ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಮಕ್ಕಳ ಪ್ರಬಂಧಗಳು

ಸುವರ್ಣ ಕರ್ನಾಟಕ

ಕನ್ನಡ ನಾಡಿಗೆ ಈಗ ಐವತ್ತರ ಸಂಭ್ರಮ. ಐವತ್ತು ವರ್ಷಗಳ ಹಿಂದೆ ನಮ್ಮ ಕನ್ನಡ ನಾಡು ಕರ್ನಾಟಕ ಎಂಬ ರೂಪು ತಳೆಯಿತು. ಕನ್ನಡಿಗರೇ ಇರುವ ಪ್ರದೇಶಗಳು ಕರ್ನಾಟಕದಲ್ಲಿ ಸೇರಿಕೊಂಡವು. ಅಂದಿನಿಂದ ಇಂದಿನವರೆಗೆ ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆ ಏನಾಗಿದೆ? ನಿಜಕ್ಕೂ ಕನ್ನಡವು ಉಳಿದಿದೆಯೆ? ಬೆಳೆದಿದೆಯೆ? ಈ ಎಲ್ಲ ಪ್ರಶ್ನೆಗಳನ್ನು ಈ ಐವತ್ತರ ಶುಭಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳುವುದು ಅತ್ಯಂತ ಸಮಂಜಸವಾಗಿದೆ. 

ಯಾಕೆಂದರೆ ಇಂದು ನಮ್ಮ ನಾಡಿನ ರಾಜಧಾನಿ ಬೆಂಗಳೂರು ಭಾರತದ ಸಿಲಿಕಾನ್ ಕಣಿವೆ ಎಂದೇ ಹೆಸರಾಗಿದೆ. ಮಾಹಿತಿ ತಂತ್ರeನಕ್ಕೆ ಕರ್ನಾಟಕವು ವಿಶ್ವಪ್ರಸಿದ್ಧವಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿಗಳಲ್ಲೂ ಮಾಹಿತಿ ತಂತ್ರeನದ ಸಂಸ್ಥೆಗಳಿವೆ. ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ವಿಷಯದಲ್ಲಿ ಕರ್ನಾಟಕವು ದೇಶದಲ್ಲೇ ಹೆಸರುವಾಸಿ. ಹೀಗಿದ್ದೂ ಸುವರ್ಣ  ಕರ್ನಾಟಕದ ಈ ಕ್ಷಣದಲ್ಲಿ ಒಂದು ಪ್ರಶ್ನೆ ನಮ್ಮನ್ನು ಕಾಡಲೇಬೇಕು. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಬೆಂಗಳೂರು ಎಂಬ ಹೆಸರನ್ನು ಮತ್ತೆ ಪಡೆಯುತ್ತಿರುವ ಬ್ಯಾಂಗಲೋರ್‌ನಲ್ಲೇ ಕನ್ನಡವು ಮಾಯವಾಗುತ್ತಿದೆಯಲ್ಲ ಯಾಕೆ? ನಮ್ಮ ನಾಡು ಕಲೆ, ಸಂಸ್ಕೃತಿ ಪರಂಪರೆಗಳಿಗೆ, ಭವ್ಯ ಭಾಷಾ ಇತಿಹಾಸಕ್ಕೆ ಪ್ರಸಿದ್ಧವಾಗಿದೆ. ಕನ್ನಡದ ಪದಗಳು ಗ್ರೀಕ್ ದೇಶದಲ್ಲಿಯೂ ದೊರಕಿದ್ದನ್ನು  ರಾಷ್ಟ್ರಕವಿ  ಮಂಜೇಶ್ವರ ಗೋವಿಂದ ಪೈಯವರು ಹುಡುಕಿ ಎಷ್ಟೋ ವರ್ಷಗಳಾದವು.  ಆದರೆ ಈಗ ನಾವು ಬೆಂಗಳೂರಿನ ಹೋಟೆಲ್‌ಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ,  ಬಹುಮಳಿಗೆಗಳಲ್ಲಿ, ಮಾಲ್‌ಗಳಲ್ಲಿ, ಸಿನಿಮಾ ಥಿಯೇಟರ್‌ಗಳಲ್ಲಿ ಕನ್ನಡವನ್ನು ಹುಡುಕುವ ದುರ್ಭರ ಪ್ರಸಂಗ ಒದಗಿದೆ! 

