ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

Why Sahitya Sammelana?

ಬೇಡ ಸಾಹಿತ್ಯ ಸಮ್ಮೇಳನ, ಬೇಕು ಜೀವನ-ಸಂಸ್ಕೃತಿ ಸಮ್ಮೇಳನ

ಕನ್ನಡ ಸಾಹಿತ್ಯ ಎಂದರೆ ಕೇವಲ ಕಥೆ, ಕವನ, ನಾಟಕ ಎಂದು ಸಾಹಿತ್ಯ ಸಮ್ಮೇಳನ ನಡೆಸುವವರು ಮತ್ತು ಕರ್ನಾಟಕ ಸರ್ಕಾರವು ಅಂದುಕೊಂಡಿರುವುದು ಬಾಲಿಶ. ಒಂದೆಡೆ ಕರ್ನಾಟಕ ರಾಜ್ಯವು ಮಾಹಿತಿ ತಂತ್ರeನದಲ್ಲಿ ಮುಂಚೂಣಿಯಲ್ಲಿದೆ ಎನ್ನುವುದು, ಇನ್ನೊಂದೆಡೆ ಸಾಹಿತ್ಯ ಸಮ್ಮೇಳನಗಳಲ್ಲಿ ಸಮಕಾಲೀನ ಭಾಷಾ ಸವಾಲುಗಳನ್ನು ಮರೆತೇಬಿಡುವುದು- ಇದೆಂಥ ಕನ್ನಡ ಸೇವೆ?
ಇದು ಮಾಹಿತಿಸ್ಫೋಟದ ಯುಗ. ಆದರೆ ಕನ್ನಡದಲ್ಲಿ ಮಾಹಿತಿಯನ್ನು ಹಂಚುವುದೇ ಕಷ್ಟವಾಗಿದೆ. ವೈದ್ಯಕೀಯ, ದೂರಸಂಪರ್ಕ, ವ್ಯವಹಾರ – ವಾಣಿಜ್ಯ, ಮಾಹಿತಿ ತಂತ್ರeನ, – ಹೀಗೆ ಹಲವು  ಕ್ಷೇತ್ರಗಳಲ್ಲಿ ಈಗ ಬಳಕೆಯಾಗುತ್ತಿರುವ ಇಂಗ್ಲಿಶ್ ಪದಗಳೆಲ್ಲವೂ ಹೊಸತಲ್ಲ. ಆದರೆ ಅವುಗಳ ಬಳಕೆಯ ವಿಧಾನ ಬದಲಾಗಿದೆ. ಮಾಹಿತಿಯು ಸಂಕೀರ್ಣವಾದಷ್ಟೂ ಪದಗಳ ಜೋಡಣೆಯ ಕಸರತ್ತಿಗೆ ಬೆಲೆ ಬಂದಿದೆ. ನಮಗಿನ್ನೂ ಒಂದು ಸಮಗ್ರ ಗಣಕ ಪದಕೋಶವಾಗಲೀ, ಸಂಕ್ಷಿಪ್ತನಾಮಗಳನ್ನು (ಅಬ್ರಿವಿಯೇಶನ್) ಕನ್ನಡದಲ್ಲಿ ಬರೆಯುವ ಕ್ರಮದ ಶೈಲಿಯಾಗಲೀ  – ಯಾವುದೂ ಇಲ್ಲ.  ನಮ್ಮ ಸರ್ಕಾರವೋ,ಒಂದು ಘಂಟು ಯೋಜನೆಗೆ ತೆಗೆದುಕೊಂಡ  ಕಾಲಾವಧಿಯನ್ನು ಲೆಕ್ಕ ಹಾಕಿದರೆ ಭಯವಾಗುತ್ತೆ!
ನಮಗೆ ಇಂದು ಬೇಕಾಗಿರುವುದು ಸಾಹಿತ್ಯ ಸಮ್ಮೇಳನ ಅಲ್ಲವೇ ಅಲ್ಲ; ಬದಲಿಗೆ ಸಂಸ್ಕೃತಿ ಸಮ್ಮೇಳನ ನಡೆಯಬೇಕು.  ಸಾಹಿತ್ಯ ಎಂದಕೂಡಲೇ ಬರುವ ಮಿತಿಗಳನ್ನು ಸಂಸ್ಕೃತಿ ಎಂದು ಕರೆಯುವುದರಿಂದ ವಾರಿಸಬಹುದು.  ಶುದ್ಧ ಸಾಹಿತ್ಯವನ್ನು ಮೀರಿ ಬೆಳೆದ ನಾಟಕ, ಸಿನೆಮಾ, ನೃತ್ಯ,ಸಂಗೀತ, ವಿeನ – ತಂತ್ರeನ, ಸಂಶೋಧನ, ಅರ್ಥಶಾಸ್ತ್ರ , ನಗರೀಕರಣ, ಇತ್ಯಾದಿ ವಿಷಯಗಳನ್ನು  ಬಹಿರಂಗವಾಗಿ ಚರ್ಚಿಸಲು ವೇದಿಕೆಯೇ ಇಲ್ಲ.  