ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಮಕ್ಕಳ ಪ್ರಬಂಧಗಳು

ಶಿಕ್ಷಕರ ದಿನಾಚರಣೆ ಮತ್ತು ಗಾಂಧಿ ಜಯಂತಿ

ಪ್ರತಿ ವರ್ಷದ ಸೆಪ್ಟೆಂಬರ್ ೫ರಂದು ನಾವು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಅಂದು ನಾವೆಲ್ಲರೂ ನಮ್ಮ ಶಿಕ್ಷಕರಿಗೆ ನಮಿಸುತ್ತೇವೆ; ಶುಭಾಶಯ ಹೇಳುತ್ತೇವೆ. 

ನಮ್ಮ ದೇಶದ ರಾಷ್ಟ್ರಪತಿಯಾಗಿದ್ದ ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನೇ ಶಿಕ್ಷಕರ ದಿನ ಎಂದು ಆಚರಿಸುತ್ತೇವೆ. ಶಿಕ್ಷಕರ ದಿನ ಎಂದರೆ ಅಂದು ಶಿಕ್ಷಕರು ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು  ಗುರುತಿಸಿ ಗೌರವಿಸುವ ದಿನ. 

ಅಂದು  ವಿದ್ಯಾರ್ಥಿಗಳು ಶಿಕ್ಷಕರಿಗೆ ಶುಭಾಶಯ ಹೇಳುತ್ತಾರೆ. ಹೂ ಗುಚ್ಛ ಕೊಟ್ಟು ನಮಸ್ಕರಿಸುತ್ತಾರೆ. ಈಗ ಹಲವು ಶಾಲೆಗಳಲ್ಲಿ ಶಿಕ್ಷಕರ ದಿನದಂದು ಮಕ್ಕಳು ಶಿಕ್ಷಕರಿಗಾಗಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುವುದೂ  ಇದೆ. ಒಟ್ಟಿನಲ್ಲಿ ಶಿಕ್ಷಕರನ್ನು ಅಂದು ವಿಶಿಷ್ಟವಾಗಿ ಗೌರವಿಸುತವೆ. 

ಶಿಕ್ಷಕರು ವಿದ್ಯಾರ್ಥಿಗಳನ್ನು, ಅಂದರೆ ದೇಶದ ನಾಳೆಯ ಪ್ರಜೆಗಳನ್ನು ಬೆಳೆಸುತ್ತಾರೆ. ಅವರಲ್ಲಿ ಶೀಲ, ಸಚ್ಚಾರಿತ್ರ್ಯ, ಸನ್ನಡತೆಯನ್ನು  ಬೆಳೆಸುತ್ತಾರೆ. ಆದ್ದರಿಂದ ಒಂದು ದೇಶದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು ನಾವು ಯಾವತ್ತೂ ಸ್ಮರಿಸಿಕೊಳ್ಳಬೇಕು. ನಮ್ಮ ಗೌರವವು ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು. 

ಇನ್ನು ಪ್ರತಿ ವರ್ಷದ ಅಕ್ಟೋಬರ್ ೨ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ.  ನಮ್ಮ ದೇಶಕ್ಕೆ ಅಹಿಂಸೆಯ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮಾ ಗಾಂಧಿಯವರು. ಮೋಹನದಾಸ ಕರಮಚಂದ ಗಾಂಧಿಯವರು ೧೮೬೯ರ ಅಕ್ಟೋಬರ್ ೨ರಂದು ಜನಿಸಿದಾಗ ಅವರು  ವಿಶ್ವವೇ ಮೆಚ್ಚುವ ಸತ್ಯ – ಅಹಿಂಸೆಯ  ಹೋರಾಟದ ಹರಿಕಾರರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದ್ದರಿಂದಲೇ ಅಕ್ಟೋಬರ್ ೨ರಂದು ಅವರ ಜನ್ಮದಿನವನ್ನು ನಾವೆಲ್ಲರೂ ಅತ್ಯಂತ ಪ್ರೀತಿಯಿಂದ ಆಚರಿಸುತ್ತೇವೆ. 

ಮಹಾತ್ಮಾ ಗಾಂಧಿಯವರು ತುಂಡುಬಟ್ಟೆಯಲ್ಲೇ ತಮ್ಮ ಜೀವನದ ಬಹುಭಾಗವನ್ನು ಕಳೆದರು. ಎಂದೂ ಅವರು ಒಳ್ಳೆಯ ಆಹಾರಕ್ಕಾಗಿ ಬೇಡಿಕೆ ಇಡಲಿಲ್ಲ. ಕಡಲೆಬೀಜ ತಿಂದರು ; ಆಡಿನ ಹಾಲನ್ನೇ  ಕುಡಿದರು. ಅಂಥ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನಪಿಸಿಕೊಳ್ಳುವುದು ತುಂಬಾ ಸೂಕ್ತವಾಗಿದೆ. ಅಂದು ನಾವು ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುವ ಬಗ್ಗೆ ಮತ್ತೆ ಮತ್ತೆ ಕಂಕಣಬದ್ಧರಾಗಬೇಕು. ಜನ್ಮದಿನದಂದು ನಾವೆಲ್ಲರೂ ಗಾಂಧೀಜಿಯವರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವ ಪ್ರತಿe ಮಾಡಬೇಕು. ಹಾಗಾದಾಗಲೇ ಅವರ ಜನ್ಮದಿನದ ಆಚರಣೆಯು ಸಾರ್ಥಕವಾಗುತ್ತದೆ.

Leave a Reply

Theme by Anders Norén