ಸುವರ್ಣ ಕರ್ನಾಟಕದಲ್ಲಿ ಇನ್ನೂ ಒಂದು  ವಿಷಯ ನೆನಪಾಗುತ್ತಿದೆ. ಕನ್ನಡ ಅಕ್ಷರಗಳ ಜೊತೆಗೆ ಬಳಸಬೇಕಾಗಿದ್ದ ಕನ್ನಡ ಅಂಕಿಗಳನ್ನು ನಾವು ಈಗ ಬಹುಪಾಲು ಮರೆತೇಬಿಟ್ಟಿದ್ದೇವೆ. ಕನ್ನಡ ಅಂಕಿಗಳು ಕನ್ನಡ ಪದಗಳ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದವು. ಆದರೆ ನಾವು ಮಾತ್ರ ಇಂಗ್ಲಿಶ್ ಪದಗಳ ಜೊತೆಗೆ ಹೊಂದಿಕೊಂಡಿದ್ದೇವೆ. ಇತ್ತೀಚೆಗೆ ಕನ್ನಡ ಮಾಧ್ಯಮದ ಹೆಸರಿನಲ್ಲಿ ಇಂಗ್ಲಿಶ್ ಮಾಧ್ಯಮ ಶಾಲೆಗಳು ನಡೆಯುತ್ತಿರುವ ವಿವಾದವೂ ಕನ್ನಡ ಉಳಿವಿನ ಕುರಿತಾಗಿದೆ. ಕನ್ನಡ ಸಿನೆಮಾಗಳು ಪರಭಾಷಾ ಚಿತ್ರಗಳ ಹಾಗೂ ಪರಭಾಷಾ ಮಾರಾಟಗಾರರಿಂದಾಗಿ ನೆಲಕಚ್ಚುತ್ತಿವೆ ಎಂಬ ಕೂಗು ಕೇಳಿಬಂದಿದೆ. ಬೆಳಗಾವಿಯ ಮಹಾನಗರಪಾಲಿಕೆಯಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಠರಾವು ಸ್ವೀಕಾರವಾಗುತ್ತದೆ. ಅದಕ್ಕೆಂದೇ ನಮ್ಮ ಈಗಿನ ಸರ್ಕಾರವು ಬೆಳಗಾವಿಯಲ್ಲೇ ವಿಧಾನಮಂಡಲದ ಅಧಿವೇಶನವನ್ನು ನಡೆಸಿ ತನ್ನ ಕನ್ನಡಪ್ರೀತಿಯನ್ನೂ ಮೆರೆದಿದೆ. ಒಟ್ಟಿನಲ್ಲಿ ಕನ್ನಡನಾಡಿನ ಐವತ್ತರ ಈ ಸಂದರ್ಭದಲ್ಲಿ ಕನ್ನಡದ ಬಗೆಗೆ ಹಲವು ವಿವಾದಗಳು, ವಿಚಾರಗಳು ಹುಟ್ಟಿಕೊಂಡಿವೆ. 

ತಂತ್ರeನದ ಮಟ್ಟಿಗೆ ಹೇಳುವುದಾದರೆ, ಮಾಹಿತಿ ತಂತ್ರeನದಿಂದ ಹಿಡಿದು ಹಲವು ವಿeನದ ಕವಲುಗಳಲ್ಲಿ ಕನ್ನಡದ ಪರಿಭಾಷೆ ಬೆಳೆದೇ ಇಲ್ಲ. ಕಂಪ್ಯೂಟರ್ ಬದಲು ಗಣಕ ಎನ್ನುವುದಕ್ಕೇ ನಾವು ಹಿಂಜರಿಯುತ್ತಿದ್ದೇವೆ. ಇನ್ನು ಲ್ಯಾಪ್‌ಟಾಪ್‌ಗೆ ಮಡಿಲುಗಣಕ ಎನ್ನುವುದಂತೂ ದೂರವೇ ಉಳಿಯಿತು. ಅದಿರಲಿ, ಜೀವಶಾಸ್ತ್ರ, ಭೌತಶಾಸ್ತ್ರ, ಗಣಿತ, ಕಲೆ, ಇತಿಹಾಸ, ಮುಂತಾದ ವಿಷಯಗಳಲ್ಲಿ ಈಗ  ಹುಟ್ಟಿಕೊಂಡಿರುವ ಸಾವಿರಾರು ಉಪವಿಷಯಗಳ ಬಗ್ಗೆ ಈಗ ಕನ್ನಡದಲ್ಲಿ ಪದಗಳು ಸಿಗುವುದೇ ಇಲ್ಲ. ತಾಂತ್ರಿಕ ಬರವಣಿಗೆ ಎಂಬುದು ಕನ್ನಡಕ್ಕೆ ತೀರಾ ಹೊಸತು. ಇಂಥ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯನ್ನು ಉಳಿಸುವುದು ಹೇಗೆ? 