ದಿನಗಟ್ಟಳೆ ಸಾಹಿತ್ಯದ ಬಗ್ಗೆ ತೌಡು ಕುಟ್ಟುವ ಬದಲು ಮಾಹಿತಿ ಮತ್ತು ಸಂಸ್ಕೃತಿ ಸಂಬಂಧಿ ಸಾಹಿತ್ಯದ ಬಗ್ಗೆ, ಚಟುವಟಿಕೆಗಳ ಬಗ್ಗೆ, ಜನಸಮುದಾಯದ ಬದಲಾಗುತ್ತಿರುವ ಆದ್ಯತೆಗಳ ಬಗ್ಗೆ  ಚರ್ಚಿಸುವುದು ಕನ್ನಡನಾಡಿಗೆ ಉಪಯುಕ್ತ.
ಅದಿರಲಿ,ಈಗ ಹೇಳುವ ಸಾಹಿತ್ಯವನ್ನು ಓದುವವರಾರು? ಕನ್ನಡ ಪ್ರಕಾಶರನ್ನು ಒಮ್ಮೆ ಕೇಳಿನೋಡಿ:  ಇಂದು ಹೆಚ್ಚು ಮಾರಾಟವಾಗುತ್ತಿರೋದು ಸಾಹಿತ್ಯವಲ್ಲ; ಮಾಹಿತಿ ಸಾಹಿತ್ಯ ಮತ್ತು  ಆಧ್ಯಾತ್ಮ ಸಾಹಿತ್ಯ. ಈ ಪ್ರಕಾಶಕರು ಕವಿ, ಕಥೆಗಾರರು,ಕಾದಂಬರಿಕಾರರು ಎಂದರೆ ಬೆಚ್ಚಿ ಬೀಳುತ್ತಾರೆ. ಸಾವಿರ ಪ್ರತಿ ಹಾಕಿಸಿದರೆ ಅದೇ ಕನ್ನಡದ ಮಟ್ಟಿಗೆ ದೊಡ್ಡ ಕ್ರಾಂತಿ! ಅದೇ ಮಾಹಿತಿ ಸಾಹಿತ್ಯದ ಐದಾರು ಆವೃತ್ತಿಗಳು, ಮರುಮುದ್ರಣಗಳು ಪ್ರಕಟವಾಗಿವೆ; ಸಾವಿರಾರು ಪ್ರತಿಗಳು ಮಾರಾಟವಾಗಿವೆ. ಇದು ವಾಸ್ತವ. ಇದನ್ನು ಮುಚ್ಚಿಟ್ಟು ಕೋಟಿಗಟ್ಟಳೆ ರೂಪಾಯಿ ಖರ್ಚು ಮಾಡಿ ಸಾಹಿತ್ಯದ ಬಗ್ಗೆ ಚರ್ಚಿಸುವುದು ಮತ್ತು ಅದೊಂದೇ ನಮ್ಮ ಕನ್ನಡನಾಡನ್ನು ರಕ್ಷಿಸುತ್ತಿದೆಯೇನೋ ಎಂಬಂತೆ ವರ್ತಿಸುವ ಬಗ್ಗೆ  ಜಿಗುಪ್ಸೆಯಾಗುತ್ತದೆ. ಇದು ಕವಲೊಡೆದ  ಸಂಸ್ಕೃತಿಯೆಂಬ ಆನೆಯನ್ನು ಕುರುಡರು ಮುಟ್ಟಿದಂತೆ,ಅಷ್ಟೆ.
ಸಾಹಿತ್ಯ ಸಮ್ಮೇಳನಗಳನ್ನು ರದ್ದು ಮಾಡಿ ಜೀವನ – ಸಂಸ್ಕೃತಿ ಸಮ್ಮೇಳನಗಳನ್ನು ಸಂಘಟಿಸುವವರೆಗೆ ಈ ಚರ್ಚೆ ತಪ್ಪಿದ್ದಲ್ಲ.  ಕಡೇ ಪಕ್ಷ ಹಂಪಿ ವಿಶ್ವವಿದ್ಯಾಲಯವು ಹಮ್ಮಿಕೊಂಡ ಭಾಷಾ ಬೆಳವಣಿಗೆಯ ಬಹುಮುಖೀ ಕಾರ್ಯವನ್ನಾದರೂ  ಕನ್ನಡ ಸಾಹಿತ್ಯ ಪರಿಷತ್ತು ಗಮಸಿ ಅದರಂತೆ ಕಾರ್ಯಪ್ರವೃತ್ತವಾದರೂ ಸಾಕು.

ಬೇಳೂರು ಸುದರ್ಶನ

( `ಸುಧಾ'ದಲ್ಲಿ  ಪ್ರಕಟವಾದ  ಸಾಹಿತ್ಯ ಸಮ್ಮೇಳನ ಕುರಿತ ನನ್ನ ಪ್ರತಿಕ್ರಿಯೆ ಇದು)

Leave a Reply

Theme by Anders Norén