕೀಟನಾಶಕಗಳಿಂದಾಗಿ ಪಂಜಾಬಿನಲ್ಲಿ ಮೆದುಳೇ ಇಲ್ಲದ ಮಕ್ಕಳು ಉಟ್ಟುವ ಪ್ರಕರಣಗಳು ಅತ್ಯಧಿಕವಾಗಿವೆ. `ಇಂಥ ದುರಂತಕ್ಕೆ ಗರ್ಭಿಣಿ ಸ್ತ್ರೀಯರು ಆರಂಭದ ದಿನಗಳಲ್ಲಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ತಿಂದಿದ್ದೇ ಕಾರಣ ಎಂಬುದನ್ನು ನಮ್ಮ ಅಧ್ಯಯನ ಸ್ಪಷ್ಟಪಡಿಸಿದೆ’ ಎನ್ನುತ್ತಾರೆ ಡಾ. ಕಾಬ್ರಾ.

ಅಭಿವೃದ್ಧಿಶೀಲ ದೇಶಗಳಲ್ಲಿ ಹಸಿರುಕ್ರಾಂತಿಯಿಂದಾಗಿ ಕನಿಷ್ಟ ಎಂಟು ಲಕ್ಷ ಜನ ಜೀವ ಕಳೆದುಕೊಂಡಿದ್ದಾರೆ ಎಂಬುದು ಒಂದು ಅಂದಾಜು. (ಹಸಿರುಕ್ರಾಂತಿಯಿಂದಾಗಿ ೨೫ ಕೋಟಿ ಜನ ಬದುಕುಳಿದರು ಎಂಬುದು ಪ್ರತಾಪಸಿಂಹರು `ವಿಜಯ ಕರ್ನಾಟಕ’ದಲ್ಲಿ ಬರೆದ ಲೇಖನದ ಅಭಿಪ್ರಾಯ). ಕೀಟನಾಶಕಗಳಿಂದ ಉಪಯೋಗವೇ ಆಗಿದ್ದಲ್ಲಿ ಈಗಲೂ ಶೇ. ೮೪ರಷ್ಟು ರೈತರು ಸಾಲದಿಂದ ನರಳುತ್ತಿದ್ದಾರೇಕೆ ಎಂಬ ಪ್ರಶ್ನೆಯನ್ನು `ಮೇರೆ ದೇಶ್ ಕೀ ಧರತೀ’ ಕೇಳುತ್ತದೆ.
ಉತ್ತರ ಕೊಡುವವರಾರು?

ಕ್ಯಾನ್ಸರ್ ಟ್ರೈನ್ ಬಗ್ಗೆ ಬಂದ ಇನ್ನೊಂದು ವರದಿಯನ್ನು ಇದ್ದ ಹಾಗೇ ಕೊಡುತ್ತೇನೆ:

 

Green revolution’s cancer train

Pesticides and cancer: a murderous concoction, a massive environmental and health disaster, while people are dying in village after village of Punjab

By Sandeep Yadav Faridkot/Muktsar

Despite the relentless suffering, 41-year-old Karamjeet Kaur is not scared of death. Member of a proud, landed family in Kotbhai village in district Muktsar, this mother of three has been diagnosed with uterus cancer. The revelation has brought no change in her daily chores, except that she has to travel long distance for periodic check-ups at the Acharya Tulsi Regional Cancer Treatment and Research Centre, at Bikaner, in Rajasthan. Her hair has turned white due to illness and heavy medicines, and her face is weary in the fading daylight. Yet, she tells her story with immense dignity, so distinctive among the strong, hardworking women of Punjab. And it doesn’t matter if it is her cancer she is talking about.

Karamjeet is one of the five battling cancer in her village. The Jhoke Sarkari village, in Faridkot district, has  10 cancer patients. There have been 15 cancer-related deaths in the last five years here. Even children, as young as ten- year-old, are suffering from joint pains, arthritis and greying of hair. Their suffering is starkly visible.

It’s the same story in several villages of Punjab—Jhariwala, Koharwala, Puckka, Bhimawali, Khara. Recently, a 12-year-old boy died of cancer in Khara village and a 25-year-old woman has been detected with breast cancer. Similar cases of cancer deaths (apart from farmers’ suicides) have become the norm in the whole of Malwa region of Punjab, comprising the districts of Muktsar, Faridkot, Moga, Sangroor and Bathinda. Although the government has claimed 172 cancer deaths in Muktsar district in the last two years, Manpreet Badal, the Shiromani Akali Dal MLA from Giddarbaha, contested the claim. He has a list of 300 cancer deaths from Giddarbaha constituency alone. “In the 50 villages falling in my constituency I have attended close to 300 funerals of people dying due to cancer in the last three months,” says Manpreet.