ಕನ್ನಡದ ಬಗ್ಗೆ ಭಾಷಣ ಮಾಡಿದರೆ, ಘೋಷಣೆ ಕೂಗಿದರೆ, ಪ್ರತಿಭಟನೆ ಮಾಡಿದರೆ, ಕನ್ನಡ ವಿರೋಧಿಗಳಿಗೆ ಮಸಿ ಬಳಿದರೆ  ಕನ್ನಡ ಬೆಳೆಯುವುದೆ? ಖಂಡಿತಾ ಇಲ್ಲ. ಆದರೆ ಕನ್ನಡ ಭಾಷೆಯನ್ನು ಬೆಳೆಸುವ ಬಗ್ಗೆ ಚರ್ಚೆ ನಡೆಯಬೇಕು. ಕನ್ನಡ ಬಲ್ಲ ಹಿರಿಯರು, ವಿವಿಧ ವಿಷಯಗಳ ತಜ್ಞರು ಕನ್ನಡ ಭಾಷೆಯನ್ನು ಬೆಳೆಸಲು ಹೊಸ ಪದಗಳನ್ನು ಹುಡುಕಬೇಕು. ಕನ್ನಡದಲ್ಲಿ ಈಗಿನ ವಿeನದ ಮತ್ತು ಹಲವು ಹೊಚ್ಚ ಹೊಸ ವಿಷಯಗಳ ಮೇಲೆ ಪುಸ್ತಕಗಳು, ಪಠ್ಯಪುಸ್ತಕಗಳು ಬರಬೇಕು. ಕಂಪ್ಯೂಟರಿನಲ್ಲಿ ಸಂಪೂರ್ಣವಾಗಿ ಕನ್ನಡ ಬಳಸಬೇಕು. ಕಂಪ್ಯೂಟರಿನ ಪ್ರೋಗ್ರಾಮಿಂಗ್ ಭಾಷೆಯೂ ಕನ್ನಡದಲ್ಲೇ ರೂಪುಗೊಳ್ಳಬೇಕು. ಹಾಗಾದಾಗ ಮiತ್ರ ಮಾಹಿತಿ ತಂತ್ರeನದಲ್ಲೂ ಕನ್ನಡ ಬೆಳೆಯುತ್ತದೆ. 

ಸುವರ್ಣ ಕರ್ನಾಟಕದ ಈ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ಐಟಿ.ಇನ್ ಎಂಬ ದೊಡ್ಡ ಮಾಹಿತಿ ತಂತ್ರeನದ ಜಾಗತಿಕ ಸಂತೆ ನಡೆಯುತ್ತದೆ. ಅದಕ್ಕಾಗಿ ಬೆಂಗಳೂರಿನ ತುಂಬಾ ಹಾಕಿರುವ ಬ್ಯಾನರುಗಳಲ್ಲಿ ಕನ್ನಡವೇ ಇಲ್ಲ ಎಂಬ ಕಾಳಜಿ ಯಾರಿಗೂ ಇಲ್ಲ. ಕನ್ನಡ ಭಾಷೆಯ ಮೇಲೆ ನಾವು ಎಂಥ  ತೋರಿಕೆಯ ಪ್ರೀತಿ ಹೊಂದಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ. 

ಒಟ್ಟಿನಲ್ಲಿ ಸುವರ್ಣ ಕರ್ನಾಟಕದ ಆಚರಣೆ ಎಂದರೆ  ಜಾನಪದ ಮೇಳ, ಸಾಂಸ್ಕೃತಿಕ ಮೇಳ ಎಂದಷ್ಟೆ ತಿಳಿದರೆ ನಾವು ಮುಂದಿನ ದಿನಗಳಲ್ಲಿ ಕನ್ನಡವನ್ನು ಸುಮ್ಮನೆ ವಸ್ತುಪ್ರದರ್ಶನದಲ್ಲಿ ಇಡಬೇಕಾಗುತ್ತದೆ! ಬದಲಿಗೆ ನಾವು ಕನ್ನಡವನ್ನು ಬಳಸುವತ್ತ ಹೆಚ್ಚೆಚ್ಚು ಗಮನ ನೀಡಿದರೆ ಕನ್ನಡವು ಇನ್ನೊಂದಷ್ಟು ಶತಮಾನಗಳಾದರೂ ಬಾಳೀತು, ಬೆಳಗೀತು. 

ಸುವರ್ಣ ಕರ್ನಾಟಕದ ಈ ವರ್ಷದಲ್ಲಿ ನಾವೆಲ್ಲರೂ ಕನ್ನಡದ ಆಚರಣೆಗೆ, ಬೆಳವಣಿಗೆಗೆ ನಮ್ಮೆಲ್ಲರ ಮನಸ್ಸು ಕೊಟ್ಟು ಶ್ರಮಿಸೋಣ.

Leave a Reply

Theme by Anders Norén