“Punjab is in the grip of a terrible environmental and health crisis emanating from the intensive farming practices involving large doses of chemicals and pesticides in use for the past four decades,” says Devinder Sharma, agriculture policy analyst. The green revolution has not really been so green. The environment has been intensely contaminated by the rampant use and abuse of chemicals and pesticides. The underground water is clinically unfit for drinking or for irrigation.

A comprehensive study conducted in the area by the prestigious Post Graduate Institute of Medical Education and Research (PGIMER), Chandigarh, brings out unequivocal evidence that the use of indiscriminate, indiscreet, excessive and unsafe pesticides is directly responsible for the rapid and significant rise in the number of pesticide-related cases of cancers and cancer deaths. Studies by the Consultative Group on International Agriculture Research (CGIAR) have established that Punjab is facing a serious second-generation environmental crisis.

ಪಂಜಾಬನ್ನು ಬೋರಲಾಗಿಸಿದ ಬೋರ್ಲಾಗ್
`ಹೆಚ್ಚು ಕೀಟನಾಶಕ ಬಳಸಿರಿ, ಅಧಿಕ ಇಳುವರಿ ಪಡೆಯಿರಿ’ ಎಂಬ ಮಂತ್ರವನ್ನು ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಮತ್ತು ಕೀಟನಾಶಕ ಕಂಪೆನಿಗಳು ರೈತರಿಗೆ ಬೋಧಿಸಿದ್ದೇ ಇಷ್ಟೆಲ್ಲ ದುರಂತಕ್ಕೆ ಕಾರಣ ಎನ್ನುತ್ತಾರೆ ಫರೀದ್‌ಕೋಟ್‌ನ ಎನ್ ಜಿ ಓ ಖೇತಿ ವಿರಾಸತ್ ಮಿಶನ್‌ನ ಉಮೇಂದ್ರ ದತ್. ೧೯೬೦ರಲ್ಲಿ ಹತ್ತಿಗೆ ಇದ್ದಿದ್ದು ಕೇವಲ ಆರು ಕೀಟಗಳ ಬಾಧೆ. ಈಗ? ಈ ಕೀಟಗಳ ಸಂಖ್ಯೆ ೬೦ ದಾಟಿದೆ ಎಂದವರು ಉದಾಹರಿಸುತ್ತಾರೆ.
ಫಿಲಿಪೈನ್ಸ್‌ನ ಮನಿಲಾದಲ್ಲಿರುವ ಇಂಟರ್‌ನ್ಯಾಶನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ೪೦ ವರ್ಷಗಳ ತೀವ್ರ ಕೀಟನಾಶಕ ಬಳಕೆಯನ್ನು ಬೋಧಿಸಿದ ತರುವಾಯ `ತಪ್ಪಾಯಿತು’ ಎಂದಿದೆ. ಏಶ್ಯಾದಲ್ಲಿ ಕೀಟನಾಶಕಗಳನ್ನು ಭತ್ತದ ಬೆಳೆಗಾಗಿ ಬಳಸಿದ್ದು ಸಮಯ ಮತ್ತು ಪ್ರಯತ್ನದ ವ್ಯರ್ಥ ಎಂದು ಈ ಸಂಸ್ಥೆ ಲಿಖಿತವಾಗೇ ಒಪ್ಪಿಕೊಂಡಿದೆ.
ಪಂಜಾಬಿನ ಕೀಟನಾಶಕ ದುಷ್ಪರಿಣಾಮ ಕುರಿತಂತೆ ಅಧ್ಯಯನ ನಡೆಸಲು ಪಂಜಾಬ್ ಸರ್ಕಾರವು ಎರಡು ಸಮಿತಿಗಳನ್ನು ರಚಿಸಿದೆ. ಈ ಸಮಿತಿಗಳ ಸಭೆಯೇ ಸರಿಯಾಗಿ ನಡೆದಿಲ್ಲ. ಇತ್ತ ಪಂಜಾಬಿನಲ್ಲಿ ಬಹುಕೋಟಿ ವಿಶೇಷ  ಆರ್ಥಿಕ ವಲಯದ ಸ್ಥಾಪನೆಯ ಯತ್ನಗಳು ಜೋರಾಗಿ ನಡೆದಿವೆ.
ಆದರೂ ನಾವು ನಾರ್ಮನ್ ಬೋರ್ಲಾಗ್‌ಗೆ ಬೋರಲಾಗಿ ನಮಸ್ಕರಿಸುವುದನ್ನು ಬಿಡುವುದಿಲ್ಲ!

Leave a Reply

Theme by Anders Norén